ಗಡಿಯಲ್ಲಿ ಕ್ಯಾತೆ ತೆಗೆದಿರೋ ಚೀನಾಗೆ ಭಾರತ ಈಗಾಗಲೇ ಸಾಕಷ್ಟು ರೀತಿಯಲ್ಲಿ ಪಾಠ ಕಲಿಸಿದೆ. ಗಡಿಯಲ್ಲೂ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿರೋ ಭಾರತ ಉದ್ಯಮ ಕ್ಷೇತ್ರದಲ್ಲೂ ಚೀನಾಗೆ ಭಾರೀ ಪೆಟ್ಟು ನೀಡಿದೆ.

ಭಾರತದಲ್ಲಿ ಚೀನಾ ಆಪ್ ಬ್ಯಾನ್ನಿಂದ ಆರ್ಥಿಕ ಹೊಡೆತ ತಿಂದಿದ್ದ ಡ್ರ್ಯಾಗನ್ ರಾಷ್ಟ್ರಕ್ಕೆ ಇದೀಗ ಭಾರತೀಯ ಮೂಲದ ಗಾರ್ಮೆಂಟ್ ಕಂಪನಿಗಳು ಠಕ್ಕರ್ ನೀಡಿವೆ. ವಿಶ್ವದ ದೊಡ್ಡ ಗಾರ್ಮೆಂಟ್ ಕಂಪನಿಗಳ ಟೆಂಡರ್ಗಳನ್ನ ಪಡೆಯುವಲ್ಲಿ ಭಾರತೀಯ ಕಂಪನಿ ಯಶಸ್ವಿಯಾಗಿದೆ.
ಜರ್ಮನ್ ಮೂಲದ ಮಾರ್ಕೋಪೋಲೋ, ಕಾರ್ಟರ್ ಸೇರಿದಂತೆ ವಿವಿಧ ಕಂಪನಿಗಳು ಚೀನಾಗೆ ನೀಡಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಟೆಂಡರ್ನ್ನ ಭಾರತಕ್ಕೆ ನೀಡಿದೆ.ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರೋ ಮಾರ್ಕೋಪೋಲೋ ಕಂಪನಿ ,ಈ ಹಿಂದೆ ಚೀನಾಗೆ ನಾವು ಟೆಂಡರ್ ನೀಡಿದ್ದೆವು. ಈ ಭಾರಿ ಭಾರತೀಯ ಗಾರ್ಮೆಂಟ್ ಕಂಪನಿಗೆ ಜೆರ್ಸಿ ತಯಾರಿಸಲು ಕೋಟ್ಯಂತರ ರೂಪಾಯಿ ಮೌಲ್ಯದ ಟೆಂಡರ್ ನೀಡಿದ್ದೇವೆ. ಈ ಪ್ರಾಜೆಕ್ಟ್ನಲ್ಲಿ ಇಂಡಿಯನ್ ಗಾರ್ಮೆಂಟ್ಸ್ ಕಂಪನಿ ಯಶಸನ್ನ ಕಂಡ್ರೆ ವಾರ್ಷಿಕ ಟೆಂಡರ್ನ್ನೂ ಭಾರತಕ್ಕೇ ನೀಡುತ್ತೇವೆ ಅಂತಾ ಹೇಳಿದೆ.
ಭಾರತೀಯ ಮೂಲದ ಗಾರ್ಮೆಂಟ್ ಕಂಪನಿಗಳಿಗೆ ಇದು ಶುಭ ಸುದ್ದಿಯಾಗಿದ್ದು ಈ ಟೆಂಡರ್ನಲ್ಲಿ ಭಾರತ ಯಶಸ್ಸನ್ನ ಕಂಡ್ರೆ ವಿಶ್ವದ ದೊಡ್ಡ ಕಂಪನಿಗಳು ನಮ್ಮ ದೇಶದತ್ತ ಮುಖ ಮಾಡಲಿವೆ.

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.