ಓಮಿಕ್ರಾನ್ ವೈರಸ್‌ನಿಂದ ಅಷ್ಟೇನು ಆತಂಕವಿಲ್ಲ. ಈ ವೈರಸ್ ವೀಕ್ ಆಗಿದ್ದು, ಇದರಿಂದ ಪ್ರಾಣಾಪಾಯವಾಗುವುದಿಲ್ಲವೆಂದು ಇಷ್ಟು ದಿನ ನಾವು ಕೇಳ್ಪಟ್ಟಿದ್ದೆವು. ಆದ್ರೆ ಓಮಿಕ್ರಾನ್ ವೈರಸ್ ತಗುಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಬ್ರಿಟನ್ ಪ್ರಜೆಯೊಬ್ಬರು ಈ ವೈರಸ್‌ಗೆ ಬಲಿಯಾಗಿದ್ದು, ಇವರು ಪ್ರಪಂಚದಲ್ಲಿ ಓಮಿಕ್ರಾನ್ ವೈರಸ್ ತಗುಲಿ ಮೃತಪಟ್ಟಿರುವ ಮೊದಲ ವ್ಯಕ್ತಿಯಾಗಿದ್ದಾರೆ.
ಡೆಲ್ಟಾ ವೈರಸ್‌ಗಿಂತಲೂ ಐದು ಪಟ್ಟು ವೇಗವಾಗಿ ಓಮಿಕ್ರಾನ್ ವೈರಸ್ ಹರಡುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಈ ಮೊದಲು ಓಮಿಕ್ರಾನ್ ವೈರಸ್‌ನಿಂದ ತೊಂದರೆ ಇಲ್ಲವೆಂದು ಹೇಳಲಾಗಿತ್ತು. ಆದ್ರೆ ಇದೀಗ ಈ ವೈರಸ್‌ನಿಂದ ಸಾವು ಸಂಭವಿಸಿದ್ದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಬ್ರಿಟನ್‌ನಲ್ಲಿ ಓಮಿಕ್ರಾನ್ ವೈರಸ್ ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತಿದೆ. ಅಲ್ಲಿನ ಆಸ್ಪತ್ರೆಗೆ ಓಮಿಕ್ರಾನ್ ವೈರಸ್ ತಗುಲಿ ದಾಖಲಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಬಗ್ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೆ ನೀಡಿದ್ದು, ಈ ಬಗ್ಗೆ ಆತಂಕ ಹೊರಹಾಕಿದ್ದಾರೆ.
ಇನ್ನು ರಾಜ್ಯದಲ್ಲಿಯೂ ಓಮಿಕ್ರಾನ್ ಹರಡುವ ಭೀತಿ ಹೆಚ್ಚಾಗಿದ್ದು, ಈಗಾಗಲೇ ಇಬ್ಬರಿಗೆ ಓಮಿಕ್ರಾನ್ ವೈರಸ್ ತಗುಲಿದೆ. ಕೊರೊನಾ ತಗುಲಿದವರ ಸಂಖ್ಯೆ ಕಡಿಮೆಯಾಗಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡವರ ಸಂಖ್ಯೆಯೂ ಹೆಚ್ಚಿದೆ. ಆದ್ರೆ ಕೊರೊನಾ ವೈರಸ್ ತಗುಲಿ ಸಾವನ್ನಪ್ಪುವವರ ಸಂಖ್ಯೆಯೂ ಹಲವಿದೆ.




