Technology News:
ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಯಾದ ಮೂರು ವರ್ಷಗಳ ನೆನಪಿಗಾಗಿ, ಟಾಟಾ ಪರಿಷ್ಕೃತ ಬೆಲೆಗಳೊಂದಿಗೆ ಹೆಚ್ಚಿನ ರೇಂಜ್ ನೊಂದಿಗೆ ಬಿಡುಗಡೆಗೊಳಿಸಿದೆ. ಅಲ್ಲದೇ ಇತ್ತೀಚೆಗೆ ಮತ್ತೊಂದು ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ XUV400 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಇನ್ನು ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆಯನ್ನು ರೂ. 85,000 ವರೆಗೆ ಕಡಿಮೆ ಮಾಡಿದೆ. ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ನ ರೇಂಜ್ ಅನ್ನು ಸಿಂಗಲ್ ಚಾರ್ಜ್‌ನಲ್ಲಿ 437 ಕಿ.ಮೀ ನಿಂದ 453 ಕಿ.ಮೀಗೆ ಹೆಚ್ಚಿಸಲಾಗಿದೆ ಎನ್ನಲಾಗುತ್ತಿದೆ.
ಟಾಟಾ ನೆಕ್ಸಾನ್ ಇವಿ ಪ್ರೈಮ್ 3 ರೂಪಾಂತರಗಳಲ್ಲಿ ಲಭ್ಯವಿದೆ. ಇದು XM, XZ+ ಮತ್ತು XZ+ Lux. ಆಗಿದೆ. ಈ ರೂಪಾಂತರಗಳು 3.3kW ಚಾರ್ಜರ್ ಜೊತೆಗೆ 30.2kWh ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಿದೆ. XM ಮತ್ತು XZ+ ರೂಪಾಂತರಗಳಿಗೆ ಕ್ರಮವಾಗಿ ರೂ.14.49 ಲಕ್ಷ ಮತ್ತು 15.99 ಲಕ್ಷ ರೂ.ಗಳಾಗಿದ್ದು, ಇನ್ನು XZ+ Lux ರೂಪಾಂತರದ ಬೆಲೆಯು ರೂ.16.99 ಲಕ್ಷವಾಗಿದೆ. ಇನ್ನು ಮೂಲ ಮಾದರಿಯ ಬೆಲೆ 50,000 ರೂ.ಗಳಷ್ಟು ಕಡಿಮೆಯಾಗಿದೆ, ಆದರೆ ಟಾಪ್-ಸ್ಪೆಕ್ ಮಾಡೆಲ್ ಈಗ 85,000 ರೂ.ಗಳಷ್ಟು ಅಗ್ಗವಾಗಿದೆ ಎನ್ನಲಾಗಿದೆ.
ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ದೊಡ್ಡದಾದ 40.5kWh ಬ್ಯಾಟರಿ ಪ್ಯಾಕ್ ಮತ್ತು 3.3kW ಅಥವಾ 7.2kW ಚಾರ್ಜರ್ ಆಯ್ಕೆಯೊಂದಿಗೆ ಲಭ್ಯವಿದೆ. 3.3kW ಚಾರ್ಜರ್ ಹೊಂದಿರುವ ನೆಕ್ಸಾನ್ ಇವಿ ಬೆಲೆಯು ರೂ. 16.49 ಲಕ್ಷದಿಂದ ರೂ.18.49 ಲಕ್ಷದವರೆಗೆ ಇದೆ. 7.2kW ಚಾರ್ಜರ್ ಹೊಂದಿರುವ ಇವಿ ಮ್ಯಾಕ್ಸ್ ರೂ 16.99 ಲಕ್ಷದಿಂದ ರೂ 18.99 ಲಕ್ಷ ಬೆಲೆಯಲ್ಲಿ ಲಭ್ಯವಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿರುತ್ತದೆ.