News: ಒಕ್ಕಲಿಗ ಮಹಾಸಂಸ್ಥಾನದ ಗುರುಗಳಾದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು.
ಈ ಬಗ್ಗೆ ಮಾತನಾಡಿರುವ ಸ್ವಾಮೀಜಿಗಳು, ಪಾಕಿಸ್ತಾನ್ ಜಿಂದಾಬಾದ್ ಅನ್ನುವವರಿಗೆ ಶಿಕ್ಷೆ ಇಲ್ಲ, ಆದರೆ ನಮಗೆ ಮಾತ್ರ ನೋಟೀಸ್ ನೀಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಓರ್ವ ವ್ಯಕ್ತಿ ಘೋಷಣೆ ಕೂಗಿದ್ದ. ಆದರೆ ಆತನಿಗೆ ಏನೂ ಶಿಕ್ಷೆಯಾಗಲಿಲ್ಲ. ನಮಗಾದರೇ ನೋಟೀಸ್ ನೀಡುತ್ತಾರೆಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಕಿಸ್ತಾನದಲ್ಲಿ ಬೇರೆಯವರಿಗೆ ಓಟ್ ಹಾಕಲು ಅವಕಾಶವಿಲ್ಲ. ಅದೇ ರೀತಿ ಭಾರದಲ್ಲಿ ಮುಸ್ಲಿಂಮರಿಗೆ ಓಟ್ ಹಾಕುವ ಅವಕಾಶ ಕೊಡಬಾರದು. ವಕ್ಫ್ ಅನ್ನುವುದನ್ನೇ ತೆಗೆದು ಹಾಕಬೇಕು. ಅವರು ಅವರಷ್ಟಕ್ಕೆ ಇದ್ದರೆ, ನಮ್ಮ ದೇಶ ಚೆನ್ನಾಗಿರುತ್ತದೆ. ನಾವೆಲ್ಲರೂ ನೆಮ್ಮದಿಯಾಗಿ ಇರಬಹುದು ಎಂದು ಹೇಳಿದ್ದರು.
ಈ ಹೇಳಿಕೆ ವಿರೋಧಿಸಿ, ಸಯ್ಯದ್ ಅಬ್ಬಾಸ್ ಎಂಬುವವರು ಶ್ರೀಗಳ ವಿರುದ್ಧ ದೂರು ನೀಡಿದ್ದರು. ಇವರ ದೂರನ್ನು ಆಧರಿಸಿ, ಶ್ರೀಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
ಬಳಿಕ ಶ್ರೀಗಳಿಗೆ ನೋಟೀಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರು. ಆದರೆ ಶ್ರೀಗಳು ತಮಗೆ ಕ್ಯಾನ್ಸರ್ ಇರುವ ಕಾರಣ, ಠಾಣೆಗೆ ಬಂದು ವಿಚಾರಣೆ ಎದುರಿಸಲು ಸಾಧ್ಯವಿಲ್ಲ ಎಂದಿದ್ದರು. ಅಲ್ಲದೇ, ಪತ್ರವೂ ಬರೆದಿದ್ದರು. ಪೊಲೀಸರಿಗೆ ಬರೆದ ಪತ್ರದಲ್ಲಿ, ನಾನು ಮಾರಕ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದೇನೆ. ವೈದ್ಯರು ನನಗೆ ಹತ್ತು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಡಿಸೆಂಬರ್ 18ರಂದು ವಿಚಾರಣೆಗೆ ಬರುತ್ತೇನೆ. ಅಲ್ಲಿಯತನಕ ಬರಲು ಸಾಧ್ಯವಿಲ್ಲ. ಅಷ್ಟರೊಳಗೆ ವಿಚಾರಣೆ ನಡೆಸಲೇಬೇಕು ಎಂದಲ್ಲಿ, ನೀವು ಮಠಕ್ಕೆ ಬರಬಹುದು. ಮಠಕ್ಕೆ ಬಂದು ನನ್ನ ಹೇಳಿಕೆ ಪಡೆಯಬಹುದು ಎಂದು ಹೇಳಿದ್ದರು.