- Advertisement -
ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲೂಕಿನ, ಧರ್ಮಪುರ ರಸ್ತೆಯಲ್ಲಿರುವ ದೇವರಕೊಟ್ಟ ಗ್ರಾಮಸ್ಥರೂ ಕೊರೊನಾ ಭೀತಿಯಿಂದ, ತಮ್ಮೂರಿಗೆ ಬರುವ ಎಲ್ಲಾ ರಸ್ತೆಯನ್ನು ಬಂದ್ ಮಾಡಿದ್ದಾರೆ. ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮುಳ್ಳಿನ ಬೇಲಿ ಹಾಕಿರುವ ಗ್ರಾಮಸ್ಥರು, ನಮ್ಮ ಊರಿಗೆ ಬರಬೇಡಿ. ಕೊರೋನಾ ಹರಡಬೇಡಿ ಎಂಬುದಾಗಿ ಜಾಗೃತಿ ಮೂಡಿಸುತ್ತಿದ್ದಾರೆ.
ಹೌದು.. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ, ದೇವರಕೊಟ್ಟ ಗ್ರಾಮಸ್ಥರು, ಕೊರೊನಾ ಹರಡುವ ಭೀತಿಯಿಂದ, ಊರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಗೂ ಬೇಲಿ ಹಾಕಿದ್ದಾರೆ. ಈ ಮೂಲಕ ಕೊರೊನಾ ಹರಡೋದನ್ನು ಸ್ವಯಂ ಗ್ರಾಮಸ್ಥರೇ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದಾರೆ.
- Advertisement -