www.karnatakatv.net :ಚಾಮರಾಜನಗರ : ಲಸಿಕೆ ಹಾಕಿಸಿಕೊಳ್ಳದಿದ್ರೆ ರೇಷನ್ ಇಲ್ಲ, ಪೆನ್ಷನ್ನೂ ಇಲ್ಲ ಅಂತ ಆದೇಶ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಚಾಮರಾಜನಗರ ಡಿಸಿ ಇದೀಗ ತಮ್ಮ ಆದೇಶ ಹಿಂಪಡೆದಿದ್ದಾರೆ.
ಹೌದು, ಜಿಲ್ಲೆಯನ್ನ ಕೊರೋನಾ ಮುಕ್ತವನ್ನಾಗಿ ಮಾಡೋ ಭರದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಡಾ,ಎಂ.ಆರ್.ರವಿ ನಿನ್ನೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ರು. ಅದರ ಪ್ರಕಾರ ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿದ್ರೆ ಸರ್ಕಾರದ ಯೋಜನೆಯಡಿ ಬರುವ ಪೆನ್ಶನ್ ಗಳು ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು ನೀಡೋ ರೇಷನ್ ವಿತರಣೆ ಮಾಡೋದಿಲ್ಲ ಅಂತ ನಿಯಮ ಮಾಡಿದ್ರು. ಆದ್ರೆ ವಾಸ್ತವದಲ್ಲಿ ಇದರಿಂದ ಬಡವರಿಗೆ ತೀವ್ರ ತೊಂದರೆಯಾಗುತ್ತೆ. ಕೊರೋನಾ ಸಂದರ್ಭದಲ್ಲಿ ಸರ್ಕಾರದಿಂದ ನೀಡಲಾಗೋ ರೇಷನ್ ಮತ್ತು ಪೆನ್ಶನ್ ಗಳು ಲಸಿಕೆ ಹಾಕಿಸಿಕೊಳ್ಳದ ಕಾರಣ ಸ್ಥಗಿತಗೊಂಡ್ರೆ ಬಡವರ ಪಾಲಿಗೆ ತಣ್ಣೀರ ಬಟ್ಟೆಯೇ ಗತಿ ಅಂತ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು.
ಇನ್ನು ಚಾಮರಾಜನಗರದ ಡಿಸಿಯ ಈ ಆದೇಶಕ್ಕೆ ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಕಾಂಗ್ರೆಸ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ರು. ಆದ್ರೆ ಜಿಲ್ಲಾಧಿಕಾರಿ ರವಿ ತಾವು ಆದೇಶ ಹೊರಡಿಸಿದ್ದು ನಿಜ ಆದರೆ ಅದನ್ನ ಜಿಲ್ಲೆಯಲ್ಲಿ ಜಾರಿಗೊಳಿಸಿಲ್ಲ ಅಂತ ಸಮಜಾಯಿಷಿ ನೀಡಿದ್ದಾರೆ.
ಪ್ರಸಾದ್ , ಕರ್ನಾಟಕ ಟಿವಿ – ಚಾಮರಾಜನಗರ