Friday, July 11, 2025

Latest Posts

ಪಾಕಿಸ್ತಾನದ ಕರಾಚಿ ಸ್ಟಾಕ್ ಎಕ್ಸ್‌ಚೇಂಜ್ ಮೇಲೆ ಭಯೋತ್ಪಾದಕ ದಾಳಿ: ನಾಲ್ವರ ಸಾವು

- Advertisement -

ಪಾಕಿಸ್ತಾನದ ಕರಾಚಿ ಸ್ಟಾಕ್ ಎಕ್ಸ್‌ಚೇಂಜ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. 7 ಜನರು ಗಾಯಗೊಂಡಿದ್ದಾರೆ.

ವರದಿ ಪ್ರಕಾರ ಇಂದು ಬೆಳಿಗ್ಗೆ ಸ್ಟಾಕ್‌ ಎಕ್ಸ್‌ಚೇಂಜ್ ಮೇಲೆ ನಾಲ್ವರು ಗನ್‌ಮ್ಯಾನ್‌ಗಳು ದಾಳಿ ನಡೆಸಿದ್ದು, ಸ್ಥಳದಲ್ಲೇ ಇಬ್ಬರು ಭಯೋತ್ಪಾಕರು ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ.

ಅಲ್ಲದೇ, ಸಾವನ್ನಪ್ಪಿದವರಲ್ಲಿ ಮೂವರು ಸೆಕ್ಯೂರಿಟಿ ಗಾರ್ಡ್ ಮತ್ತು ಓರ್ವ ಪೊಲೀಸ್ ಆಫೀಸರ್ ಇದ್ದರೆನ್ನಲಾಗಿದೆ. ಗಾಯಗೊಂಡ ಏಳು ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ದಾಳಿ ನಡೆಸಲು ಬಂದ ಭಯೋತ್ಪಾದಕರು ಹ್ಯಾಂಡ್ ಗ್ರ್ಯಾನೆಡ್ ಹಿಡಿದು ಬಂದಿದ್ದರೆಂಬ ಮಾಹಿತಿ ಇದೆ.

ಇನ್ನು ಭಯೋತ್ಪಾದಕರು ಕರಾಚಿಯ ಹೃದಯ ಭಾಗದಲ್ಲಿರುವ ಸ್ಥಳಕ್ಕೆ ಭೇಟಿ ನೀಡಿದ್ದು, ಆ ಸ್ಥಳದಲ್ಲಿ ಹಲವು ದೊಡ್ಡ ದೊಡ್ಡ ಕಂಪನಿಗಳಿದ್ದವು ಎನ್ನಲಾಗಿದೆ. ಇದನ್ನು ಗುರಿಯಾಗಿಸಿಕೊಂಡೇ ಭಯೋತ್ಪಾದಕರು ಈ ನೀಚ ಕೃತ್ಯ ಎಸಗಿದ್ದಾರೆನ್ನಲಾಗಿದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

- Advertisement -

Latest Posts

Don't Miss