Friday, July 11, 2025

Latest Posts

3 ಬಾರಿ ಸೋತರೂ ನಿಖಿಲ್‌ಗೆ ಆ ಶಕ್ತಿಯಿದೆ – ಜಿ ಟಿ ದೇವೆಗೌಡ

- Advertisement -

ಚಾಮುಂಡೇಶ್ವರಿ ಶಾಸಕ ಜಿ.ಟಿ ದೇವೆಗೌಡ್ರು ಜೆಡಿಎಸ್‌ ಪಕ್ಷದಿಂದ ಕೊಂಚ ಹಿಂದೆ ಸರಿದಿರುವುದು ಗೊತ್ತೇ ಇದೆ. ಇತ್ತೀಚಿಗೆ ಪಕ್ಷ ಬದಲಾವಣೆ ಮಾಡುತ್ತಾರೆ ಎಂಬ ಊಹಾಪೊಹಾಗಳು ಹರಿದಾಡುತ್ತಿದೆ. ಖುದ್ದು ಜಿ.ಟಿ ದೇವೆಗೌಡರೇ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಜೆಡಿಎಸ್‌‌ನಲ್ಲಿ ಇರಬೇಕಾ, ಬೇಡ್ವಾ? ಬಿಜೆಪಿಗೆ ಹೋಗಬೇಕಾ ಬೇಡ್ವಾ, ಕಾಂಗ್ರೆಸ್ ಗೆ ಹೋಗ್ಬೇಕಾ ಬೇಡ್ವಾ? ಎಂಬುದನ್ನು ನನ್ನ ಕ್ಷೇತ್ರದ ಜನ ತೀರ್ಮಾನ ಮಾಡ್ತಾರೆ. ನಾನು ಪಕ್ಷಾಂತರ ಮಾಡಲ್ಲ ಎಂದು ಮೈಸೂರಲ್ಲಿ ಜಿಟಿ ದೇವೇಗೌಡ್ರು ಸ್ಪಷ್ಟನೆ ನೀಡಿದ್ದಾರೆ.

ನನ್ನನ್ನು ಸಿದ್ದರಾಮಯ್ಯ ಬಂದು ಬಿಡು ಕಾಂಗ್ರೆಸ್‌ಗೆ ಅಂತ ಕರೆದಿಲ್ಲ. ಡಿಕೆ ಶಿವಕುಮಾರ್ ಕೂಡ ಕರೆದಿಲ್ಲ. ಚನ್ನಪಟ್ಟಣ ಬೈ ಎಲೆಕ್ಷನ್‌ ಚುನಾವಣೆಯಲ್ಲಿ ನನ್ನ ಯಾರು ಕರೆದಿಲ್ಲ. ಹಾಗಂತ ನಾನು ಯಾವ ಪಕ್ಷಕ್ಕೂ ಕೂಡ ಹೋಗಲ್ಲ. ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಯಾರು ನನ್ನ ಕರೆದಿಲ್ಲ.

ನಿನ್ನೆ ಮೊನ್ನೆ ಬಂದ ಶಾಸಕರುಗಳು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ಮುಂದೆ ನಿಲ್ಲುವ ಶಕ್ತಿ ಇಲ್ಲದವರು ಕೂಡ ಏನೇನೋ ಮಾಡ್ತಿದ್ದಾರೆ ಎಂದು ಸ್ವಪಕ್ಷದ ನಾಯಕರ ವಿರುದ್ಧವೂ ಶಾಸಕ ಜಿಟಿ ದೇವೇಗೌಡ ಹರಿಹಾಯ್ದಿದ್ದಾರೆ. ನಾನು ದೇವೇಗೌಡರ ಜೊತೆ ಬಾವುಟ ಕಟ್ಟಿ ಪಕ್ಷ ಕಟ್ಟಿದವನು. ಮುಂದೆ ಏನು ಮಾಡ್ಬೇಕು ಅಂತ ಕ್ಷೇತ್ರದ ಜನ ಹೇಳ್ತಾರೆ. ಜನ ಜೆಡಿಎಸ್ ಅಲ್ಲಿ ಇರು ಅಂದ್ರೆ ಇರ್ತೀನಿ, ಕಾಂಗ್ರೆಸ್ ಗೆ ಹೋಗಿ ಅಂದ್ರೆ ಹೋಗ್ತೀನಿ, ಬಿಜೆಪಿಗೆ ಹೋಗುಚಅಂದ್ರು ಹೋಗ್ತೀನಿ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡ್ತೀನಿ ಎಂದು ಸ್ಪಷ್ಟಪಡಿಸಿದ್ದಾರೆ.

ನಿಖಿಲ್‌ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ದೇವೇಗೌಡ್ರು, ನಿಖಿಲ್ 3 ಬಾರಿ ಚುನಾವಣೆ ಸೋತಿದ್ದಾನೆ. ಈಗ ಆತನಿಗೂ ರಾಜಕೀಯದ ಅನುಭವ ಇದೆ. ದೇವೇಗೌಡರು ಕಟ್ಟಿದ್ದ ಜನತಾದಳವನ್ನು ಸದೃಢವಾಗಿ ಮುಂದೆ ತೆಗೆದುಕೊಂಡು ಹೋಗುವ ಗಟ್ಟಿ ನಾಯಕತ್ವ ನಿಖಿಲ್ ಗೆ ಇದೇ. ನಾನು ಪಕ್ಷದ ಕಾರ್ಯಕ್ರಮದಿಂದ ದೂರವಿದ್ದೇನೆ. ಶಾಸಕನಾಗಿ ನನ್ನ ಕೆಲ್ಸ ಮಾತ್ರ ಮಾಡ್ತೀನಿ ಅಷ್ಟೆ ಎಂದಿದ್ದಾರೆ.

ಇದೇ ವೇಳೆ ಬಿಜೆಪಿ ಜೆಡಿಎಸ್‌ನಲ್ಲಿ ಸಮನ್ವಯತೆ ಕೊರತೆ ವಿಚಾರವಾಗಿ ಅವರು ಮಾತನಾಡಿದ್ದಾರೆ. ನಾನು ಜೆಡಿಎಸ್ ಶಾಸಕ, ಚುನಾವಣೆ ಗೆದ್ದು ಶಾಸಕ ಆಗಿರೋದು. ರಾಜೀನಾಮೆ ಕೊಟ್ಟು ಪಕ್ಷಾಂತರ ಮಾಡಿಲ್ಲ, ಈ ಹಿಂದೆ 20 ತಿಂಗಳು ಯಡಿಯೂರಪ್ಪಗೆ ಅಧಿಕಾರ ಕೊಡಲಿಲ್ಲ ಅಂತ ಬೆಂಬಲ ನೀಡಿದ್ದೆ. ಇನ್ನು ನಮ್ಮ ಅವಧಿ 3 ವರ್ಷ ಇದೆ. ನನಗೆ ವಿರೋಧ ಪಕ್ಷ ಸ್ಥಾನ ಕೊಡಲಿಲ್ಲ ಅಂತ ಬೇಸರವಿದೆ. ಹಿರಿಯನಾಗಿದ್ದು ನನಗೆ ಅವಕಾಶ ಕೊಡಲಿಲ್ಲ, ಸುರೇಶ್ ಬಾಬುಗೆ ಕುಮಾರಸ್ವಾಮಿ ಅಧಿಕಾರ ಕೊಟ್ರು. ಸದ್ಯ ನಾನು ಶಾಸಕನಾಗಿ ಕೆಲ್ಸ ಮಾಡ್ತಿದ್ದೇನೆ. ಪಕ್ಷದ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.

- Advertisement -

Latest Posts

Don't Miss