Web Story: ನೀವು ಪ್ಯೂರ್ ನಾನ್ ವೆಜಿಟೇರಿಯನ್ನಾ..? ನಾಾನ್ ವೆಜ್ ತಿನ್ನದೇ ಇರೋಕ್ಕೆ ಸಾಧ್ಯಾನೇ ಇಲ್ಲ ಅಂತಾ ಹೇಳುವವರಾ..? ಹಾಗಾದ್ರೆ ನೀವು ಯಾವತ್ತೂ ಭಾರತದಲ್ಲಿರುವ ಈ ಗ್ರಾಮಕ್ಕೆ ಹೋಗಲೇಬೇಡಿ. ಇಲ್ಲಿ ನಿಮಗೆ ಯಾವುದೇ ಕಾರಣಕ್ಕೂ ನಾನ್‌ವೆಜ್ ತಿನ್ನಲು ಸಿಗೋದೇ ಇಲ್ಲ. ಹಾಗಂತ ಇಲ್ಲಿ ಬರೀ ಹಿಂದೂಗಳೇ, ಜೈನರೇ, ಬ್ರಾಹ್ಮಣರೇ ಇಲ್ಲ. ಬದಲಾಗಿ ನಿಮಗಿಲ್ಲಿ ಮುಸ್ಲೀಂರೂ ಸಿಗುತ್ತಾರೆ. ಆದರೆ ಇಲ್ಲಿನ ಮುಸ್ಲಿಂರು ಪ್ಯೂರ್ ವೆಜಿಟೇರಿಯನ್ಸ್. ಹಾಗಾದ್ರೆ ಯಾವುದು ಆ ಗ್ರಾಮ ಅಂತೀರಾ..? ತಿಳಿಯೋಣ ಬನ್ನಿ..
ಗುಜರಾತ್‌ನ ಭಾವನಗರ ಜಿಲ್ಲೆಯ ಪಾಲಿತಾನಾ ಎಂಬ ಗ್ರಾಮದಲ್ಲಿ ಎಲ್ಲರೂ ಸಸ್ಯಹಾರಿಗಳೇ. ಇದು ಪ್ರಪಂಚದ ಮೊದಲ ಶಾಖಾಹಾರಿ ಗ್ರಾಮ. ಈ ಗ್ರಾಮದಲ್ಲಿ ನಾನ್‌ವೆಜ್ ತಿನ್ನುವುದು ದೂರದ ಮಾತು. ಇಲ್ಲಿ ನಾನ್‌ವೆಜ್ ಮಾರುವ ಹಾಗಿಲ್ಲ. ಕುರಿ, ಕೋಳಿ, ಮೀನು, ಮೊಟ್ಟೆ ಕಾಣಿಸಿಕೊಳ್ಳುವಂತಿಲ್ಲ. ಈ ಗ್ರಾಮದಲ್ಲಿ ಬದುಕಬೇಕು ಎನ್ನುವವರು ಇದನ್ನೆಲ್ಲ ತ್ಯಜಿಸಿ ಬದುಕುವುದನ್ನು ಕಲಿಯಬೇಕು.
ಹಾಗಾದ್ರೆ ಯಾಕೆ ಇದು ಪ್ಯೂರ್ ವೆಜ್ ಊರು ಅಂದ್ರೆ, ಇಲ್ಲಿ ಸಾವಿರಾರು ಜೈನರು ವಾಸಿಸುತ್ತಾರೆ. ನೂರಾರು ಜೈನ ಬಸದಿಗಳಿದೆ. 900ಕ್ಕೂ ಹೆಚ್ಚು ದೇವಸ್ಥಾನಗಳಿದೆ. ಅದರಲ್ಲಿ ಜೈನ ಬಸದಿ, ಮಸೀದಿಗಳು ಸೇರಿಕೊಂಡಿದೆ. ಪಾಾಲಿತಾನಾ ಜೈನ ಧರ್ಮದ ತೀರ್ಥ ಕ್ಷೇತ್ರವಾಗಿದೆ. 2014ರಲ್ಲಿ ಜೈನರೆಲ್ಲ ಸೇರಿ, ಈ ಗ್ರಾಮದಲ್ಲಿ ನಾನ್‌ವೆಜ್ ಬ್ಯಾನ್ ಮಾಡಬೇಕು ಎಂದು ಪ್ರತಿಭಟಿಸಿದರು. ಭಾರತ ಸರ್ಕಾರ, ಇವರ ಬೇಡಿಕೆಯಂತೆ, ಈ ಗ್ರಾಮದಲ್ಲಿ ನಾನ್‌ವೆಜ್ ಮಾರಾಟವನ್ನೇ ನಿಷೇಧಿಸಿತು. ಆವಾಗಿನಿಂದ ಇದು ಪ್ಯೂರ್ ವೆಜ್ ಸಿಟಿ ಎನ್ನಿಸಿಕೊಂಡಿದೆ.