Saturday, July 27, 2024

Latest Posts

ಮಂಡ್ಯ ಎಲೆಕ್ಷನ್‌ಗೆ ಭರದ ಸಿದ್ಧತೆ: ಹೆಸರು ಸೇರ್ಪಡೆಗೆ ಏಪ್ರಿಲ್ 11 ಕೊನೆ ದಿನ

- Advertisement -

 ಮಂಡ್ಯ: 18 ವರ್ಷ ತುಂಬಿದ ಯುವ ಮತದಾರರು ಹಾಗೂ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ  ಹೆಸರು ಸೇರ್ಪಡೆಗೆ ಏಪ್ರಿಲ್ 11 ಕೊನೆ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಏಪ್ರಿಲ್ 11 ರೊಳಗೆ ಅರ್ಹ ಮತದಾರರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೆ ನಮೂನೆ 6 ಅಥವಾ ಆಲ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿದರೆ 7 ದಿನಗಳೊಳಗೆ ಮತದಾರರ ಗುರುತಿನ ಚೀಟಿ ಅಂಚೆ ಮೂಲಕ ನಿಮ್ಮ ಮನೆಗೆ ಬರಲಿದೆ ಎಂದು ಮಾಹಿತಿ ನೀಡಿದರು.

2022 ನವೆಂಬರ್ 15ರ ನಂತರ ಹೊಸದಾಗಿ ಸೇರ್ಪಡೆಯಾಗಿರುವ 66,981 ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಒದಗಿಸಿದ್ದು, ಈ ಪೈಕಿ 53,656 ಗುರುತಿನ ಚೀಟಿ ಸರಬರಾಜಾಗಿದ್ದು, ಗುರುತಿನ ಚೀಟಿಯನ್ನು ಅಂಚೆ ಮೂಲಕ ವಿತರಿಸಲು ಕ್ರಮವಹಿಸಲಾಗಿದೆ, ವಿಳಂಬವಾದ ಮತದಾರರು ತಮ್ಮ ವ್ಯಾಪ್ತಿಯ ಅಂಚೆ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮಂಡ್ಯ ಜಿಲ್ಲಾ ವ್ಯಾಪ್ತಿಯಾದ್ಯಾಂತ ಒಟ್ಟು 14 PINK ಮತಗಟ್ಟೆ, 7 PWD ಮತಗಟ್ಟೆ, 35 ETHNIC ಮತಗಟ್ಟೆ, 14 YOUNG EMPLOYEE MANAGED ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಈ ವರೆಗೂ 07 ಮಂದಿಯನ್ನು ಗಡಿಪಾರು ಮಾಡಲಾಗಿದೆ ಹಾಗೂ 667 ಆಯುಧಗಳನ್ನು ಠಾಣಾ ಸುಪರ್ದಿಗೆ ಪಡೆಯಲಾಗಿರುತ್ತದೆ. ಎಲ್ಲಾ ಚೆಕ್ ಪೋಸ್ಟ್‍ಗಳಿಗೆ ವೆಬ್ ಕಾಸ್ಟಿಂಗ್ ಅಳವಡಿಸಲಾಗಿದ್ದು, ಅಗತ್ಯ ಇರುವ ಕಡೆ CAPFತಂಡದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆ ಘೋಷಣೆಯಾದ ನಂತರ ಮಾರ್ಚ್ 29 ರಿಂದ ಏಪ್ರಿಲ್ 10 ರವರೆಗೆ ವಶಪಡಿಸಿಕೊಳ್ಳÀಲಾದ ನಗದು ರೂ, 37,71,600, ಮಧ್ಯ 19,190.02 ಲೀಟರ್ ಒಟ್ಟು ಮೌಲ್ಯ ರೂ. 49,68,072, ಡ್ರಗ್ಸ್ 0.555ಗ್ರಾಂ ಒಟ್ಟು ಮೌಲ್ಯ ರೂ.5,550 ಹಾಗೂ ಇತರೆ ಪದಾರ್ಥಗಳು 22,009 ಮೌಲ್ಯ ರೂ 25,08,170 ಒಟ್ಟಾರೆ ಮೇಲ್ಕಂಡ ನಗದು ಹಾಗೂ ವಸ್ತುಗಳ ಮೌಲ್ಯವು ರೂ.1,12,53,392 ಆಗಿರುತ್ತದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 80ವರ್ಷ ಮೇಲ್ಪಟ್ಟ 37,414 ಹಾಗೂ  ವಿಶೇಷ ಚೇತನರು 23,110 ಅಂಗವಿಕಲ ಮತದಾರರಿಗೆ 80ವರ್ಷ ಮೇಲ್ಪಟ್ಟ ಮತದಾರರಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ 12ಡಿ ನಮೂನೆಯನ್ನು ವಿತರಣೆಮಾಡಲಾಗುತ್ತಿದ್ದು, ಇವರೆಗೂ 60524 ನಮೂನೆ 12 ಡಿ ಯನ್ನು ವಿತರಣೆ ಮಾಡಲಾಗಿದೆ ಎಂದರು.

ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಯಲ್ಲಿಯೂ ವಿಧಾನಸಭಾ ಕ್ಷೇತ್ರದ ಸಂಖ್ಯೆ, ಮತಗಟ್ಟೆ ಹೆಸರು, ಮತಗಟ್ಟೆ ವಿಳಾಸ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಯ ವಿಳಾಸವನ್ನು ಮತದಾನ ಕೇಂದ್ರದಲ್ಲಿ ನಮೂದಿಸಲು ನಿರ್ದೇಶನ ನೀಡಲಾಗಿದ್ದು ಪ್ರಕ್ರಿಯೆ ಮುಕ್ತಾಯದ ಹಂತದಲ್ಲಿದೆ.  ಮಂಡ್ಯ ಜಿಲ್ಲೆಯಲ್ಲಿ ಒಟ್ಟು 1798 ಮತಗಟ್ಟೆಗಳಿದ್ದು ಪ್ರತಿ ಮತಗಟ್ಟೆಗೂ 01 ಅಧಕ್ಷ ಅಧಿಕಾರಿ ಮತ್ತು 03 ಮತದಾನ ಅಧಿಕಾರಿಗಳು ಸೇರಿದಂತೆ ಒಟ್ಟು 8648 ಅಧಿಕಾರಿ/ ಸಿಬ್ಬಂದಿಗಳನ್ನು ವಿಧಾನಸಭಾ ಕ್ಷೇತ್ರವಾರು ನೇಮಕಾತಿ ಮಾಡಲಾಗಿದೆ.

ಅಧಿಕಾರಿಗಳಿಗೆ ಏಪ್ರಿಲ್ 18 ರಂದು ಪ್ರಥಮ ಹಂತದ ತರಬೇತಿಯನ್ನು (ಚುನಾವಣಾ ಪ್ರಕ್ರಿಯೆ ಹಾಗೂ ಇ.ವಿ.ಎಂ. ಮತಯಂತ್ರಗಳ ಬಳಕೆ) ವಿವಿಧ ಕಾಲೇಜುಗಳಲ್ಲಿ ಆಯೋಜಿಸಲಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಂ.ಬಾಬು ಉಪಸ್ಥಿತರಿದ್ದರು.

‘ಹೈಕಮಾಂಡ್ ಜೊತೆ ಮಾತನಾಡಿ ಟಿಕೇಟ್ ಕೊಟ್ಟೇ ಕೊಡಿಸುತ್ತೇವೆ. ಗೆಲ್ಲಿಸುವುದು ನಿಮ್ಮ ಕೆಲಸ’

‘ಬಿಜೆಪಿಯವರು ಊರೂರಿಗೆ ಬಾರ್ ಕೊಟ್ಟಿದ್ದೇ ಸಾಧನೆ’

‘ನಾವು ಕೊಟ್ಟ ಭರವಸೆ ಈಡೇರಿಸಲು ಆಗದಿದ್ದರೆ ಒಂದು ಸೆಕೆಂಡ್ ಕೂಡ ಅಧಿಕಾರದಲ್ಲಿ ಇರಲ್ಲ’

- Advertisement -

Latest Posts

Don't Miss