ಡಮರುಗ ರಂಗ ಸಂಪನ್ಮೂಲ ಕೇಂದ್ರ. ಇದರ ಆಯೋಜಕರಾದ ಡಮರುಗ ಉಮೇಶ ಅವರಿಂದ ಬಿತ್ತರಿಸಿದ ಕೊರೋನಾ ಮುಕ್ತ ರಂಗ ನಾಟಕ ಮಹಾ ಭಾರತದ ಭೀಮ ಮತ್ತು ದುರ್ಯೋಧನ ಕಾಳಗ ಸರೋವರದಲ್ಲಿ ಅಡಗಿಕೊಂಡಿರುವ ದೃಶ್ಯ “ವ್ಯೆಶಂಪಾಯನ ಸರೋವರದಲ್ಲಿ” ರಂಗ ನಾಟಕ ರೂಪದಲ್ಲಿ ಬಿತ್ತರಗೊಂಡು ಕೊರೋನಾ ಮುಕ್ತ ಭಾರತವನ್ನಾಗಿಸಲು ಅರಿವು ಮೂಡಿಸಿದರು.

ಈ ಸಮಯದಲ್ಲಿ ಕೊರೋನಾ ಮುಕ್ತ ವಾಗಿಸಲು ರಂಗಮಾಲಿಕೆಗೆ ಸಹಕರಿಸಿದ ಹಾಗೂ ಶ್ರಮಿಸಿದ 15 ಮಂದಿ ಆಶಾ ಕಾರ್ಯಕರ್ತೆಯರಿಗೆ ಮತ್ತು ವ್ಯೆದ್ಯರಿಗೆ ಸನ್ಮಾನಿಸಿ ಗೌರವಿಸಿದರು.
ಸದರಿ ವೇಳೆಯಲ್ಲಿ ಕೊರೋನಾ ಸೋಂಕಿಗೆ ಯಾವುದೇ ಲಸಿಕೆ ಇಲ್ಲ ಕೊರೋನಾ ಬಾರದಂತೆ ತಡೆಯಲು ಪದೇ ಪದೇ ಸಾಬೂನಿನಿಂದ ಕೈ ಸ್ವಚ್ಚಗೊಳಿಸಿ ಸ್ಯಾನಿಟೈಸರ್ ಬಳಸಿ ಮಾಸ್ಕ ಅನ್ನು ಬಳಸುವುದರಿಂದ ಕೊರೋನಾ ವೈರಸ್ ಅನ್ನು ತಡೆಗಟ್ಟಲು ಸಾಧ್ಯ ಎಂದು ವೈದ್ಯರು ಸಲಹೆ ನೀಡಿದರು.
ಕೆ.ರಾಜು,ಕರ್ನಾಟಕ ಟಿವಿ ತುಮಕೂರು.




