Friday, August 29, 2025

Latest Posts

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅರಳಿ ಮರದಲ್ಲಿದೆ ಪರಿಹಾರ…!

- Advertisement -

devotional story:

ವೃಕ್ಷಗಳ ಸಮುದಾಯದಲ್ಲಿ ಶ್ರೇಷ್ಠ ವೃಕ್ಷವೆಂದರೆ ಅದು ಅರಳಿ ಮರ ಎಂದು ಭಗವತ್ ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾರೆ .ಅರಳಿ ಮರವನ್ನು ಹಿಂದೂ ಧರ್ಮದ ಪ್ರಕಾರ ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ ಅರಳಿ ಮರವನ್ನು ಪೂಜಿಸಿದ ನಂತರ ಅನೇಕ ಜನರು ಅದ್ಭುತ ಫಲಿತಾಂಶಗಳನ್ನು ಪಡೆದಿರುವ ಉದಾಹರಣೆಗಳನ್ನು ನಾವು ನೋಡಬಹುದು ಹಿಂದೂ ದರ್ಮದವರಲ್ಲದೆ ಬೌದ್ಧರು ಮತ್ತು ಜೈನರು ಈ ಪವಿತ್ರವಾದ ಮರವನ್ನು ಪೂಜಿಸುತ್ತಾರೆ ,ಪ್ರಪಂಚದಲ್ಲಿರುವ ಎಲ್ಲಾ ಮರಗಳಿಗಿಂತ ಅರಳಿಮರ ಭಿನ್ನವೆನ್ನಬಹುದು ಹಾಗು ದಿನದ 24 ಗಂಟೆ ಆಮ್ಲಜನಕವನ್ನು ಹೊರಬಿಡುವ ಏಕೈಕ ಮರ ಎನ್ನಲಾಗಿದೆ ಇದು ದೇವ ವೃಕ್ಷ ಎಂದೇ ಹೆಸರುವಾಸಿಯಾಗಿದೆ ಹಾಗು ಅರಳಿ ಮರವನ್ನು ವೈಜ್ಞಾನಿಕವಾಗಿ ವರದಾನವೆಂದು ಪರಿಗಣಿಸಲಾಗಿದೆ. ಈ ಮರವು ತನ್ನ ಸುತ್ತಮುತ್ತಲಿನ ಪ್ರದೇಶವನ್ನು ಶುದ್ದಿ ಗೊಳಿಸುವುದಲದೆ ಹಾನಿಕಾರಕ ಬ್ಯಾಕ್ಟೇರಿಯಗಳನ್ನು ನಾಶಗೊಳಿಸಿ ವಿವಿಧ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನೂ ಹೊಂದಿದೆ .

ಹಾಗಾದರೆ ನಾವು ಇಂದಿನ ಲೇಖನದಲ್ಲಿ ಅರಳಿ ಮರವನ್ನು ಹೇಗೆ ಪೂಜಿಸಿದರೆ ಉತ್ತಮ ಫಲ ಸಿಗುತ್ತದೆ ಯಾವ ಗ್ರಹದವರು ಯಾವ ರೀತಿ ಈ ಮರವನ್ನು ಪೂಜಿಸಬೇಕು ಇನ್ನೂ ಹಲವು ಆಸ್ತಿಕರ ವಿಷಯಗಳನ್ನು ತಿಳಿದುಕೊಳ್ಳೋಣ .ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಅರಳಿ ಮರದಲ್ಲಿ ನೆಲೆಸಿದ್ದಾರೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ ಬ್ರಹ್ಮದೇವ ಅರಳಿ ಮರದ ಬೇರಾಗಿದ್ದರೆ, ವಿಷ್ಣು ಕಾಂಡ ಎನ್ನಲಾಗಿದೆ ಶಿವ ಈ ಮರದ ಎಲೆಗಳು ಎಂದು ಹೇಳಲಾಗಿದೆ ಹಾಗು ಈ ಮರದಲ್ಲಿ ಪೂರ್ವಜರು ನೆಲೆಸಿರುತ್ತಾರೆ ಎಂದು ನಂಬುತ್ತಾರೆ .ಆದರೆ ಈ ಮರವು ಮನುಷ್ಯನಿಗೆ ತಿನ್ನುಲು ಹಣ್ಣುಗಳಾಗಲಿ, ಸುಗಂಧವಾದ ಹೂಗಳಾಗಲಿ ಕೊಡುವುದಿಲ್ಲ ಹಾಗು ಈ ಮರದಿಂದ ಪೀಠೊಪಕರಣಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಆದರೆ ನಿಮ್ಮ ಜಾತಕದಲ್ಲಿನ ಮಂಗಳ ದೋಷ, ಶನಿ ದೋಷ, ನವಗ್ರಹ ಬಾಧೆ, ರಾಹು ಮತ್ತು ಕೇತು ಸಮಸ್ಯೆಗಳನ್ನು ಪರಿಹರಿಸುತ್ತದೆ.

ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಪೂರ್ವಕಾಲದಿಂದಲೂ ಆಲದಮರಕ್ಕೆ ,ಅರಳಿಮರಕ್ಕೆ ಹಾಗು ಹತ್ತಿಗಿಡಕ್ಕೆ ಬಹಳ ಮಹತ್ವವಿದೆ ದೇವತಾ ಮರಗಳೆಂದು ಪೂಜೆ ಮಾಡುತ್ತಾರೆ, ಅರಳಿಮರದ ದರ್ಶನ ಪಾಪನಾಶಕ, ಸ್ಪರ್ಶ ಶ್ರೀಕಾರಕ , ಪ್ರದಕ್ಷಿಣೆ ಆಯುಷ್ಯಕಾರಕ ಎಂದು ಪದ್ಮ ಪುರಾಣ ಹೇಳಲಾಗಿದೆ .ಪೂರ್ವ ಕಾಲದಲ್ಲಿ ಋಷಿಗಳು ಅರಳಿ ಮರದ ಬುಡದಲ್ಲಿ ಕುಳಿತು ವೇದಾಧ್ಯಾಯನ ಮಾಡುತ್ತಿದ್ದರು ಅರಳಿ ಮರದಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.ಈ ಮರಕ್ಕೆ ನಿಯಮಿತವಾಗಿ ಸಾಸಿವೆ ಎಣ್ಣೆಯ ದೀಪ ಹಚ್ಚಿ ಧ್ಯಾನ ಮಾಡಿದರೆ ದೇವಾನುದೇವತೆಗಳ ಆಶೀರ್ವಾದ ಸಿಗಲಿದೆ ಎನ್ನಲಾಗಿದೆ .ಮಕ್ಕಳಾಗದ ದಂಪತಿಗಳಿಗೆ ಜ್ಯೋತಿಷ್ಯರು ಅಶ್ವತ್ಥಮರದ ಪ್ರದಕ್ಷಿಣೆ ಮಾಡುವಂತೆ ಸಲಹೆ ನೀಡುತ್ತಾರೆ ಇದಕ್ಕೆ ವೈಜ್ಞಾನಿಕ ಕಾರಣಗಳು ಇದೆ ಎಲ್ಲ ಮರಗಳಿಗಿಂತ ಹೆಚ್ಚು ಆಮ್ಲಜನಕ ಕೊಡುವ ವೃಕ್ಷ ಅಶ್ವತ್ಥಮರ ಇಂತಹ ಶುದ್ಧ ವಾಯುವಿನ ಉಸಿರಾಟದಿಂದ ಗರ್ಭದೋಷದ ಸಮಸ್ಯೆ ಸರಿಹೋಗುವ ಸಾಧ್ಯತೆ ಇರುತ್ತದೆ. ಅರಳಿ ಮರದ ಕೆಳಗೆ ಶಿವಲಿಂಗವನ್ನು ಸ್ಥಾಪನೆ ಮಾಡಿ ಪೂಜೆ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಇನ್ನಿಲವಂತಾಗುತ್ತದೆ .ಹಾಗು 11ಅರಳಿ ಮರದ ಎಲೆಗಳನ್ನು ತೆಗೆದು ಚಂದನದಲ್ಲಿ ಶ್ರೀರಾಮ ಎಂದು ಬರೆದು ಅದನ್ನು ಮಾಲೆ ಮಾಡಿ ಹನುಮಾನ್ ಚಾಲೀಸ ಪಠಿಸುವುದರಿಂದ ಎಲ್ಲ ಸಂಕಷ್ಟಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ .

ಹಾಗಾದರೆ ನಿಮ್ಮ ಜಾತಕದಲ್ಲಿನ ಗ್ರಹಗಳ ಪ್ರಕಾರ ಅರಳಿ ಮರವನ್ನು ಪೂಜಿಸುವುದು ಹೇಗೆ.. ? ಮಂಗಳ ಗ್ರಹ: ತಾಮ್ರದ ಪಾತ್ರೆಯಿಂದ ದೈವಿಕ ಮರಕ್ಕೆ ನೀರನ್ನು ಅರ್ಪಿಸಿ ನಂತರ ಮರವನ್ನು 8 ಸುತ್ತುಗಳು ಸುತ್ತಿ. ಚಂದ್ರ ಗ್ರಹ: ಅರಳಿ ಮರದ ತುಂಡನ್ನು ಸ್ನಾನ ಮಾಡುವ ನೀರಿಗೆ ಹಾಕಿ ಅದರೊಂದಿಗೆ ಸ್ನಾನ ಮಾಡಿ. ಬುಧ ಗ್ರಹ: ಬುಧವಾರ ಹೆಸರು ಬೇಳೆಯನ್ನು ಅರ್ಪಿಸಿ ಮತ್ತು ಮರದ ಸುತ್ತ 3 ಸುತ್ತು ಸುತ್ತಿ. ಗುರು ಗ್ರಹ: ಗುರುವಾರದಂದು ಹಳದಿ ಬಣ್ಣಕ್ಕೆ ಪ್ರಾಧಾನ್ಯತೆ ನೀಡಿ. ಹಳದಿ ಹೂವುಗಳು, ಅರಿಶಿನ ನೀರು ಮತ್ತು ಹಳದಿ ಸಿಹಿತಿಂಡಿಗಳನ್ನು ನೀಡಿ. ರಾಹು ಗ್ರಹ: ಶನಿವಾರ ಅರಳಿ ಮರಕ್ಕೆ ಜೇನುತುಪ್ಪವನ್ನು ಅರ್ಪಿಸಿ. ಕೇತು ಗ್ರಹ: ಅಲ್ಸಿ ಎಣ್ಣೆಯ ದೀಪವನ್ನು ಬೆಳಗಿಸಿ ಗಂಗಾಜಲವನ್ನು ಮರಕ್ಕೆ ಅರ್ಪಿಸಿ. ಶನಿ ಗ್ರಹ: ಶನಿವಾರದಂದು ಬೆಲ್ಲದ ನೀರಿನೊಂದಿಗೆ ಬೆರೆಸಿದ ಹಸಿ ಹಾಲನ್ನು ಮರಕ್ಕೆ ಅರ್ಪಿಸಿ. .

