Tuesday, November 18, 2025

Latest Posts

ಮೋದಿ ಕಾಲಿಗೆ ನಮಸ್ಕರಿಸಲು ಬಂದ ನಿತೀಶ್, ಬೇಡವೆಂದು ನಮಸ್ಕರಿಸಿದ ಮೋದಿ

- Advertisement -

Political News: ಇಂದು ಎನ್‌ಡಿಎ ಸಭೆ ನಡೆದಿದ್ದು, ಮೋದಿಯೇ ಪ್ರಧಾನಿಯಾಗಬೇಕು ಎಂದು ಅನುಮೋದಿಸಲಾಯಿತು. ಇದಾದ ಬಳಿಕ ಹಲವು ನಾಯಕರು ಮೋದಿ ಬಗ್ಗೆ ಮಾತನಾಡಿದರು, ಮೋದಿ ಕೂಡ ಮುಂದಿನ ದಿನಗಳಲ್ಲಿ ಮಾಡಬಹುದಾದ ಅಭಿವೃದ್ಧಿ ಜೊತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಈ ವೇಳೆ ನಿತೀಶ್ ಕುಮಾರ್ ಯಾದವ್ ಮೋದಿಯವರ ಬಗ್ಗೆ ಕೆಲವು ಮಾತನಾಡಿ, ಜನರನ್ನು ನಗೆಗಡಲಲ್ಲಿ ತೇಲಿಸಿದರು. ಬಳಿಕ ಕೈ ಮುಗಿದು, ಹತ್ತಿರ ಬಂದು ಮೋದಿ ಕಾಲಿಗೆರಗಿ ನಮಸ್ಕರಿಸಲು ಬಂದಾಗ, ಮೋದಿ ಅವರನ್ನು ತಡೆದು, ಇಬ್ಬರೂ ಕೈ ಮುಗಿದು, ಹಸ್ತಲಾಘವ ಮಾಡಿದ್ದಾರೆ.

ಸಭೆಯ ವೇಳೆ ಮಾತನಾಡಿದ ನಿತೀಶ್ ಕುಮಾರ್ ಯಾದವ್, ನಾವೆಲ್ಲರೂ ಮೋದಿಯವರನ್ನು ಬೆಂಬಲಿಸುತ್ತೇವೆ. ಅವರ ನೇತೃತ್ವದಲ್ಲಿ ಭಾರತ ಇನ್ನಷ್ಟು ಅಭಿವೃದ್ಧಿಯಾಗಲಿದೆ. ಅವರು ಇಂದೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಬೇಕಿತ್ತು. ಆದರೆ ಕಾರ್ಯಕ್ರಮ ಮುಂದೂಡಿದ್ದು, ಭಾನುವಾರದ ದಿನ ಪ್ರಮಾಣವಚನ ಕಾರ್ಯಕ್ರಮವಾಗಲಿದೆ. ಆ ಕಡೆ ಈ ಕಡೆ ಹೋಗುವವರಿಗೆ ಯಾವುದೇ ಲಾಭವಾಾಗುವುದಿಲ್ಲವೆಂದು ಹೇಳುವ ಮೂಲಕ ನಿತೀಶ್‌ ಕುಮಾರ್ ಇಂಡಿಯಾ ಒಕ್ಕೂಟಕ್ಕೆ ಟಾಂಗ್‌ ನೀಡಿದ್ದಾರೆ.

ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ

ಅಯೋಧ್ಯೆ ಸದಾ ರಾಜನಿಗೆ ದ್ರೋಹವೇ ಆಗಿದೆ ಎಂದ ನಟ

ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ

- Advertisement -

Latest Posts

Don't Miss