ಜಿಲ್ಲೆಯ ಎರಡು ತಾಲೂಕಿನಲ್ಲಿ ಇಲ್ಲ ಅಗ್ನಿಶಾಮಕ ಠಾಣೆ

www.karnatakatv.net : ಹುಬ್ಬಳ್ಳಿ: ಜಗತ್ತು ಎಷ್ಟು ಆಧುನಿಕತೆಯತ್ತ ವೇಗವಾಗಿ ಹೊರಟಿದೆಯೋ ಅಷ್ಟೇ ಪ್ರಮಾಣದಲ್ಲಿ ಹಾನಿಗಳು ಸಂಭವಿಸುತ್ತಿವೆ.‌ ಈ ನಿಟ್ಟಿನಲ್ಲಿ ತಾಲ್ಲೂಕಿಗೊಂದು ಅಗ್ನಿಶಾಮಕ ಠಾಣೆ ಸ್ಥಾಪಿಸಿರಬೇಕು ಎಂಬುವಂತ ನಿಯಮ ಇದ್ದರೂ ಕೂಡ ಧಾರವಾಡ ಜಿಲ್ಲೆಯ ಎರಡು ತಾಲೂಕು ಅಗ್ನಿಶಾಮಕ ಠಾಣೆಯಿಂದ ವಂಚಿತವಾಗಿದೆ.

ಹೌದು.. ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಧಾರವಾಡ ಜಿಲ್ಲೆಯಲ್ಲಿ ಪ್ರಮುಖ ಎರಡು ತಾಲೂಕುಗಳಾದ ಅಳ್ನಾವರ ಮತ್ತು‌ ನವಲಗುಂದ ತಾಲೂಕಿನಲ್ಲಿ ಮಾತ್ರ ಅಗ್ನಿಶಾಮಕ ಠಾಣೆಗಳೇ ಇಲ್ಲ. ಅಲ್ಲದೇ ತಾಲೂಕಿನಲ್ಲಿ ಯಾವುದೇ ಅಗ್ನಿ ಅವಘಡಗಳು ಸಂಭವಿಸಿದರೇ ಯಾರು ಹೊಣೆ ಎಂಬುವಂತ ಯಕ್ಷ ಪ್ರಶ್ನೆ ಏಳುತ್ತದೆ.

ಜಿಲ್ಲೆ ಪ್ರಮುಖ ತಾಲೂಕಿನಲ್ಲಿ ಒಂದಾಗಿರುವ ನವಲಗುಂದ ತಾಲೂಕಿನಲ್ಲಿ ಈ ಹಿಂದೇ ಅಗ್ನಿಶಾಮಕ ಠಾಣೆ ಮಂಜೂರಾಗಿತ್ತು. ಆದರೇ ಬೇಕಾದ ಎರಡು ಎಕರೆ ಜಮೀನು ಸಿಗದೆ ಇರುವ ಕಾರಣದಿಂದ ನವಲಗುಂದದಲ್ಲಿ ಸ್ಥಾಪನೆ ಆಗಬೇಕಿದ್ದ ಠಾಣೆಯನ್ನು ಅಣ್ಣಿಗೇರಿ ಎಪಿಎಂಸಿ ಸ್ಥಳಾಂತರ ಮಾಡಬೇಕಾಯಿತು. ಇನ್ನೂ ನವಲಗುಂದದಲ್ಲಿ ಎಲ್ಲಿ ಆದರೂ ಬೆಂಕಿ ಕಾಣಿಸಿಕೊಂಡರೇ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಬೇಕಾದರೇ ಅಣ್ಣಿಗೇರಿ ಹಾಗೂ ಅಮರಗೋಳದ ಸಿಬ್ಬಂದಿಯೇ ಹೋಗಬೇಕಾಗಿದೆ.

ಇನ್ನೂ ಹೊಸ ತಾಲೂಕು ಆಗಿರುವ ಅಳ್ನಾವರದಲ್ಲಿ ಸುಮಾರು ಮೂರು ವರ್ಷಗಳಿಂದ ಜಾಗಕ್ಕಾಗಿ ಹುಡುಕಾಟ ನಡೆದಿದೆ. ಆದರೂ ಕೂಡ ಯಾವುದೇ ದಾನಿಗಳು ಮುಂದೆ ಬರುತ್ತಿಲ್ಲ. ಅಲ್ಲದೇ ಜಾಗೆ ಕೂಡ ಸಿಗುತ್ತಿಲ್ಲ. ಈ ತಾಲೂಕಿನಲ್ಲಿ ಪದೇ ಪದೇ ಕಬ್ಬಿನ ಹೊಲಕ್ಕೆ ಬೆಂಕಿ ಹತ್ತಿಕೊಳ್ಳುವುದರಿಂದ ಈ ತಾಲೂಕಿಗೆ ಅಗ್ನಿಶಾಮಕ ಠಾಣೆ ಅವಶ್ಯಕತೆ ಹೆಚ್ಚಿದೆ.

ಒಟ್ಟಿನಲ್ಲಿ ಜಾಗೆಯ ಸಮಸ್ಯೆಯಿಂದ ಸ್ಟಾಪ್ ಆಗಿರುವ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಗ್ರಾಮಸ್ಥರು ಕೈ ಜೋಡಿಸಿ ಭೂಮಿಯನ್ನು ಒದಗಿಸಿ ನಿಮ್ಮ ತಾಲೂಕಿನ ರಕ್ಷಣೆಯನ್ನು ನೀವು ಮಾಡಬೇಕಿದೆ.

About The Author