Sunday, May 26, 2024

Latest Posts

ಕಾಂಗ್ರೆಸ್‌ಗೆ ನೋ ವಿಷನ್, ನೋ ಮಿಷನ್. ಕರ್ನಾಟಕ ಕಾಂಗ್ರೆಸ್ ಬರೀ ಪರ್ಸೆಂಟೇಜ್‌ಗೆ ಸೀಮಿತ ಆಗಿದೆ: ಸಿ.ಟಿ.ರವಿ

- Advertisement -

Political News: ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ ಈ ಲೋಕಸಭಾ ಚುನಾವಣೆಯಲ್ಲಿ ಯಾರ ನೇತೃತ್ವದಲ್ಲಿ ಈ ಚುನಾವಣೆ ಸ್ಪರ್ಧೆ ಮಾಡ್ತೀವಿ ಅಂತ.

ಕಾಂಗ್ರೆಸ್ ಬಂದಿಲ್ಲ, ಇಂಡಿ ಒಕ್ಕೂಟವೂ ಬಂದಿಲ್ಲ. ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸ್ತೀವಿ ಅಂತ ಸ್ಪಷ್ಟನೆ ಇಲ್ಲ. ಯಾವ ಪಾಲಿಸಿ ಇಟ್ಟುಕೊಂಡು ಜನರ ಮುಂದೆ ಹೋಗಬೇಕು ಅನ್ನೋ ನೀತಿಯೇ ಇಲ್ಲ. ಅವರದ್ದು ಕೇವಲ ಇಂಟಾಲರೆನ್ಸ್, ಎನಿಮಿಟಿ, ದ್ವೇಷವನ್ನೇ ಅಸ್ತ್ರ ಮಾಡಿಕೊಂಡಿದ್ದಾರೆ. ಅವರ ಭಾಷಣದಲ್ಲಿ ವ್ಯಕ್ತ‌ ಆಗ್ತಿರೋದು ದ್ವೇಷ ಮಾತ್ರ. ಸೋನಿಯಾ ಗಾಂಧಿ ಅವರು, ಗುಜರಾತ್ ನಲ್ಲಿ ಮೌತ್ ಕಾ‌ಸೌದಾಗರ್ ಅಂತ ಹೇಳಿಕೆ ನೀಡಿದ್ರು. ಜನ ಅದಕ್ಕೆ ಉತ್ತರ ಕೊಟ್ರು. ಮಣಿಶಂಕರ್ ಅಯ್ಯರ್ ಚಾಯ್ ವಾಲಾ, ಚಾಯ್ ಬೇಜನೇಕೇಲಿಯೇ ಲಾಯಕ್ ಅಂದಿದ್ರು. ದುಡಿಯುವ ವರ್ಗ ಮೋದಿ ಅವರನ್ನ ಆಯ್ಕೆ ಮಾಡಿ 2019ರಲ್ಲಿ ಮೋದಿ ಅವರನ್ನು ಆಯ್ಕೆ ಮಾಡಿದ್ರು. ಪವನ್ ಕೇರಾ ವಕ್ತಾರ, ಮೋದಿ ಸಾವನ್ನ ಬಯಸಿದ್ರು, ಇಂದಿಗೂ ಕೇಸ್ ಎದುರಿಸ್ತಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರು ಚೋರ್ ಗುರು, ಚಾಂಡಾಳ್ ಶಿಷ್ಯ ಅಂತ ಟ್ವೀಟ್ ಮಾಡಿದ್ರು. ಪರಮೇಶ್ವರ್ ಅವರ ಹೇಳಿಕೆ ಇಲ್ಲಿ ಹೇಳಲು ಆಗಲ್ಲ. ಸಭ್ಯತೆ ರಾಜಕಾರಣಿ ಅಂತರಂಗದಲ್ಲಿ ಸಭ್ಯತೆ ಉಳಿದಿಲ್ಲ ಎನಿಸ್ತಿದೆ. ಶಿವರಾಜ್ ತಂಗಡಗಿ ಹೇಳಿಕೆ, ಅವರಿಗೆ ಸಂಸ್ಕೃತಿ ಇಲ್ಲವೇನೋ ಅನಿಸ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಮನೆ ಹಾಳಾಗ್ಲಿ ಅಂತ‌ ಹೇಳಿದ್ದಾರೆ. ಪಾತಿವ್ರತೆಯರು ಶಾಪ ಹಾಕಿದ್ರೆ ತಟ್ಟುತ್ತೆ. ಸಿದ್ದರಾಮಯ್ಯ ಅವರ ಪಾತಿವ್ರತೆ ಏನು ಅಂತ‌ಗೊತ್ತಿದೆ. ಬಿಜೆಪಿ ಒಂದೇ ಸೀಟು ಗೆಲ್ಲಲಿದೆ ಅಂತ ಶಾಪ ಹಾಕಿದ್ರು. ಅದಕ್ಕೆ ಅವರಿಗೆ ಒಂದೇ ಸೀಟು ಗೆದ್ದಿದ್ರು. ಜನರೇ ಮೋದಿ ಅಂತಿರೋದಕ್ಕೆ ಅಸಹಾಯಕತೆ ಕಾಡ್ತಿರಬಹುದು. ಅಸಹಾಯಕತೆ ಕೈಲಾಗದವನು ಮೈ ಪರಚಿಕೊಂಡ ಅಂತಾರೆ. ಅದು ಅವರಿಗೆ ಅನುಗುಣವಾಗಿದೆ.

