Sunday, October 26, 2025

Latest Posts

ಏಷ್ಯಾದ ಅತಿ ಉದ್ದದ ಸುರಂಗ ಮಾರ್ಗ ವಿಕ್ಷೀಸಿದ ನಿತಿನ್ ಗಡ್ಕರಿ..!

- Advertisement -

www.karnatakatv.net: ಲಡಾಕ್ ನ ಕಾರ್ಗಿಲ್ ಜಿಲ್ಲೆಯಲ್ಲಿನ ಏಷ್ಯಾದ ಅತಿ ಉದ್ದದ ಜೋಜಿಲಾ ಸುರಂಗ ಮಾರ್ಗಕ್ಕೆ 2300 ಕೋಟಿ ರೂ ವೆಚ್ಚವಾಗಿದ್ದು ಅದನ್ನು ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರೆ ಸಚಿವ ನಿತಿನ್ ಗಡ್ಕರಿ ಭೇಟಿ ನೀಡಿದರು.

 ಚಳಿಗಾಲದ ಹಿಮಪಾತದ ಸಂದರ್ಭದಲ್ಲಿ ಶ್ರೀನಗರ- ಲೇಹ್ ಲಡಾಖ್ ಹೆದ್ದಾರಿ ಈ ಸುರಂಗ ಮಾರ್ಗದಿಂದ ಬಂದ್  ಆಗುವುದಿಲ್ಲ. ವರ್ಷಪೂರ್ತಿ ಈ ಮಾರ್ಗದಲ್ಲಿ ಜನರು ಸಂಚರಿಸಲು ಅನುಕೂಲವಾಗುತ್ತದೆ.  

ಈ ಸುರಂಗ ಮಾರ್ಗವನ್ನು ವೀಕ್ಷಿಸಿ ಮಾತನಾಡಿ, ಈ ಮಹತ್ವದ ಸುರಂಗ ಮಾರ್ಗದ ಕಾಮಗಾರಿಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನ ಮಾಡುತ್ತಿದ್ದೇವೆ. ಸದ್ಯದಲ್ಲೇ 4.15 ಕಿ.ಮೀ. ಜೋಜಿಲಾ ಸುರಂಗಮಾರ್ಗ ಪೂರ್ಣಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಮ್ಮ ಸರ್ಕಾರ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಅದರಲ್ಲೂ ಅರುಣಾಚಲಪ್ರದೇಶ, ಹಿಮಾಚಲಪ್ರದೇಶ, ತ್ರಿಪುರ, ಮೇಘಾಲಯ, ಅಸ್ಸಾಂ, ಉತ್ತರಾಖಂಡ ರಾಜ್ಯಗಳನ್ನು ಎಲ್ಲ ಸರ್ಕಾರಗಳೂ ನಿರ್ಲಕ್ಷ್ಯ ಮಾಡುತ್ತಿವೆ ಎಂದು ನಮಗೆ ಅನಿಸಿತ್ತು. ಹೀಗಾಗಿ, ಈ ಭಾಗದ ಅಭಿವೃದ್ಧಿಗೆ ಮೋದಿ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂದಿದ್ದಾರೆ.

14.15 ಕಿ.ಮೀ ಸುರಂಗಮಾರ್ಗ ಇದಾಗಿದ್ದು, ಇದನ್ನು ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಕಂಪನಿಯು ಕಾರ್ಯನಿರ್ವಹಿಸುತ್ತಿದೆ. ಹಾಗೇ ಇದು 2026 ರರೋಳಗೆ ಪೂರ್ಣಗೊಳ್ಳುತ್ತದೆ ಎಂದು ನಿರೀಕ್ಷೆಯಿದೆ. ಜೋಜಿಲಾ ಸುರಂಗ ಮಾರ್ಗ ಕಾಮಗಾರಿಗೆ 2020ರ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದರು. ಸಮುದ್ರಮಟ್ಟದಿಂದ 11,578 ಅಡಿ ಎತ್ತರದಲ್ಲಿ ಈ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಈ ಅತ್ಯಾಧುನಿಕ ಸುರಂಗದಲ್ಲಿ ಸಿಸಿಟಿವಿ ಕ್ಯಾಮೆರಾ, ಅತಿಭಾರದ ವಾಹನಗಳನ್ನು ಗುರುತಿಸುವ ವ್ಯವಸ್ಥೆ, ಸ್ವಯಂಚಾಲಿತ ಅಗ್ನಿ ನಿಯಂತ್ರಣ ವ್ಯವಸ್ಥೆಗಳಿವೆ.

- Advertisement -

Latest Posts

Don't Miss