Sunday, September 8, 2024

Latest Posts

ಕರ್ನಾಟಕದ 40 ಕಡೆಗಳಲ್ಲಿ ಎನ್ ಐ ಎ ಕಣ್ಣು…!

- Advertisement -

state news

ಬೆಂಗಳೂರು(ಫೆ.15): ರಾಜ್ಯದ ಬಹುತೇಕ ಭಾಗಗಳಲ್ಲಿ  ಈಗಾಗಲೇ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿರುವುದು ಸುದ್ದಿಯಾಗುತ್ತಿದೆ, ಇದೀಗ ದಕ್ಷಿಣ ಭಾರತದ ಒಟ್ಟು 40 ಕಡೆಗಳಲ್ಲಿ ಎನ್ ಐ ಎ ದಾಳಿಯನ್ನು ನಡೆಸಿರುವುದು ಬೆಳಕಿಗೆ ಬಂದಿದೆ. ಬಹುತೇಕ ತಮಿಳುನಾಡು,ಕೇರಳ ಕಡೆಗಳಲ್ಲಿ ಈ ದಾಳಿ ನಡೆದಿದೆ.

40 ಪ್ರದೇಶಗಳ ಮೇಲೆ ಏಕಕಾಲಕ್ಕೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೇರಳದ ಪಲ್ಲಕಡನಲ್ಲಿ ದಾಳಿ ನಡೆಸಿದೆ. ತಮಿಳುನಾಡಿನ ಕೊಯಮುತ್ತೂರನ ಕೊಟ್ಟಯ್​ ಈಶ್ವರನ್​ ದೇವಸ್ಥಾನ ಎದುರುಗಡೆ ಸ್ಪೋಟಗೊಂಡ ಕಾರ್​ ಬ್ಲಾಸ್ಟ್​​ನಲ್ಲಿ ಜಮೀಶ್​ ಮುಬೀನ್ ಎಂಬುವನು ಸಾವನ್ನಪ್ಪಿದ್ದನು.

ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ ಜೊತೆ ಜಮೀಶ್​ ಮುಬೀನ್ ನಂಟು ಹೊಂದಿದ್ದು. ಈತ ಆತ್ಮಾಹುತಿ ಬಾಂಬ್​ಗೆ ಧಾರ್ಮಿಕ ಕೇಂದ್ರಗಳು ಮತ್ತು ಸ್ಮಾರಕಗಳನ್ನು ಟಾರ್ಗೆಟ್​ ಮಾಡಿದ್ದನು ಎಂದು ಎನ್‌ಐಎ ಹೇಳಿದೆ. ಮಂಗಳೂರಿನಲ್ಲಿ ನಡೆದ ಆಟೋ ಬಾಂಬ್​ ಬ್ಲಾಸ್ಟ್​ ಪ್ರಕರಣದಲ್ಲಿ ಆಟೋ ಚಾಲಕ ಮತ್ತು ಆರೋಪಿ ಮೊಹ್ಮದ್​ ಶಾರಿಕ್​ ಇಬ್ಬರು ಗಾಯಗೊಂಡಿದ್ದರು. ಸ್ಫೋಟ ಪ್ರಕರಣದ ತನಿಖೆಯ ಸಂದರ್ಭದಲ್ಲಿ, ಶಾರಿಕ್ ಮತ್ತು ಆತನ ಸಹಚರರು ಕರ್ನಾಟಕದ ಅರಣ್ಯಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಕ್ಯಾಂಪ್ ಸ್ಥಾಪಿಸಲು ಬಯಸಿದ್ದರು ಎಂದು ಎನ್ಐಎಗೆ ತಿಳಿದುಬಂದಿದೆ.

ಬಿಜೆಪಿಗೆ ಮತ್ತೆ ಅಧಿಕಾರ: ಬಿ.ಎಸ್ ಯಡಿಯೂರಪ್ಪ ವಿಶ್ವಾಸ

ಎಎಪಿ ಟಿಕೆಟ್ ಆಕಾಂಕ್ಷಿ ಅಗಿಲೆ ಯೋಗೇಶ್ ಗ್ರಾಮ ಭೇಟಿ

- Advertisement -

Latest Posts

Don't Miss