ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಇರುದ್ದ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ಉತ್ತರ ಕರ್ನಾಟಕದ ಸಮಸ್ಯೆಗೆ ನೇರವಾಗಿ ಉತ್ತರ ಕೊಡಬೇಕಾದವರು ಅವರು. ಈಗಾಗಲೇ ನಾವು ಮುಖ್ಯಮಂತ್ರಿಗಳು ಎಲ್ಲಾ ಸೇರಿ ಮೆಕ್ಕೆಜೋಳ ವಿಚಾರದಲ್ಲಿ, ಕಬ್ಬಿನ ವಿಚಾರದಲ್ಲಿ ಸರ್ಕಾರಕ್ಕೆ ದುಬಾರಿಯಾಗುವ ಹಾಗೆ ತಿರ್ಮಾನ ಮಾಡಿದ್ದೀವಿ. ಮೆಕ್ಕೆಜೋಳ ಖರೀದಿ ಮಾಡುವುದಕ್ಕೆ. ಇಲ್ಲಿಯವರೆಗೂ ಕೇಂದ್ರ ಸರ್ಕಾರ ಬಾಯ್ಬಿಟ್ಟಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಸಂಸತ್ ಸದಸ್ಯರು ಏನಿದ್ದಾರೆ, ಅವರು ಎಲ್ಲಾ ವಿಚಾರದಲ್ಲೂ ಇವತ್ತಿನವರೆಗೂ ಧ್ವನಿ ಎತ್ತಿಲ್ಲ. ಅವರಿಗೆ ಅರಿವಿಲ್ಲವೇ, ಈಗ ಬೊಮ್ಮಯಿ ಹೇಳ್ತಾರೆ, ನಾವು ತಗೋಬೇಕು, ನಾವು ಸೆಂಟರ್ ಮಾಡಬೇಕು ಅಂತಾ. ಕೇಂದ್ರ ಸರ್ಕಾರದ ಪಾಲೇನಿದು? ಬೆಲೆ ತಿರ್ಮಾನ ಮಾಡುವವರು ಯಾರು? ಎಂದು ಪ್ರಶ್ನಿಸಿದರು.
ಪ್ರತಿಯೊಂದಕ್ಕೂ ಬೆಲೆ ತಿರ್ಮಾನ ಮಾಡುವವರು ಯಾರು? ಇವತ್ತಿನವರೆಗೂ ಅವರು ಯಾವುದೇ ತಿರ್ಮಾನ ತೆಗೆದುಕೊಂಡಿಲ್ಲ. ಹಾಗಾಗಿ ಅದನ್ನು ನಾವು ಹೇಳ್ತೀವಿ. ಪರಿಹಾರ ಕೊಡೋಕೆ ನಾವು ಇರೋದು ಆದರೆ ಕೇಂದ್ರ ಸರ್ಕಾರದ ಜವಾಬ್ದಾರಿ ಇದೆ ಅಲ್ವಾ? ಎಂದು ಪ್ರಶ್ನಿಸಿದರು. ಇಲ್ಲಿವರೆಗೂ ಯಾಕೆ ಬೊಮ್ಮಾಯಿ ಅವರು ಇದನ್ನು ಪಾರ್ಲಿಮೆಂಟ್ ಅಲ್ಲಿ ರೈಸ್ ಮಾಡಿಲ್ಲ. ಪ್ರಧಾನ ಮಂತ್ರಿ, ಅಗ್ರಿಕಲ್ಚರ್ ಮಿನಿಸ್ಟರ್ ಅವರನ್ನು ಯಾಕೆ ಭೇಟಿ ಮಾಡಿಲ್ಲ ಇಷ್ಟೆಲ್ಲಾ ಮಾತನಾಡುವವರು ಎಂದು ಕಿಡಿಕಾಡಿದರು.
ಇನ್ನು ನೀರಾವರಿ ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿ, ನೋಡ್ರೀ ನಾವು ಮಾಡ್ದಷ್ಟು, ನನ್ನ ಅವಧಿಯಲ್ಲಿ ಮಾಡಿದಷ್ಟು, ಇತಿಹಾಸದಲ್ಲೇ ಯಾರು ಮಾಡಿಲ್ಲ. ಇತಿಹಾಸ ಹೋಗಿ ನೋಡಿದರೂ ಸಿಗಲ್ಲ. ಯಾರು ಕೂಡ ಮಾಡೊದಿಕ್ಕೆ ಆಗದೆ ಇರುವಂತ ಇತಿಹಾಸದ ತಿರ್ಪುಗಳನ್ನು ನಾನು ಮಾಡಿದ್ದೇನೆ. ಅಸೆಂಬ್ಲಿ ಅಲ್ಲಿ ಮಾತಾಡೋಕೆ ಹೇಳಿ ಅವರಿಗೆ ಎಂದು ಬಿಜೆಪಿಯವರಿಗೆ ಸವಾಲು ಹಾಕಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




