ಲಡಾಖ್ ಗಡಿಯಲ್ಲಿ ನಡೆಯುತ್ತಿರೋ ಸಂಘರ್ಷ ಸಂಬಂಧ ಚೀನಾ ಹಾಗೂ ಭಾರತ ದ್ವಿಪಕ್ಷೀಯ ಮಾತುಕತೆ ನಡೆಸಿತು. ಈ ವೇಳೆ ಮಾತನಾಡಿದ ವಿದೇಶಾಂಗ ಖಾತೆ ಸಚಿವ ಎಸ್. ಜೈಶಂಕರ್ ಚೀನಾ ಗಡಿಯಲ್ಲಿ ಕೈಗೊಳ್ಳಲಾದ ಎಲ್ಲ ಒಪ್ಪಂದಗಳನ್ನ ಉಲ್ಲಂಘಿಸಿದೆ ಅಂತಾ ಹೇಳಿದ್ರು.

ಮಾಸ್ಕೋದಲ್ಲಿ ಚೀನಾದ ವಾಂಗ್ ಯೀ ಜೊತೆ ಮಾತುಕತೆ ನಡೆಸಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಚೀನಾ ಸೇನೆಯ ಉದ್ಧಟತನಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರು. ಚೀನಾದ ಸೇನೆ ಪದೇ ಪದೇ ಗಡಿ ರೇಖೆಯ ಒಪ್ಪಂದಗಳನ್ನ ಉಲ್ಲಂಘಿಸುತ್ತಿದೆ. ಗಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸೇನೆಯನ್ನ ನಿಯೋಜಿಸೋ ಮೂಲಕ ಚೀನಾ ಸೇನೆ 1993 ಹಾಘೂ 1996ರ ಒಪ್ಪಂದಗಳನ್ನ ಉಲ್ಲಂಘಿಸಿದೆ. ಹಾಗೂ ಈ ರೀತಿ ಸೇನೆ ನಿಯೋಜನೆ ಮಾಡಿರೋ ಬಗ್ಗೆ ಚೀನಾದಿಂದ ವಿಶ್ವಾಸಾರ್ಹ ವಿವರಣೆ ಸಿಕ್ಕಿಲ್ಲ ಅಂತಾ ಹೇಳಿದ್ರು.
ಸುಮಾರು 2 ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ ಉಭಯ ರಾಷ್ಟ್ರಗಳು ಗಡಿಯಲ್ಲಿನ ಒಪ್ಪಂದಗಳನ್ನ ಪಾಲಿಸಿದ್ರೆ ಮಾತ್ರ ದೇಶಕ್ಕೆ ಒಳಿತು ಅಂತಾ ಭಾರತ ಚೀನಾಗೆ ಕಿವಿಮಾತು ಹೇಳಿದೆ.

ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278