ನೋ ಕಪ್ ನೋ ಟೆನ್ಸನ್.. ನಿನ್ನೆ ನಡೆದ ಏಷ್ಯಾ ಕಪ್ ಫೈನಲ್ ಮ್ಯಾಚ್ ರಣರೋಚವಾಗಿತ್ತು. ಚಾಂಪಿಯನ್ ಪಟ್ಟವನ್ನು ಟೀಮ್ ಇಂಡಿಯಾ ಮುಡಿಗೇರಿಸಿಕೊಂಡಿದೆ. ಅಷ್ಟೇ ಅಲ್ಲ 5 ವಿಕೆಟ್‌ಗಳ ಅಂತರದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು, ಭಾರತ ಬಗ್ಗು ಬಡೆದಿದೆ. ಇನ್ನು ನೆನ್ನೆ ಮೈದಾನದಲ್ಲಿ ಮುಖ್ಯವಾಗಿ ಪಾಕಿಸ್ತಾನಕ್ಕೆ ಬಹಳಷ್ಟು ಮುಖಭಂಗಗಳಾಗಿದೆ. ಅದರಲ್ಲೂ ಟಾಪ್ 5 ಶೇಪೌಟ್‌ಗಳು ಇವೆ.
ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಹೊರತಾಗಿಯೂ ಟೀಮ್ ಇಂಡಿಯಾಗೆ ಟ್ರೋಫಿಯನ್ನು ಹಸ್ತಾಂತರಿಸಲಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಭಾರತೀಯ ಆಟಗಾರರು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿರುವುದು.
ಟೀಮ್ ಇಂಡಿಯಾ ಆಟಗಾರರು ಟ್ರೋಫಿ ಸ್ವೀಕರಿಸಲು ನಿರಾಕರಿಸುತ್ತಿದ್ದಂತೆ ಮೊಹ್ಸಿನ್ ನಖ್ವಿ ಏಷ್ಯಾಕಪ್ ಟ್ರೋಫಿಯನ್ನು ಹೋಟೆಲ್‌ಗೆ ತೆಗೆದುಕೊಂಡು ಹೋದರು. ಹೀಗಾಗಿ ಭಾರತ ತಂಡಕ್ಕೆ ಟ್ರೋಫಿ ನೀಡಲಾಗಿರಲಿಲ್ಲ. ಇದಾಗ್ಯೂ ವಿತ್ ಔಟ್ ಟ್ರೋಫಿಯೊಂದಿಗೆ ಟೀಮ್ ಇಂಡಿಯಾ ಆಟಗಾರರು ಸಖತ್ತಾಗೇ ಸಂಭ್ರಮಿಸಿದರು. ಟ್ರೋಫಿ ಇಲ್ಲದಿದ್ದರೂ, ಟೀಮ್ ಇಂಡಿಯಾ ಆಟಗಾರರು ಫೋಟೋ ಎಡಿಟ್ ಮೂಲಕ ಕಪ್ ಚಿತ್ರ ಹಾಕಿ ಪೋಸ್ ನೀಡಿದ್ದಾರೆ. ಅಲ್ಲದೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಮತ್ತು ಇದು ಸಖತ್ ವೈರಲ್ ಆಗುತ್ತಾ ಇದೆ.
ಕಳೆದ ಬಾರಿ ಮ್ಯಾಚ್‌ನಲ್ಲಿ ಅರ್ಧಶತಕ ಹೊಡೆದು ಬ್ಯಾಟ್ ಅನ್ನು ಗನ್ ಮಾದರಿಯಲ್ಲಿ ಹಿಡಿದು ಸೆಲೆಬ್ರೆಷನ್ ಮಾಡಿದ್ದ ಪಾಕ್ ಆಟಗಾರ ಸಾಹಿಬ್ ಜಾದಾ ಫರ್ಹಾನ್ ಫೈನಲ್‌ನಲ್ಲಿ ಅದ್ಭುತ ಅರ್ಧಶತಕ ಗಳಿಸಿದರು. ಆದರೆ ನಂತರ ವರುಣ್ ಚಕ್ರವರ್ತಿ ಅವರ ಸ್ಪಿನ್ ತಂತ್ರ ಅರಿಯದೆ ಔಟ್ ಆದರು. ಔಟ್ ಆದ ತಕ್ಷಣ ಕೋಪಗೊಂಡ ಫರ್ಹಾನ್ ವಿಕೆಟ್ ಬದಿಯಲ್ಲಿ ಕೂತು ಬ್ಯಾಟ್ ಅನ್ನು ನೆಲಕ್ಕೆ ಹೊಡೆದಿದ್ದಾರೆ. ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಷ್ಟೆ ಅಲ್ಲದೆ ನೆನ್ನೆ ಇಂಡಿಯಾ ಮ್ಯಾಚ್ ಗೆದ್ದ ನಂತರ ಕಾಒಇಸ್ತಾನಕ್ಕೆ ರನ್ನರ್ ಅಪ್ ಚೆಕ್ ನೀಡಲಾಗುತ್ತದೆ, ಆಗ ಪಾಕ್ ಆಟಗಾರ ಸಲ್ಮಾನ್ ಅದನ್ನು ಅಲ್ಲೆ ಎಸೆದು ಹೋಗುತ್ತಾರೆ.
