ಮಾಸ್ತಿ ಪೊಲೀಸರು ಬೈಕ್ ಸವಾರರಿಗೆ ಖಡಕ್ ಆಗಿ ಬಿಸಿ ಮುಟ್ಟಿಸಿದ್ದಾರೆ. ಹಲವು ದಿನಗಳಿಂದ ಮಾಸ್ತಿ ಸುತ್ತಮುತ್ತಲು ಹಲವು ಬೈಕ್ ಗಳು ಕಳುವಾಗುತ್ತಿದ್ದವು.ಈ ಸಂಬಂಧ ಮಾಸ್ತಿ ಪೊಲೀಸ್ ಠಾಣೆಗೆ ಹಲವು ಬಾರಿ ದೂರುಗಳು ಬಂದಿತ್ತು.

ದಾಖಲೆಗಳು ಇಲ್ಲದೆ ನೂರಾರು ಬೈಕ್ ಗಳು ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದವು. ಇವುಗಳನ್ನು ಮಟ್ಟ ಹಾಕಲು ಮಾಸ್ತಿ ಪೊಲೀಸರು ನಂಬರ್ ಪ್ಲೆಟ್ ಇಲ್ಲದ ಹಾಗೂ ಅನುಮಾನಸ್ಪದವಾಗಿ ಕಂಡು ಬಂದ ಸುಮಾರು ಬೈಕ್ ಗಳನ್ನು ತಮ್ಮ ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲಿಸಿದ್ರು. ಸರಿಯಾದ ದಾಖಲೆಗಳು ಇದ್ದ ಬೈಕ್ ಗಳನ್ನು ಮಾಲೀಕರ ವಶಕ್ಕೆ ನೀಡಿದ್ರು. ದಾಖಲೆಗಳು ಇಲ್ಲದ ಬೈಕ್ ಗಳನ್ನು ಸೀಜ್ ಮಾಡಿದ್ರು. ಪೊಲೀಸರು ರಸ್ತೆಗಿಳಿದಿದ್ದನ್ನು ಕಂಡ ಹಲವು ಬೈಕ್ ಸವಾರರು ಜಾಗದಿಂದ ಖಾಲಿ ಮಾಡಿದರು. ನಂಬರ್ ಪ್ಲೇಟ್ ಇಲ್ಲದ ಬೈಕ್ ಹೊಂದಿದ್ದ ಸವಾರರಿಗೆ ಪೊಲೀಸರು ದಂಡ ವಿಧಿಸಿದ್ರು.
ನಾಗೇಶ್ ಹುಳದೇನಹಳ್ಳಿ ಕರ್ನಾಟಕ ನ್ಯೂಸ್ ಕೋಲಾರ





