ಭುವನೇಶ್ವರ : ಈಜುಗಾರ್ತಿ ನಿನಾ ವೆಂಕಟೇಶ್ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‍ಶಿಪ್‍ನಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.
ಮಂಗಳವಾರ ನಡೆದ ಬಾಲಕಿಯರ 50 ಮೀ.ಬಟರ್ ಫ್ಲೈ ವಿಭಾಗದಲ್ಲಿ 16 ವರ್ಷದ ನಿನಾ ವೆಂಕಟೇಶ್ 28.27 ಸೆಕೆ.ಗುರಿ ಮುಟ್ಟಿ ದಾಖಲೆ ಬರೆದರು. ಕಳೆದ ವರ್ಷ ಬೆಂಗಳೂರಿನಲ್ಲಿ 28.51 ಸೆ.ಗುರಿ ಮುಟ್ಟಿದ್ದು ಈವರೆಗಿನ ದಾಖಲೆಯಾಗಿತ್ತು.
ಬಂಗಾಳದ ನಿಲಬ್ಜಾ ಘೋಷ್ (28.85) ಮತ್ತು ಪಂಜಾಬ್ನ ಜಾಸನೂರು ಕೌರ್ (28.97 ಸೆ.) ಗುರಿ ಮುಟ್ಟಿ ಕ್ರಮವಾಗಿ ಎರಡನೇ ಮತ್ತು ಮೂರನೆ ಸ್ಥಾನ ಪಡೆದರು.
ಕರ್ನಾಟಕದ ಮತ್ತೊರ್ವ ಈಜುಗಾರ್ತಿ ನಿ ಎರಡನೆ ಗುಂಪಿನ 50ಮೀ.ಬಟರ್ ಫ್ಲೈ ವಿಭಾಗದಲ್ಲಿ 28.93 ಸೆ. ಗುರಿ ತಲುಪಿ ರಾಷ್ಟ್ರೀಯ ದಾಖಲೆ ಬರೆದರು. ಜೊತೆಗೆ ತನಿಶಿ ಗುಪ್ತಾ ಅವರ 29.45 ಸೆ ಗುರಿ ಮುಟ್ಟಿದರು.
ಇನ್ನು ಬಾಲಕರ ವಿಭಾಗದ ಗುಂಪು 1ರ ಬ್ಯಾಕ್‍ಸ್ಟ್ರೋಕ್‍ನಲ್ಲಿ ಕರ್ನಾಟಕದ ಸಂತೋಷ್ ಪಾಟೀಲ್ 2:06.77 ಸೆ. ಗುರಿ ಮುಟ್ಟಿ ಚಿನ್ನ ಪಡೆದರು.
ಕರ್ನಾಟಕ ತಂಡ 29 ಚಿನ್ನ, 20 ಬಳ್ಳಿ ಮತ್ತು 13 ಕಂಚು ಪಡೆದು ಒಟ್ಟು 62 ಪದಕಗಳೊಂದಿಗೆ ಅಗ್ರಸ್ಥಾನ ಪಡೆದಿದೆ.




