Tuesday, August 5, 2025

Latest Posts

ಹುಟ್ಟುಹಬ್ಬಕ್ಕೆ ಕೇಕ್ ಅಲ್ಲ ‘ಜೈಲು ಬಟ್ಟೆ, ₹540 ರೂಪಾಯಿ’ ಜನ್ಮದಿನವೇ ಕೂಲಿ ಕೆಲಸ ಆರಂಭ!

- Advertisement -

ಪ್ರಜ್ವಲ್‌ ರೇವಣ್ಣ ಹುಟ್ಟುಹಬ್ಬದ ದಿನವೇ ಜೈಲಿನಲ್ಲಿ ಕೂಲಿ ಕೆಲಸ ಆರಂಭವಾಗಿದೆ. ಕಳೆದ ವರ್ಷ ಆರೋಪಿ, ಈ ವರ್ಷ ಅಪರಾಧಿಯಾಗಿದ್ದಾರೆ. ಹೌದು ಮಾಜಿ ಸಂಸದ ಪ್ರಜ್ವಲ್ ರೇವಣ್ಣ 35ನೇ ಹುಟ್ಟುಹಬ್ಬವನ್ನು ಕೈದಿಯಾಗಿ, ಕೂಲಿ ಕೆಲಸದೊಂದಿಗೆ ಜೈಲಿನಲ್ಲಿ ಆಚರಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಅದ್ದೂರಿಯಾಗಿ ಆಚರಿಸಿಕೊಂಡಿದ್ದ ಹುಟ್ಟುಹಬ್ಬದ ವಿಡಿಯೋ ಈಗ ವೈರಲ್ ಆಗಿದ್ದು, ಶಿಕ್ಷೆಯ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಆಗಸ್ಟ್ ೫ ರಂದು ಪ್ರಜ್ವಲ್ ರೇವಣ್ಣ ಜನ್ಮದಿನ. ಎರಡು ವರ್ಷಗಳ ಹಿಂದೆ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ಪ್ರಜ್ವಲ್‌ ಕಳೆದ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಆರೋಪಿಯಾಗಿ ಜೈಲಿ ಸೇರಿದ್ದರು. ಇನ್ನು ಈ ಬಾರಿ ಕೈದಿಯಾಗಿ ಜೈಲುಪಾಲಾಗಿದ್ದಾರೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಶುಕ್ರವಾರ ದೋಷಿ ಎಂದು ಘೋಷಿಸಿದ್ದ ಕೋರ್ಟ್‌ ಶನಿವಾರ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿತ್ತು. ಅದೇ ದಿನ ಪರಪ್ಪನ ಅಗ್ರಹಾರದ ಸೆಂಟ್ರಲ್‌ ಜೈಲಿನಲ್ಲಿ ಪ್ರಜ್ವಲ್‌ನನ್ನು ವಿಚಾರಣಾಧೀನ ಕೈದಿಗಳ ಸೆಲ್‌ನಿಂದ, ಸಜಾ ಕೈದಿಗಳ ಸೆಲ್‌ಗೆ ವರ್ಗಾವಣೆ ಮಾಡಲಾಗಿತ್ತು. ಇನ್ನು ಭಾನುವಾರ ಜೈಲಿನ ಬಿಳಿ ಬಣ್ಣದ ಬಟ್ಟೆ ನೀಡಿ, ಸೋಮವಾರ ಜೈಲಿನಲ್ಲಿ ಯಾವ ಕೆಲಸ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಶಿಕ್ಷೆ ಪ್ರಕಟವಾದ ಕೂಡಲೆ, ಪ್ರಜ್ವಲ್ ರೇವಣ್ಣನನ್ನು ಪರಪ್ಪನ ಅಗ್ರಹಾರ ಜೈಲಿನ ವಿಚಾರಣಾಧೀನ ಸೆಲ್‌ನಿಂದ, ಸಜಾ ಕೈದಿಗಳ ಸೆಲ್‌ಗೆ ವರ್ಗಾವಣೆ ಮಾಡಲಾಗಿದೆ. ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ದಿನಚರಿ ಹೇಗಿದೆ ಅನ್ನೋದನ್ನ ನೋಡೊದಾದ್ರೆ ಬೆಳಿಗ್ಗೆ 6:30ಕ್ಕೆ ಎದ್ದೇಳಬೇಕು, 7:30ಕ್ಕೆ ಉಪಹಾರ, 11:30ಕ್ಕೆ ಮಧ್ಯಾಹ್ನ ಭೋಜನ, ಸಂಜೆ 6:30ಕ್ಕೆ ಕೋಣೆಗೆ ಹಿಂತಿರುಗಬೇಕು. ಇದರ ನಡುವೆ ವಾರಕ್ಕೆ 6 ದಿನ, 8 ಗಂಟೆಗಳ ಕೂಲಿ ಕೆಲಸ ಅನಿವಾರ್ಯ. ಪ್ರಜ್ವಲ್‌ಗೆ ತಿಂಗಳ ದಿನಗಳಲ್ಲಿ ಬೇಕರಿ, ಹೈನುಗಾರಿಕೆ, ತರಕಾರಿ ಬೆಳೆಯುವುದು ಅಥವಾ ಮರಕೆಲಸ ಮುಂತಾದ ಕೆಲಸಗಳಲ್ಲಿ ಒಂದನ್ನು ನೀಡಲಾಗುತ್ತದೆ. ದಿನಗೂಲಿ ₹540 ರೂಪಾಯಿ.

ಇನ್ನೊಂದು ಪ್ರಮುಖ ಸಂಗತಿ ಏನೆಂದ್ರೆ ಪ್ರಜ್ವಲ್ ರೇವಣ್ಣ ಅವರ ಹಳೆಯ ಹುಟ್ಟುಹಬ್ಬದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಅವರು, “ದಯವಿಟ್ಟು ನನ್ನ ಹುಟ್ಟುಹಬ್ಬಕ್ಕೆ ಭೇಟಿ ಕೊಡಬೇಡಿ” ಎಂಬ ಮನವಿ ಮಾಡುತ್ತಿದ್ದಾರೆ. ಆದರೆ ಆ ಸಮಯದಲ್ಲಿ ಅವರು ಜನಪ್ರಿಯ ನಾಯಕನಾಗಿ ಸುತ್ತಿದ್ದರು. ಈ ವಿಡಿಯೋವನ್ನು ಬಳಸಿಕೊಂಡು ಹಲವರು ಟ್ರೋಲ್ ಮಾಡುತ್ತಿದ್ದಾರೆ, ಮೀಮ್ಸ್ ಹರಡುತ್ತಿದ್ದಾರೆ.

- Advertisement -

Latest Posts

Don't Miss