ಭಾರತ ತಂಡ ಏಷ್ಯಾ ಕಪ್ ಟ್ರೋಫಿಯನ್ನು ನಿರಾಕರಿಸಿದ ನಂತರ, ನಾಯಕ ಸೂರ್ಯಕುಮಾರ್ ಯಾದವ್ ಅವರು, ವಿಜೇತ ತಂಡವನ್ನು ನೆನಪಿಸಿಕೊಳ್ಳುತ್ತಾರೆ, ಬದಲಾಗಿ ಟ್ರೋಫಿಯನ್ನು ಅಲ್ಲ ಎಂದು ಹೇಳಿದರು. ಅವರು ತಿಲಕ್ ವರ್ಮಾ ಅವರೊಂದಿಗಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಎಮೋಜಿಗಳೊಂದಿಗೆ ಟ್ರೋಫಿಯನ್ನು ರಚಿಸಿದ್ದಾರೆ. ಶೀರ್ಷಿಕೆಯಲ್ಲಿ, ಪಂದ್ಯ ಮುಗಿದ ನಂತರ, ಚಾಂಪಿಯನ್‌ಗಳನ್ನು ಮಾತ್ರ ನೆನಪಿಸಿಕೊಳ್ಳಲಾಗುತ್ತದೆ, ಟ್ರೋಫಿಯ ಚಿತ್ರವಲ್ಲ ಎಂದು ಬರೆದುಕೊಂಡಿದ್ದಾರೆ.
ಕಳೆದ ಪಂದ್ಯದಲ್ಲಿ, ಪಾಕಿಸ್ತಾನ ಬೌಲರ್ ಹ್ಯಾರಿಸ್ ರೌಫ್ ಮೈದಾನದಲ್ಲಿ ವಿವಾದಾತ್ಮಕ ಸನ್ನೆಗಳ ಮೂಲಕ ಭಾರತೀಯ ಅಭಿಮಾನಿಗಳನ್ನು ಕೆರಳಿಸಿದರು. ಹಿಂದಿನ ಪಂದ್ಯದಲ್ಲಿನ ವಿವಾದಾತ್ಮಕ ವರ್ತನೆಗೆ ಬುಮ್ರಾ ಇತ್ತೀಚಿನ ಪಂದ್ಯದಲ್ಲಿ ರೌಫ್ ಮೇಲೆ ಸೇಡು ತೀರಿಸಿಕೊಂಡರು. ಬುಮ್ರಾ ಅವರ ಅದ್ಭುತ ಯಾರ್ಕರ್‌ನಿಂದ ರೌಫ್ ಕ್ಲೀನ್ ಬೌಲ್ಡ್ ಆದರು. ನಂತರ, ಬುಮ್ರಾ ಕೂಲ್ ಆಗಿ ಜೆಟ್ ಆಚರಣೆ ಮಾಡಿದರು. ಭಾರತೀಯ ರಫೇಲ್ ಜೆಟ್ ಫೈಟರ್‌ಗಳು ಪಾಕಿಸ್ತಾನಿ ವಾಯುನೆಲೆಯನ್ನು ನಾಶಪಡಿಸಿ ಸುರಕ್ಷಿತವಾಗಿ ಮರಳಿದ್ದಾರೆ ಎಂದು ಅವರು ತಮ್ಮ ಕೈಯಿಂದ ತೋರಿಸಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