Wednesday, May 29, 2024

Latest Posts

ಯಾರೂ ನಮ್ಮ‌ ಬಳಿ ರಾಜೀನಾಮೆ ಬಗ್ಗೆ ಚರ್ಚೆ ಮಾಡಿಲ್ಲ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ

- Advertisement -

Kolar News: ಕೋಲಾರ: ಕೋಲಾರ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಐವರು ಶಾಸಕರ ರಾಜೀನಾಮೆ ಬೆದರಿಕೆ ವಿಚಾರವಾಗಿ, ಕೋಲಾರದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿದ್ದು, ಶಾಸಕರು, ಎಂಎಲ್ ಸಿಗಳ ರಾಜೀನಾಮೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಯಾರೂ ನಮ್ಮ‌ ಬಳಿ ರಾಜೀನಾಮೆ ಬಗ್ಗೆ ಚರ್ಚೆ ಮಾಡಿಲ್ಲ ಎಂದಿದ್ದಾರೆ.

ಎಲ್ಲರ ವಿಶ್ವಾಸದ ಮೇಲೆ ಅಭ್ಯರ್ಥಿಯನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಮಾ.25ರಂದು ಕೆಪಿಸಿಸಿಯಲ್ಲಿ ನಡೆದ ಸಭೆಯಲ್ಲಿ ಎಲ್ಲರೂ ಅಭ್ಯರ್ಥಿಯನ್ನು ಗೆಲ್ಲಿಸುವ ಬಗ್ಗೆ ಒಮ್ಮತದ ತೀರ್ಮಾನ ಆಗಿದೆ. ಇಂದು ಸಂಜೆ ಅಥವಾ ನಾಳೆಯೊಳಗೆ ಟಿಕೆಟ್ ಘೋಷಣೆ ಆಗುತ್ತದೆ. ಕೆಹೆಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದನ್ನ ಅವರಿಗೆ ಟಿಕೆಟ್ ಫೈನಲ್ ಆಗಬಹುದು. ಯಾವುದೇ ಕಾರಣಕ್ಕೂ ಶಾಸಕರು ರಾಜೀನಾಮೆ ಕೊಡುವುದಿಲ್ಲ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಒಟ್ಟಾಗಿ ಗೆಲ್ಲಿಸೋಣ ಅಂತ ಎಲ್ಲರೂ ಹೇಳಿದ್ದಾರೆ ಎಂದು ಲಕ್ಷ್ಮೀ ನಾರಾಯಣ ಹೇಳಿದ್ದಾರೆ.

ಜೂನ್ 4ರ ನಂತರ ಡಿಕೆಶಿ- ಸಿದ್ದರಾಮಯ್ಯ ಈ ಕಾರಣಕ್ಕಾಗಿ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ: ಅಗರ್ವಾಲ್

ಮಂಡ್ಯದಲ್ಲಿ NDA ಗೆಲ್ಲಬೇಕು: ಮಂಡ್ಯ ಗೆಲುವಿಗೆ ವಿಜಯೇಂದ್ರ ಕಾರ್ಯತಂತ್ರ

ಜೆಡಿಎಸ್ ಪಕ್ಷದ ಯುವ ಮುಖಂಡ ಚಂದನ್‌ಗೆ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಪಟ್ಟ

- Advertisement -

Latest Posts

Don't Miss