ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ, ಟಿವಿಕೆ ಪಕ್ಷದ ನಾಯಕ, ನಟ ದಳಪತಿ ವಿಜಯ್ ಘೋಷಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಲ್ಲಿ, ಡಿಎಂಕೆ, ಎಡಿಎಂಕೆ ವಿರುದ್ಧ ವಿಜಯ್ ಪಕ್ಷ ಸ್ಪರ್ಧಿಸಲಿದೆ.
ಟಿವಿಕೆ ಪಕ್ಷದ 2ನೇ ರಾಜ್ಯಮಟ್ಟದ ಸಮ್ಮೇಳನ, ಮಧುರೈ-ತೂತುಕುಡಿ ಹೆದ್ದಾರಿಯಲ್ಲಿ ನಡೆದಿದ್ದು, ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ರು.
ಸಮ್ಮೇಳನ ಸ್ಥಳದತ್ತ ಸಾಗುತ್ತಿದ್ದ ಮಿಲಿಯನ್‌ಗಟ್ಟಲೆ ಅಭಿಮಾನಿಗಳಿಗೆ, ಬಿರುಬಿಸುಲು ಕೂಡ ಲೆಕ್ಕಕ್ಕೆ ಇರ್ಲಿಲ್ಲ. ನಟ ವಿಜಯ್‌ರನ್ನು ನೇರವಾಗಿ ನೋಡಲು, ಅಭಿಮಾನಿಗಳು ಕೂಡ ಸಮಾವೇಶಲ್ಲಿ ಭಾಗಿಯಾಗಿದ್ರು.
ಸಂಘಟಕರು ಟಿವಿಕೆ ಧ್ವಜಗಳಿಂದ ಅಲಂಕರಿಸಿದ ವಾಹನಗಳೊಂದಿಗೆ ಜಾಥಾ ರೂಪದಲ್ಲಿ ಸಾಗಿದ ಈ ಸಮಾವೇಶದ ವೇಳೆ “ಆಲಪೋರನ್ ತಮಿಳನ್” ಹಾಗೂ “ತಲೈವಾ ತಲೈವಾ” ಎಂಬ ವಿಜಯ್ ಹಿಟ್ ಗೀತೆಗಳು ಘರ್ಜಿಸುತ್ತಿದ್ದವು. ವಿಜಯ್ ಹಾಗೂ ಟಿವಿಕೆ ಪರ ಘೋಷಣೆಗಳನ್ನು ಕೂಗಿ ಸಂಭ್ರಮ ವ್ಯಕ್ತಪಡಿಸುತ್ತಿದ್ರು. ಕೆಲ ಅಭಿಮಾನಿಗಳು ನೃತ್ಯ ಮಾಡುತ್ತಾ ಸಂಭ್ರಮಿಸಿದರು.
ಫೆಬ್ರವರಿ 2024ರಲ್ಲಿ ಟಿವಿಕೆ ಪಕ್ಷವನ್ನು ಸ್ಥಾಪಿಸಿದ ವಿಜಯ್, ಮುಂದಿನ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ದಿಸಲಿದ್ದಾರೆ. ಅಂದ್ರೆ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ, ತಮ್ಮ ರಾಜಕೀಯ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ತಮಿಳುನಾಡಿನ ರಾಜಕೀಯದಲ್ಲಿ ಟಿವಿಕೆ ಪಕ್ಷ ಹೊಸ ಟ್ರೆಂಡ್ ಸೃಷ್ಟಿಸಿದ್ದು, ಇತರೆ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲಿದೆ ಎನ್ನಲಾಗ್ತಿದೆ.

