ರಾಷ್ಟ್ರ ಮಟ್ಟದಲ್ಲಿ BJP ಯೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ವಿರೋಧಿಸಿ, JDS ಪಕ್ಷದ ಕೇರಳ ಘಟಕವು, ಹೊಸದಾಗಿ ಸ್ಥಾಪನೆ ಆಗಿರುವ ಭಾರತೀಯ ಸಮಾಜವಾದಿ ಜನತಾದಳದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದೆ. ಆಡಳಿತಾರೂಢ LDF ಮೈತ್ರಿಯ ಭಾಗವಾಗಿರುವ JDS , ISJDಯೊಂದಿಗೆ ವಿಲೀನಗೊಳ್ಳುತ್ತಿರುವ ಕುರಿತು ಇಂಧನ ಸಚಿವ ಕೆ. ಕೃಷ್ಣನ್ ಕುಟ್ಟಿ ಸೇರಿದಂತೆ ಪಕ್ಷದ ಇಬ್ಬರು ಶಾಸಕರು ವಿಧಾನಸಭಾ ಸ್ಪೀಕರ್‌ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
JDS ಕೇರಳ ಘಟಕವು ISJDಯಲ್ಲಿ ಅಧಿಕೃತವಾಗಿ ವಿಲೀನಗೊಳ್ಳುವ ಸಂಬಂಧಿಸಿದ ಸಭೆಯನ್ನು ಇದೇ 17ರಂದು ಕೊಚ್ಚಿಯಲ್ಲಿ ನಡೆಸಲು ನಿರ್ಧರಿಸಿದೆ.JDS ಕೇರಳ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಶಾಸಕ ಮಾಥ ಟಿ. ಥಾಮಸ್, ಪಕ್ಷವು ಸಮೂಹವಾಗಿ ಹೊಸ ಪಕ್ಷದಲ್ಲಿ ವಿಲೀನಗೊಳ್ಳುತ್ತಿರುವುದರಿಂದ, JDS ನ ಇಬ್ಬರು ಶಾಸಕರಿಗೆ ಸದಸ್ಯತ್ವ ಅನರ್ಹತೆ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
2024ರ ಲೋಕಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ JDS ರಾಷ್ಟ್ರೀಯ ನಾಯಕರ ನಿರ್ಧಾರವನ್ನು ವಿರೋಧಿಸಿದ ಪಕ್ಷದ ಒಂದು ಬಣ, ಭಾರತೀಯ ಸಮಾಜವಾದಿ ಜನತಾದಳ ವನ್ನು ಸ್ಥಾಪಿಸಿತು ಎಂದು ಥಾಮಸ್ ವಿವರಿಸಿದರು. ಕೇರಳದ ಜೆಡಿಎಸ್‌ನ ಎಲ್ಲಾ ಜಿಲ್ಲಾ ಘಟಕಗಳು ವಿಲೀನಕ್ಕೆ ಒಪ್ಪಿಗೆ ಸೂಚಿಸಿವೆ. ಜೊತೆಗೆ, ಇತರ ರಾಜ್ಯಗಳಿಂದಲೂ ಸಮಾನ ಮನಸ್ಕ ಕಾರ್ಯಕರ್ತರು ISJDಗೆ ಸೇರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.




