www.karnatakatv.net:ರಾಜ್ಯ-ಮೈಸೂರು- ರಾಜ್ಯದಲ್ಲಿ ಕೊರೊನಾ ಲಸಿಕೆಯ ಕೊರತೆಯಿಲ್ಲ, ಇದೀಗ ದಿನಕ್ಕೆ ಎರಡೂವರೆಯಿಂದ 3 ಲಕ್ಷ ಕೊರೊನಾ ಲಸಿಕೆ ಕೊಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ರು. ಮೈಸೂರಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿಂದು ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಲೂ ನಮ್ಮ ಬಳಿ 5 ಲಕ್ಷ ವ್ಯಾಕ್ಸಿನ್ ದಾಸ್ತಾನು ಇದೆ. ರಾಜ್ಯದಲ್ಲಿ ಡ್ರೈ ಎನ್ನುವ ಪರಿಸ್ಥಿತಿಯೇ ಬಂದಿಲ್ಲ. ಈ ಸಂಬಂಧ ಕೇಂದ್ರ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಮಾತನಾಡಿದ್ದೇವೆ. ನಾಳೆಯೂ ಮತ್ತಷ್ಟು ಲಸಿಕೆ ರಾಜ್ಯಕ್ಕೆ ಬರಲಿದೆ ಎಂದ್ರು. ಇನ್ನು, ಇಡೀ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಕೊರೊನಾ ವ್ಯಾಕ್ಸಿನ್ ಕೊಟ್ಟಿರುವ ರಾಜ್ಯ ನಮ್ಮದಾಗಿದ್ದು, ಇಡೀ ದೇಶದಲ್ಲೇ 4 ಅಥನಾ 5ನೇ ಸ್ಥಾನದಲ್ಲಿದ್ದೇವೆಂದು ಆರೋಗ್ಯ ಸಚಿವರು ಸ್ಪಷ್ಟನೆ ನೀಡಿದ್ರು. ಈಗಾಗಲೇ ರಾಜ್ಯದಲ್ಲಿ ಒಟ್ಟು 40 ಕೊರೊನಾ ಹಾಟ್ ಸ್ಪಾಟ್‍ಗಳನ್ನ ಗುರುತಿಸಲಾಗಿದೆ. ಈ ಪೈಕಿ ನಗರ ಪ್ರದೇಶದಲ್ಲಿ 20 ಕೊರೊನಾ ಹಾಟ್ ಸ್ಪಾಟ್ ಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ 20 ಕೊರೊನಾ ಹಾಟ್ ಸ್ಪಾಟ್ ಗಳನ್ನ ಗುರುತಿಸಲಾಗಿದೆ.ಇನ್ನು, ಮೈಸೂರಿನಲ್ಲಿ ಪಿರಿಯಾಪಟ್ಟಣ, ಬನ್ನೂರು, ಹನಗೋಡು, ಸೀಹಳ್ಳಿ ಹಾಗೂ ಆಸ್ಪತ್ರೆ ಕಾವರಲ್ ಈ 5 ಕೊರೊನಾ ಹಾಟ್ ಸ್ಪಾಟ್ ಆಗಿವೆ, ಇವುಗಳನ್ನ ಕಂಟೋನ್ಮಂಟ್ ಜೋನ್ ಗಳನ್ನಾಗಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದ್ರು.




