ರಾಜ್ಯ ರಾಜಕಾರಣದಲ್ಲಿ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯ ಬಗ್ಗೆ ಪರಿಷತ್ ಸದಸ್ಯ ಸಿ.ಟಿ. ರವಿ ಗಂಭೀರ ಟೀಕೆ ಮಾಡಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಮಂತ್ರಿಗಳು ಜನರ ಸಂಪರ್ಕ ಕಳೆದುಕೊಂಡಿದ್ದು, ಸಹಕಾರ ಸಂಘಗಳ ಚುನಾವಣೆಯಲ್ಲಿ ಮುಳುಗಿ ಹೋಗಿದ್ದಾರೆ.
ಜನರ ಕಷ್ಟಗಳನ್ನು ಕೇಳುವ ಸಂವೇದನೆ ಮಂತ್ರಿಗಳಲ್ಲಿ ಇರಲಿಲ್ಲ. ಈಗಲಾದರೂ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಯಾರು ಸಿಎಂ ಆಗುತ್ತಾರೋ ಮುಖ್ಯವಲ್ಲ, ಜನ ನಿಮಗೆ ಅಧಿಕಾರ ನೀಡಿದ್ದಾರೆ. ಮೊದಲು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಿ.ಟಿ. ರವಿ ಹೇಳಿದ್ದಾರೆ.
ಭ್ರಷ್ಟಾಚಾರ ಕುರಿತು ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರ ಪತ್ರ ಓದಿ ನಾಚಿಕೆ ಆಗಲಿಲ್ಲವಾ? ಕಮೀಷನ್ ಮತ್ತು ಭ್ರಷ್ಟಾಚಾರ ಡಬಲ್ ಆಗಿದೆ. 19 ಅಗತ್ಯ ವಸ್ತುಗಳ ಬೆಲೆ ಏರಿಕೆ ಪಟ್ಟಿ ನೋಡಿದರೆ ಜನರ ಹೃದಯ ಕಂಗಾಲಾಗಿದೆ. ಅಡುಗೆ ಎಣ್ಣೆಯಿಂದ ಕುಡಿಯೋ ಎಣ್ಣೆ ವರೆಗೆ ಬೆಲೆ ಏರಿಕೆ ಹೆಚ್ಚಾಗಿದೆ ಎಂದರು.
ಸಿಎಂ ಬದಲಾವಣೆಯಿಂದ ಪರಿಸ್ಥಿತಿ ಬದಲಾಗೊದಿಲ್ಲ, ಸರ್ಕಾರವೇ ಬದಲಾಗಬೇಕು. ಒಬ್ಬ ಭ್ರಷ್ಟ ಹೋದರೆ ಮತ್ತೊಬ್ಬ ಭ್ರಷ್ಟ ಬರುತ್ತಾನೆ. ಯಾರು ಸಿಎಂ ಆದರೂ ರಾಜ್ಯಕ್ಕೆ ಒಳ್ಳೆಯದಾಗುವುದಾಗಿ ವಿಶ್ವಾಸವಿಲ್ಲ. ಆದ್ದರಿಂದ, ಕಾಂಗ್ರೆಸ್ ಪಕ್ಷವೇ ಅಧಿಕಾರದಿಂದ ಹೊರಹೋಗಬೇಕು ಎಂದು ಸಿ.ಟಿ. ರವಿ, ನಿಖರವಾಗಿ ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