ತುಮಕೂರು: ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಶಾರದ ವಿದ್ಯಾಪೀಠ ಬಳಿ ನಿತ್ಯ ನಾಟಿ ಔಷಧಿ ಮಾರಾಟ ಮಾಡಲಾಗುತ್ತಿದೆ. ಒಂದು ಕಡೆ ತುಮಕೂರು ಜಿಲ್ಲೆಯಲ್ಲಿ ಕರೋನಾ ಹೆಮ್ಮಾರಿ ಅಟ್ಟಹಾಸಗೈಯುತ್ತಿದೆ. ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಇದೇ ಸಂದರ್ಭವನ್ನು ಬಳಸಿಕೊಂಡ ಕೆಲ ದುಷ್ಟರು ನಾಟಿ ಔಷಧಿ ಹೆಸರಲ್ಲಿ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ.

ಮಾಲಿನಮ್ಮ, ಅಲಿ, ದಾದೂ ಎಂಬುವವರು ಬಾಳೆ ಹಣ್ಣಿನಲ್ಲಿ ನಾಟಿ ಔಷಧಿ ಮಾಡಿಕೊಡುವುದಾಗಿ ಹೇಳಿ ಈ ಔಷಧಿ ಸೇವನೆಯಿಂದ ಯಾವುದೇ ಸಾಂಕ್ರಾಮಿಕ ರೋಗಗಳು ಹತ್ತಿರ ಸುಳಿಯೋದಿಲ್ಲ ಎಂದು ನಂಬಿಸಿ ವಂಚಿಸುತ್ತಿದ್ದಾರೆ. ಈ ತಂಡದ ನಾಯಕ ಹಾಲಿ ಪ್ರಶ್ನಿಸಲು ಬಂದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾನೆ. ಇನ್ನು ಇದನ್ನು ಕೇಳಲು ಹೋದ ಸಾರ್ವಜನಿಕರ ಮೇಲೂ ವಾಗ್ದಾಳಿ ನಡೆಸಿದ್ದಾರೆ. ಅಧಿಕೃತವಲ್ಲದ ಈ ನಾಟಿ ಔಷಧಿಯನ್ನು ಪಾವಗಡದ ಸಾವಿರಾರು ಮಂದಿ ಪಡೆಯುತ್ತಿದ್ದಾರೆ. ಇನ್ನು ಈ ಬಗ್ಗೆ ತಹಶೀಲ್ದಾರ್, ತಾಲ್ಲೂಕು ವೈದ್ಯಾಧಿಕಾರಿಗಳಿಗೆ ದೂರು ನೀಡಿದ್ರೂ ತಲೆಕೆಡಿಸಿಕೊಂಡಿಲ್ಲ. ಔಷಧಿಗಾಗಿ ಪಕ್ಕದ ಆಂಧ್ರದಿಂದ ಸಾವಿರಾರು ಜನ ನಿತ್ಯ ಬರ್ತಾರೆ.
ಈ ವೇಳೆ ಯಾರೂ ಕೂಡಾ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ತಾಲೂಕು ಆರೋಗ್ಯಾಧಿಕಾರಿ ಮಂತ್ಲಿ ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕೊರೋನಾ ಹರಡುತ್ತೆ ಎಂಬ ಆತಂಕದಲ್ಲಿ ಪಾವಗಡ ಜನತೆ ಇದ್ದಾರೆ. ಇನ್ನು ಈ ಬಗ್ಗೆ ಸಿದ್ದಲಿಂಗೇಗೌಡ ಎಂಬುವವರು ಪ್ರಾದೇಶಿಕ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿದ್ದು ತುಮಕೂರು ಜಿಲ್ಲಾಧಿಕಾರಿಗಳಿಗೆ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ.
ಕಾಂತರಾಜು, ಕರ್ನಾಟಕ ಟಿವಿ, ತುಮಕೂರು

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.