ಸದ್ಯಕ್ಕೆ ಐಪಿಎಲ್ ಹಬ್ಬ ಜೋರಾಗಿದೆ. ಕನ್ನಡಿಗರು ಈ ಸಲಾ ಕಪ್ ನಂದೇ ಅಂತಿದ್ದಾರೆ. ಆರ್‌ಸಿಬಿ, ಸಿಎಸ್‌ಕೆ, ಮುಂಬೈ ಇಂಡಿಯನ್, ರಾಜಸ್ತಾನ ರಾಯಲ್ಸ್ ಸೇರಿ ಎಲ್ಲರೂ ದುಬೈನಲ್ಲಿ ನಡೆಯುತ್ತಿರುವ ಆಟದಲ್ಲಿ ಭಾಗವಹಿಸಿದ್ದಾರೆ. ಇನ್ನು ಸಿಎಸ್‌ಕೆ ತಂಡ ಈ ಬಾರಿ ಕಳಪೆ ಪ್ರದರ್ಶನ ನೀಡಿದೆ. ಈ ಸಿಟ್ಟಿನಲ್ಲಿ 16 ವರ್ಷದ ಬಾಲಕ ಧೋನಿ ಮಗಳು ಜೀವಾಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ್ದ.
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗಿತ್ತು. ಹಲವರು ನಮ್ಮ ದೇಶದ ನೀತಿ ನಿಯಮಗಳ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಎಂಥ ದೇಶದಲ್ಲಿ ನಾವು ಬದುಕುತ್ತಿದ್ದೇವೆ. ಇಂಥ ಹೇಳಿಕೆ ಕೊಡುವವರಿಗೆ ಸುಮ್ಮನೆ ಬಿಟ್ಟರೆ ಹೇಗೆ ಎಂದು ಸಿಟ್ಟಿಗೆದ್ದಿದ್ದರು. ಆದ್ರೆ ಇಂದು ಜೀವ ಬೆದರಿಕೆ ಹಾಕಿದ್ದ ಬಾಲಕನನ್ನು ಬಂಧಿಸಲಾಗಿದೆ.
ಧೋನಿ ಪತ್ನಿ ಸಾಕ್ಷಿ ಇನ್‌ಸ್ಟಾಗ್ರಾಮ್ ಖಾತೆಗೆ ಈ ಬೆದರಿಕೆ ಬಂದಿತ್ತು. ಹಾಗಾಗಿ ಸಾಕ್ಷಿ ರಾಂಚಿ ಪೋಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಪೊಲೀಸರು ಸದ್ಯ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತ ಬಾಲಕ ಗುಜರಾತ್‌ನ ಕಛ್ ಸಮೀಪದ ಮುಂದ್ರಾ ಗ್ರಾಮದ ನಿವಾಸಿಯಾಗಿದ್ದು, ಪಿಯುಸಿ ಓದುತ್ತಿದ್ದಾನೆ ಎನ್ನಲಾಗಿದೆ.




