ಏನೇ ಮಾತುಕತೆ ಆದ್ರೂ ಅಂತಿಮವಾಗಿ ದೆಹಲಿಗೆ ಹೋಗಬೇಕು!

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಏನೇ ಮಾತುಕತೆ ಆದರೂ ಅಂತಿಮವಾಗಿ ದೆಹಲಿಗೆ ಹೋಗಬೇಕು ಎಂದರು.

ಮಾಧ್ಯಮಗಳ ಜೊತೆ ಇಂದು ಮಾತನಾಡಿ ಸಚಿವ ಸತೀಶ್ ಜಾರಕಿಹೊಳಿ, ಇವರ ಹಂತದಲ್ಲಿ ಮುಗಿದರೆ ಹೋಯ್ತು ಹೈಕಮಾಂಡ್ ನಿರ್ದೇಶನದ ಮೇರೆಗೆ ಮೀಟಿಂಗ್ ಮಾಡಿದ್ದಾರೆ. ಅವರಿಬ್ಬರ ಹೇಳಿಕೆಯಿಂದ ಗೊಂದಲ ಸರಿಯಾಗಬೇಕು ಎಂದರು. ಬ್ರೇಕ್​ಫಾಸ್ಟ್ ಮೀಟಿಂಗ್ ಒಳ್ಳೆಯ ಬೆಳವಣಿಗೆ, ಕೊನೆಗೆ ಇತ್ಯರ್ಥ ಆಗದೆ ಅದೇ ಸಮಾಧಾನ. ಇವತ್ತಿಂದ ಪಕ್ಷದ ಬಗ್ಗೆ, ಅಭಿದೃದ್ದಿ ಬಗ್ಗೆ ಗಮನ ಕೊಡಬೇಕು ಎಂದರು. ಅಧಿಕಾರ ಹಂಚಿಕೆ ಪ್ರಶ್ನೆ ಬರುವುದಿಲ್ಲ ಇವರು ಇಬ್ಬರು ಹೇಳಿದ್ದಾರೆ ಅಂದರೆ ಅದು ಮುಗಿಯಿತು ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂಬ ದುರ್ಯೋಧನ ಐಹೊಳೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ನಮ್ಮಲ್ಲಿ ಮಾತ್ರ ಈ ಪರಿಸ್ಥಿತಿ ಇಲ್ಲ ಬಿಜೆಪಿಯಲ್ಲೂ ಕೂಡ ಇದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಬೇಡ ಅಂತಾ ಶಾಸಕ ಬಸನಗೌಡ ಪಾಟೀಲ್ ಯತ್ನಳ್ ಹೇಳುತ್ತಾರೆ ಎಂದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author