- Advertisement -
www.karnatakatv.net:ರಾಷ್ಟ್ರೀಯ: ನವದೆಹಲಿ- ಕೊರೊನಾ ಆರ್ಥಿಕ ಬಿಕ್ಕಟ್ಟು ಎದುರಿಸಲು ಮತ್ತೊಂದು ಸುತ್ತಿನ ಪ್ಯಾಕೇಜ್ ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ. ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ವಿವಿಧ ವಿಚಾರಗಳ ಬಗ್ಗೆ ವಿವರಿಸಿದ ಅವರು ಕೊರೊನಾ ಜಾಗತಿಕ ಬಿಕ್ಕಟ್ಟಿನಿಂದ ಪರಿಣಾಮ ಕೇಂದ್ರದಿಂದ 8 ಅಂಶಗಳ ನೆರವು ಘೋಷಿಸಿದ್ದಾರೆ. ಆ 8 ಅಂಶಗಳ ನೆರವು ಹೀಗಿದೆ…
- 25 ಲಕ್ಷ ಸಾಲ ಪಡೆಯಬಹುದು, ಆರ್ ಬಿಐಗಿಂತ 2 ಪರ್ಸೆಂಟ್ ಕಡಿಮೆ ಬಡ್ಡಿ ದರದಲ್ಲಿ ಸಾಲ, ಸಾಲದ ಅವಧಿ 3 ವರ್ಷ, ಅಂತೆಯೇ 5 ಲಕ್ಷ ಮಂದಿಗೆ ಉಚಿತ ವಿಮೆ ನೀಡುವ ಯೋಜನೆ
- ಪ್ರವಾಸೋದ್ಯಮವನ್ನ ಪುನರುಜ್ಜೀವನಗೊಳಿಸುವ ಹೊಸ ಯೋಜನೆ-11,000ಕ್ಕೂ ಹೆಚ್ಚು ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳು, ಪ್ರಯಾಣ ಮತ್ತು ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ ಆರ್ಥಿಕ ಸಹಾಯ ವಿಸ್ತರಣೆ. ಲೈಸೆನ್ಸ್ ಹೊಂದಿರುವ ಟೂರಿಸ್ಟ್ ಗೈಡ್ ಗಳಿಗೆ 1 ಲಕ್ಷದವರೆಗೆ ಸಾಲ.ಪ್ರವಾಸಿ ವೀಸಾ ವಿತರಣೆಯನ್ನು ಪುನರಾರಂಭಿಸಿದ ನಂತರ ಮೊದಲ 5 ಲಕ್ಷ ಪ್ರವಾಸಿ ವೀಸಾಗಳು ಸಂಪೂರ್ಣ ಉಚಿತ.
- ಆರೋಗ್ಯ ವಲಯಕ್ಕೆ 50,000 ಕೋಟಿ ರೂಪಾಯಿ, ಇತರೆ ವಲಯಗಳಿಗೆ 60,000 ಕೋಟಿ ರೂಪಾಯಿ.
- 15 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಮೊತ್ತ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್.
- ಮೈಕ್ರೋ ಫೈನಾನ್ಸ್ ಮೂಲಕ 25 ಲಕ್ಷ ಮಂದಿಗೆ ಒದಗಿಸುವ ವ್ಯಕ್ತಿಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ ಮೂಲಕ ಸಾಲ ಒದಗಿಸಲಾಗುತ್ತದೆ.
- ಆತ್ಮನಿರ್ಭರ ಭಾರತ್ ರೋಜ್ ಗಾರ್ ಯೋಜನೆ ಅವಧಿ ವಿಸ್ತರಣೆ.
- ರೈತರಿಗೆ ಹೆಚ್ಚುವರಿ ಪ್ರೊಟೀನ್ ಆಧಾರಿತ ರಸಗೊಬ್ಬರ ಸಹಾಯಧನ-15,000 ಕೋಟಿ
- ಈ ಹಿಂದೆ ಘೋಷಿಸಿದಂತೆ ಪ್ರಧಾನಮಂತ್ರಿ ಆತ್ಮನಿರ್ಭರ ಗರೀಭ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯ ವಿತರಣೆ- ಮೇ ತಿಂಗಳಿಂದ ನವೆಂಬರ್ 2021ರವರೆಗೆ ಅನ್ವಯ.
- Advertisement -