ಹೆಲ್ಮೆಟ್ ಅಂದ್ರೆ H-Head, E-Ear, L-Lips, M-Mouth, E-Eye, T-Tooth. ಇದು ವಾಹನ ಸವಾರರಿಗೆ ಜೀವರಕ್ಷಕ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ರಸ್ತೆ ಸುರಕ್ಷತೆಗಾಗಿ ಒಂದು ಮಹತ್ವಪೂರ್ಣ ಮತ್ತು ಧೃಡ ನಿರ್ಧಾರ ತೆಗೆದುಕೊಂಡಿದೆ. ‘ನೋ ಹೆಲ್ಮೆಟ್, ನೋ ಇಂಧನ’ ಎಂಬ ಹೊಸ ಅಭಿಯಾನವನ್ನು ಸೆಪ್ಟೆಂಬರ್ 1, 2025ರಿಂದ ರಾಜ್ಯದಲ್ಲಿ ಜಾರಿಗೆ ತರುವುದಾಗಿ ಘೋಷಿಸಿದೆ. ಈ ನಿಯಮದ ಅಡಿಯಲ್ಲಿ ಹೆಲ್ಮೆಟ್ ಧರಿಸದವರು ಪೆಟ್ರೋಲ್ ಪಂಪ್‌ಗಳಲ್ಲಿ ತಮ್ಮ ಬೈಕ್ ಅಥವಾ ಸ್ಕೂಟರ್‌ಗೆ ಇಂಧನವನ್ನು ಪಡೆಯಲು ಸಾಧ್ಯವಿಲ್ಲ.
ಈ ಅಭಿಯಾನವನ್ನು ದ್ವಿಚಕ್ರ ವಾಹನ ಹೆಲ್ಮೆಟ್ ತಯಾರಕರ ಸಂಘವು ಬೆಂಬಲಿಸಿದೆ. ಆದರೆ ನಕಲಿ ಹೆಲ್ಮೆಟ್‌ಗಳ ಪೂರೈಕೆಯ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದೆ. ಸರಕಾರವು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸಂಘವು ಮನವಿ ಮಾಡಿದೆ.
110 ರೂ.ಗೆ ಮಾರಾಟವಾಗುವ ಹೆಲ್ಮೆಟ್‌ಗಳಲ್ಲಿ 95 ಪ್ರತಿಶತ ನಕಲಿಯಾಗಿವೆ. ಇವು ಜನರ ಜೀವವನ್ನು ಕಾಪಾಡುವ ಬದಲು ಅಪಘಾತಗಳಲ್ಲಿ ಅವರ ಜೀವವನ್ನು ಕಳೆದುಕೊಳ್ಳುವಂತೆ ಮಾಡುತ್ತಿವೆ ಎಂದು ದ್ವಿಚಕ್ರ ವಾಹನ ಹೆಲ್ಮೆಟ್ ತಯಾರಕರ ಸಂಘದ ಅಧ್ಯಕ್ಷ ರಾಜೀವ್ ಕಪೂರ್ ಹೇಳಿದ್ದಾರೆ.
ನಕಲಿ ಹೆಲ್ಮೆಟ್‌ಗಳು ಮಾರಾಟವಾಗುತ್ತಿರುವ ಹಿನ್ನಲೆಯಲ್ಲಿ, ಅವರು ಸರಕಾರದಿಂದ ಐಎಸ್‌ಐ ಪ್ರಮಾಣೀಕೃತ, ಮೂಲ ಹೆಲ್ಮೆಟ್‌ಗಳನ್ನು ಕಡ್ಡಾಯವಾಗಿ ಮಾರಾಟ ಮಾಡುವಂತೆ ಸೂಚಿಸಿದ್ದಾರೆ. ಪ್ರತಿ ದ್ವಿಚಕ್ರ ವಾಹನದ ಮಾರಾಟದೊಂದಿಗೆ ಕನಿಷ್ಠ ಎರಡು ಐಎಸ್‌ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ದೆಹಲಿಯ ಹಲವಾರು ಪೆಟ್ರೋಲ್ ಪಂಪುಗಳಲ್ಲಿ ಮಾರಾಟವಾಗುವ ಹೆಲ್ಮೆಟ್‌ಗಳಲ್ಲಿ 70 ಪ್ರತಿಶತಕ್ಕೂ ಹೆಚ್ಚು ನಕಲಿ ಎಂಬುದಾಗಿ ಹಲವು ವರದಿಯಲ್ಲಿ ಗೊತ್ತಾಗಿದೆ. ಈ ಹೆಲ್ಮೆಟ್‌ಗಳು ಮೂಲ ರಕ್ಷಣೆ ನೀಡುವವುದರಿಂದ ಹಲವಾರು ಅಪಘಾತಗಳಲ್ಲಿ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಒಂದು ದೊಡ್ಡ ಉಪಕ್ರಮವನ್ನು ಕೈಗೊಂಡಿದೆ ‘ನೋ ಹೆಲ್ಮೆಟ್, ನೋ ಇಂಧನ’ ಎಂಬ ಹೊಸ ನಿಯಮವನ್ನ ಸೆಪ್ಟೆಂಬರ್ 1 ರಿಂದ ಜಾರಿ ತರೋಕೆ ಮುಂದಾಗಿದೆ.




