Technology News:
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಪ್ರಿಯರಿಗೆ ಇದೊಂದು ಸಂತಸದ ವಿಚಾರವಾಗಿದೆ. ಹೊಸದೊಂದು ಸ್ಕೂಟರ್ ಬಿಡುಗಡೆ ಮಾಡಿ ಇದೀಗ ಸುದ್ದಿಯಲ್ಲಿದೆ.ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಓಲಾ ಎಲೆಕ್ಟ್ರಿಕ್ ಭಾರತದಲ್ಲಿ ಹೊಸ S1 EV ಅನ್ನು ಬಿಡುಗಡೆ ಮಾಡಿದೆ. ಅದರ ಎಕ್ಸ್ ಶೋ ರೂಂ ಬೆಲೆಯನ್ನು 99,999 ರೂ. ಎಂದು ನಿಗದಿ ಮಾಡಿದೆ. ಹೊಸ Ola S1 ಎಲೆಕ್ಟ್ರಿಕ್ ಸ್ಕೂಟರ್ S1 Pro ಅನ್ನು ಹೋಲುತ್ತದೆ ಮತ್ತು ಆಗಸ್ಟ್ 15 ಮತ್ತು ಆಗಸ್ಟ್ 31 ರ ನಡುವೆ ಕೇವಲ 499 ರೂ. ಪಾವತಿಸಿ ಈ ಸ್ಕೂಟರ್ ಅನ್ನು ಬುಕ್ ಮಾಡಬಹುದು. ಹೊಸ Ola S1 ಖರೀದಿಯು ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಲಿದ್ದು, ಎಲೆಕ್ಟ್ರಿಕ್ ಸ್ಕೂಟರ್ನ ವಿತರಣೆಯು ಸೆಪ್ಟೆಂಬರ್ 7 ರಿಂದ ನಡೆಯಲಿದೆ. ಮಾರುಕಟ್ಟೆಯಲ್ಲಿ ಇದು ಅಥರ್ 450X, ಸಿಂಪಲ್ ಒನ್ TVS iQube ಮತ್ತು Okinawa Okhi 90 ನಂತಹ ಎಲೆಕ್ಟ್ರಿಕ್ ಸ್ಕೂಟರ್ಗಳೊಂದಿಗೆ ಸ್ಪರ್ಧಿಸಲಿದೆ.
ಹೊಸ 2.98kWh ಬ್ಯಾಟರಿ ಪ್ಯಾಕ್ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿ.ಮೀ. ಹೊಸ Ola S1 ಒಂದೇ ಚಾರ್ಜ್ನಲ್ಲಿ 141 ಕಿಮೀ ವ್ಯಾಪ್ತಿಯನ್ನು ತಲುಪಲಿದೆ ಎಂದು ಹೇಳಲಾಗುತ್ತಿದೆ. ಹೊಸ S1 ಮ್ಯೂಸಿಕ್ ಪ್ಲೇಬ್ಯಾಕ್, ನ್ಯಾವಿಗೇಷನ್, ಕಂಪ್ಯಾನಿಯನ್ ಅಪ್ಲಿಕೇಶನ್ ಮತ್ತು ರಿವರ್ಸ್ ಮೋಡ್ ನಂತಹ MoovOS ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ Ola S1 ಎಲೆಕ್ಟ್ರಿಕ್ ಸ್ಕೂಟರ್ S1 Pro ನಂತೆಯೇ ಕಾಣುತ್ತದೆ, ವಿನ್ಯಾಸದ ಅಂಶಗಳು ಬಹುಮಟ್ಟಿಗೆ ಒಂದೇ ಆಗಿರುತ್ತವೆ. ಇದು ಜೆಟ್ ಬ್ಲಾಕ್, ಲಿಕ್ವಿಡ್ ಸಿಲ್ವರ್, ಮತ್ತು ನಿಯೋ ಮಿಂಟ್ ಎಂಬ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ.
ತಿಂಗಳ ಅಂತ್ಯದ ವೇಳೆಗೆ ಬೆಂಗಳೂರಲ್ಲೂ ಸಿಗಲಿದೆಯಾ ಮೊದಲ ಹಂತದ 5ಜಿ ಸೇವೆ..?!