ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಜಾಲ ಪ್ರಕರಣ ಸಂಬಂಧ ಸದ್ಯ ಸಿಸಿಬಿ ಕಚೇರಿಯಲ್ಲಿರೋ ಚಂದನವನದ ತುಪ್ಪದ ಬೆಡಗಿ ರಾಗಿಣಿಗೆ ಸಿಸಿಬಿ ವಿಚಾರಣೆ ಬಿಸಿಕೆಂಡವಾಗಿ ಪರಿಣಮಿಸಿದೆ.
ಯಲಹಂಕದಲ್ಲಿರುವ ರಾಗಿಣಿ ಫ್ಲಾಟ್ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳು ನಟಿಯನ್ನ ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕೊಂಡೊಯ್ದಿದ್ದರು. ಈ ವೇಳೆ ವಿಕ್ಟರಿ ಸಿಂಬಲ್ ತೋರಿಸಿ ಕಾರ್ ಹತ್ತಿದ್ದ ರಾಗಿಣಿ ಇದೀಗ ಸಿಸಿಬಿ ಕೇಳ್ತಿರೋ ಪ್ರಶ್ನೆಗಳಿಂದ ಸುಸ್ತಾಗಿ ಹೋಗಿದ್ದಾರೆ ಎನ್ನಲಾಗಿದೆ.
ಕಚೇರಿಗೆ ಕಾಲ್ತಿಡ್ತಾ ಇದ್ದಂತೆ ಅಧಿಕಾರಿಗಳ ಬಳಿ ರಾಗಿಣಿ 10 ನಿಮಿಷಗಳ ಸಮಾಯವಕಾಶ ಕೇಳಿದ್ದಾರೆ. ನಟಿ ಮನವಿಯಂತೆ ಸಮಯಾವಕಾಶ ನೀಡಿದ ಅಧಿಕಾರಿಗಳು ಬಳಿಕ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ನೀವು ಮಾತ್ರ ಗಾಂಜಾ ಸೇವನೆ ಮಾಡ್ತಿದ್ರಾ..? ನಿಮ್ಮ ಸ್ನೇಹಿತರಿಗೂ ಗಾಂಜಾ ಹಂಚಿಕೆ ಮಾಡಿದ್ದೀರಾ ಸೇರಿದಂತೆ ಒಟ್ಟು 40 ಪ್ರಶ್ನೆಗಳನ್ನ ರಾಗಿಣಿಗೆ ಕೇಳಿದ್ದಾರೆ ಅಂತಾ ಮೂಲಗಳು ತಿಳಿಸಿವೆ.