ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ವಿರುದ್ಧ ಹೀನಾಯವಾಗಿ ಸೋತಿದ್ದ ನಿಖಿಲ್ ಕುಮಾರ್ ಇದೀಗ ರಾಜಕೀಯದಲ್ಲಿ ಹೊಸ ಹುಮ್ಮಸ್ಸು ತೋರುತ್ತಿದ್ದಾರೆ. ಸೋತ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರೋ ನಿಖಿಲ್ ಇದೀಗ ಪಾದಯಾತ್ರೆ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.
ಸಾಕಷ್ಟು ಪ್ರಾಬಲ್ಯವಿದ್ದರೂ ಮಂಡ್ಯದಲ್ಲಿ ಸೋಲನುಭವಿಸಿದ್ದ ನಿಖಿಲ್ ಕುಮಾರ್ ಗೆ ತೀವ್ರ ಮುಖಭಂಗವಾಗಿತ್ತು. ಆದ್ರೀಗ ಅದನ್ನೆಲ್ಲಾ ಮೆಟ್ಟಿನಿಂದು ಥೇಟ್ ಜಾಗ್ವಾರ್ ನಂತೆಯೇ ಮೈದಡವಿ ಎದ್ದುನಿಂತು, ನಾನು ಗೆದ್ದೇ ಗೆಲ್ತೀನಿ ಅಂತ ಪಣ ತೊಟ್ಟಿದ್ದಾರೆ. ಹೀಗಾಗಿಯೇ ಹಳೆ ಮೈಸೂರು ಭಾಗದ ಜಿಲ್ಲೆಗಳಾದ ಹಾಸನ, ಮಂಡ್ಯ, ಮೈಸೂರು ರಾಮನಗರದಲ್ಲಿ ಪಾದಯಾತ್ರೆ ನಡೆಸೋ ಮೂಲಕ ಪಕ್ಷದ ಬಲವರ್ಧನೆಗೆ ಮುಂದಾಗಿದ್ದಾರೆ. ಇನ್ನು ಜೆಡಿಎಸ್ ವರಿಷ್ಠ ದೇವೇಗೌಡ ಮತ್ತೆ ರಾಜ್ಯದಲ್ಲಿ ಯಾವಾಗ ಬೇಕಾದ್ರೂ ಮಧ್ಯಂತರ ಚುನಾವಣೆ ಎದುರಾಗಬಹುದು ಅಂತ ಹೇಳಿಕೆ ನೀಡಿರೋ ಹಿನ್ನೆಲೆಯಲ್ಲಿ ನಿಖಿಲ್ ಈಗಾಗಲೇ ತಯಾರಿ ನಡೆಸಿದ್ದಾರೆ. ಈ ಬಾರಿ ಹೇಗಾದ್ರೂ ಮಾಡಿ ಜನರ ಒಲವು ಗಿಟ್ಟಿಸಿಕೊಂಡು ಗೆಲ್ಲಲ್ಲೇಬೇಕು ಅಂತ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಕಳೆದ ವಾರವಷ್ಟೇ ಆಂಧ್ರಪ್ರದೇಶದ ನೂತನ ಸಿಎಂ ಜಗನ್ ಮೋಹನ್ ರೆಡ್ಡಿಯವರನ್ನು ಭೇಟಿಯಾದ ನಂತರ ನಿಖಿಲ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಚುನಾವಣೆಗೂ ಮುನ್ನ ಜಗನ್ ಮೋಹನ್ ರೆಡ್ಡಿ ಕೂಡ ಪ್ರತಿ ಗ್ರಾಮಕ್ಕೂ ಭೇಟಿ ನೀಡಿದ್ದು ಜನರ ವಿಶ್ವಾಸ ಗಳಿಸೋದಕ್ಕೆ ಸಾಧ್ಯವಾಗಿತ್ತು.
ದೇವೇಗೌಡರ ಆ ಮಾತಿಗೆ ಸಿದ್ದ ಏನಂದ್ರು ಗೊತ್ತಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