ಈ ವೃಕ್ಷಕ್ಕೆ ಏಳು ಪ್ರದಕ್ಷಿಣೆ ಮಾಡಿದರೆ 10,000 ಗೋದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ. ಒಂದು ಅಶ್ವತ್ಥ ಮರವನ್ನು ನೆಟ್ಟರೆ ಮೂರು ಸಂಪಿಗೆಗಿಡ ಮತ್ತು ಒಂದು ಎಕ್ಕೆಗಿಡ ಏಳು ಆಲದಮರ ಎಂಟು ಬಿಲ್ವಪತ್ರೆಗಿಡ ಮತ್ತು ನಿಂಬೆಗಿಡ ನೆಟ್ಟಷ್ಟು ಫಲ ಸಿಗುತ್ತದೆ ಎಂದು ಹೇಳಲಾಗಿದೆ .ನದಿ ಸಮೀಪದಲ್ಲಿ ಅಶ್ವತ್ಥಮರವನ್ನು ಪ್ರತಿಷ್ಠಾಪಿಸಿದರೆ ಪಿತೃದೇವರ ಆಶೀರ್ವಾದ ಲಭಿಸುತ್ತದೆ .ಎಲ್ಲಾ 9 ಗ್ರಹಗಳ ಆಶೀರ್ವಾದವನ್ನು ಪಡೆಯಲು ಅರಳಿ ಮರವನ್ನು ಭಕ್ತಿಯಿಂದ ಪೂಜಿಸಬೇಕು ನಾವು ಪೂಜಿಸುವ ಅರಳಿ ಮರವು ಬೆಳೆದಷ್ಟು ನಮ್ಮ ಸಂಪತ್ತು ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಶನಿ ದೇವರು ಈ ವೃಕ್ಷದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಇದೆ ಆದಕಾರಣ ಶನಿವಾರದಂದು ಅರಳಿ ಮರವನ್ನು ಪೂಜಿಸಿದರೆ ಸಮೃದ್ಧಿ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ ಮರಕ್ಕೆ ನೀರು ಅರ್ಪಿಸಿದರೆ ಶನಿ ದೇವರು ಯಾವುದೇ ರೀತಿಯ ಕಷ್ಟಗಳಿಂದ ವಿಮುಕ್ತಿ ನೀಡುತ್ತಾರೆ ಎಂದು ನಂಬಲಾಗಿದೆ
ನೋಡಿದ್ರಲ್ವಾ  ಅರಳಿ ಮರವನ್ನು ಪೂಜಿಸುವುದರಿಂದ ಯಾವೆಲ್ಲಾ ಉಪಯೋಗಗಳನ್ನು ಪಡೆದುಕೊಳ್ಳಬಹುದು ಅಂತ ನೀವು ಕೂಡ ಅರಳಿ ಮರವನ್ನು ಪೂಜಿಸಿ ಕಷ್ಟಗಳು ಇನ್ನಿಲ್ಲವಾಗಿಸಿಕೊಳ್ಳಿ.

ಯಮಧರ್ಮರಾಜನನ್ನೇ ಹಿಮ್ಮೆಟ್ಟಿಸಿದ ಶಕ್ತಿಯುತವಾದ ಮಂತ್ರ..!

ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಬೇಕಾದರೆ ಹೀಗೆ ಮಾಡಿ :

ಶ್ರೀಕೃಷ್ೞನ ಬಳಿ ಎಂಥೆಂಥ ಅಸ್ತ್ರಗಳಿದ್ದವು ಗೊತ್ತೇ..? ದಿವ್ಯಾಸ್ತ್ರದ ಶಕ್ತಿಯ ವಿವರಣೆ..

- Advertisement -

Latest Posts

Don't Miss