Political News: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ನಿನ್ನೆ ಪ್ಯಾಲೇಸ್ತಿನ್ ಎಂದು ಬರೆದಿರುವ ಬ್ಯಾಗ್ ಹಿಡಿದು ಸಂಸತ್ತಿಗೆ ಹೋಗಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಕಾರಣಕ್ಕೆ ಪಾಕಿಸ್ತಾನದ ರಾಜಕಾಾರಣಿಯೊಬ್ಬರು ಪ್ರಿಯಾಂಕಾಳನ್ನು ಹೊಗಳಿದ್ದಾರೆ.
ಪಾಕಿಸ್ತಾನ ಮಾಜಿ ಸಚಿವ ಫವಾದ್ ಹಸನ್ ಚೌಧರಿ ಎಂಬುವವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಜವಹರ್‌ಲಾಲ್ ಅವರಂಥ ಮಹಾನ್ ಸ್ವಾತಂತ್ರ್ಯಗಾರರ ಮೊಮ್ಮಗಳಿಂದ ಮತ್ತೇನನ್ನು ನೀರಿಕ್ಷಿಸಲು ಸಾಧ್ಯ ಎಂದು ಚೌಧರಿ ಬರೆದುಕೊಂಡಿದ್ದಾರೆ.
ಪ್ರಿಯಾಂಕಾ ಗಾಂಧಿ ಹಾಕಿಕೊಂಡಿದ್ದ ಬ್ಯಾಗ್‌ನಲ್ಲಿ ಪ್ಯಾಲೇಸ್ತಿನ್ ಎಂದು ಬರೆದಿದ್ದು, ಕಲ್ಲಂಗಡಿ ಹಣ್ಣಿನ ಚಿತ್ರವಿತ್ತು. ಇದು ಪ್ಯಾಲೇಸ್ತಿನ್ ಒಗ್ಗಟ್ಟಿನ ಸಂಕೇತವಾಗಿದೆ. ಪ್ರಿಯಾಂಕಾ ಗಾಂಧಿ ಇಸ್ರೇಲ್ ವಿರುದ್ಧದ ಪ್ಯಾಲೇಸ್ತಿನ್ ಹೋರಾಾಟಕ್ಕೆ ಬೆಂಬಲ ಸೂಚಿಸಿ, ಈ ರೀತಿ ಬ್ಯಾಗ್ ಧರಿಸಿ ಬಂದಿದ್ದರು ಎಂದು ಹಲವರು ಹೇಳುತ್ತಿದ್ದಾರೆ. ಈ ಬಗ್ಗೆ ಭಾರತದಲ್ಲಿ ಅಷ್ಟೇ ಅಲ್ಲದೇ, ಪಾಕಿಸ್ತಾನದಲ್ಲೂ ಚರ್ಚೆ ಹುಟ್ಟು ಹಾಕಿದೆ.