ಮೋದಿ ಅವರ ವಿರೋಧ, ಭಾರತದ ಸಹಿಷ್ಣುತೆ ಪ್ರಶ್ನಿಸಿದ್ರು. ಅಂತರಾಷ್ಟ್ರೀಯ ಶಕ್ತಿಗಳು ಮಧ್ಯಪ್ರವೇಶ ಮಾಡಬೇಕು ಅಂತ‌ ಬಯಸಿದ್ರು. ಇಂಡಿಯಾ ಅಲೆಯನ್ಸ್ ಅದನ್ನ ಮುಂದುವರೆಸಿದೆ. ತ.ನಾ ನಲ್ಲಿ ಸ್ಟಾಲಿನ್ ಇಂದ ಹಿಡಿದು, ಅನಿತಾ ರಾಮಸ್ವಾಮಿ ವರೆಗೂ ಹೇಳಿಕೆ ನೀಡ್ತಿದ್ದಾರೆ. ಮೂರನೇ ಬಾರಿಯೂ ಮೋದಿ ಪ್ರಧಾನಿ ಆಗ್ತಾರಲ್ಲ ಅಂತ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ಸುಳ್ಳು ಹೇಳೋದು, ಇನ್ನೊಂದು ದ್ವೇಷ ಕಾರೋದು. ನಾವು ಪ್ರಧಾನಿಗಳಾದವರು ವಿಷನ್ ಇಟ್ಟುಕೊಂಡು, ಮಿಷನ್ ರೂಪದಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಅಮೃತ ಕಾಲದಲ್ಲಿ ಭಾರತ ಎಲ್ಲಾ ರಂಗದಲ್ಲೂ ಬೆಳೆಯಬೇಕು. ಆರ್ಥಿಕ, ಶೈಕ್ಷಣಿಕವಾಗಿ ಎಲ್ಲಾ ರೀತಿಯಲ್ಲಿ. ಅದಕ್ಕೆ ಇಡೀ‌ ವಿಷನ್ ಅನ್ನ, ಅಮೃತ ಕಾಲಕ್ಕೆ‌ ಜೋಡಿಸಿ ಕೆಲಸ‌ ಮಾಡ್ತಿದ್ದಾರೆ. ಕಾಂಗ್ರೆಸ್‌ಗೆ ನೋ ವಿಷನ್, ನೋ ಮಿಷನ್. ಕರ್ನಾಟಕ ಕಾಂಗ್ರೆಸ್ ಬರೀ ಪರ್ಸೆಂಟೇಜ್‌ಗೆ ಸೀಮಿತ ಆಗಿದೆ. ತ.ನಾ ಮೇಕೆದಾಟು ವಿಚಾರವಾಗಿ ಮ್ಯಾನಿಫೆಸ್ಟ್ ಬಿಟ್ರು. ಅದನ್ನ ವಿರೋಧಿಸುವ ಕೆಲಸವೂ ಮಾಡಲಿಲ್ಲ. ನಾವು ನಿಮ್ಮ ಮೈತ್ರಿ ಕಳ್ಕೋತೀವಿ ಅಂತ ಹೇಳಲಿಲ್ಲ. ಹೋಳೆ ಆಟವಾಡಲು ನೀರು ಸಾಲದ ಕಾಲ ಬರುತ್ತೆ ಅಂತ ಅಂದುಕೊಂಡಿರಲಿಲ್ಲ. ದಲಿತ ಸಿಎಂ ಅನ್ನೋ ಅಸ್ತ್ರ ಬಿಟ್ಟು, ಹೇಳಿಕೆ ನೀಡುತ್ತಿದ್ದಾರೆ. ಖರ್ಗೆ, ಮಹದೇವಪ್ಪ, ಪರಮೇಶ್ವರ್ ಇವರನ್ನ ಆಸ್ತ್ರ ಮಾಡಿಕೊಂಡು ಹೇಳಿಕೆ ನೀಡ್ತಿದ್ದಾರೆ. ಜಗತ್ತಿನ ಜಿಡಿಪಿ ಕುಸಿದಾಗ, ಭಾರತದ ಜಿಡಿಪಿ ಗ್ರೋತ್ ಆಗಿದೆ. ಬಡವರಿಗೆ ಮಾಡಿರೋ ಕೆಲಸವನ್ನ ಮುಂದಿಟ್ಟುಕೊಂಡು ಮತ‌ ಕೇಳ್ತೀವಿ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಕಾಂಗ್ರೆಸ್ ನವರು ಹೇಳ್ತಿರೋದು ತೆರಿಗೆ ವಂಚನೆ ಆಗಿದೆ ಅಂತ. ದೆಹಲಿಯಲ್ಲಿ ಜಯರಾಂ ರಮೇಶ್, ಇಲ್ಲಿ ಕೃಷ್ಣಾ ಬೈರೇಗೌಡ ಸುದ್ದಿಗೋಷ್ಟಿ ಮಾಡಿ ಹೇಳಿದ್ದಾರೆ. ನಿರ್ಮಲಾ ಸೀತಾರಾಮನ್ ಸಂಸತ್ನಲ್ಲೇ ಹೇಳಿದ್ದಾರೆ. ವಿಶೇಷ ಅನುದಾನ ನೀಡಿಲ್ಲ ಅಂತ. ಇಲ್ಲದಿದ್ರೆ ಹಕ್ಕು ಚ್ಯುತಿ ಆಗಲಿದೆ. ಇವರು ಒಂದು ಪ್ರಶ್ನೆ ಕೂಡ ಮಾಡಲಿಲ್ಲ. ಹೊರಗೆ ಬಂದು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನ್ಯಾಯಾಲಯದಲ್ಲಿ ಕೂಡ ಪ್ರಶ್ನೆ ಮಾಡಬಹುದು. ಸಿಎಂಗೆ ಪ್ರಶ್ನೆ ಮಾಡ್ತೀನಿ. ನಿಮ್ಮ ಬಳಿ ದಾಖಲೆ‌ ಇದ್ರೆ ಯಾವ ಅನುದಾನ ಕೊರತೆ ಇದೆ ತಿಳಿಸಿ. ದಾಖಲೆ‌ ಇದ್ರೆ ಕೋರ್ಟ್‌ಗೆ ಹೋಗಿ. GST ಕೌನ್ಸಿಲ್ ನಲ್ಲಿ ಪ್ರಶ್ನೆ ಮಾಡಬಹುದು. ಅದು ಬಿಟ್ಟು ಇಲ್ಲಿ ಬಂದು ಜನರ ದಾರಿ ತಪ್ಪಿಸೋ ಕೆಲಸ ಮಾಡ್ತಿದ್ದೀರಿ ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಜನಾರ್ಧನ ರೆಡ್ಡಿ ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿದ ಸಿ.ಟಿ.ರವಿ, ಪ್ರಜಾಪ್ರಭುತ್ವದಲ್ಲಿ ಎಲೆಕ್ಷನ್ ನಂಬರ್ ಗೇಮ್.ಯುದ್ಧ ನೀತಿಯ ಭಾಗ. ರಾಜಕೀಯಕ್ಕಾಗೇ ಸೇರಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕಿಯ ವಿವಾದಾತ್ಮಕ ಹೇಳಿಕೆಗೆ ತಿರುಗೇಟು ಕೊಟ್ಟ ಕಂಗನಾ ರಾಣಾವತ್

ಕಸದ ಟ್ರಕ್ ಡಿಕ್ಕಿ ಲಂಡನ್‌ನಲ್ಲಿ ಭಾರತೀಯ ಪಿಎಚ್‌ಡಿ ವಿದ್ಯಾರ್ಥಿನಿ ಸಾವು

- Advertisement -

Latest Posts

Don't Miss