- Advertisement -
ಉತ್ತರ ಕೊರಿಯಾವು ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಮಾಡಿದ್ದು, ಅದು ಬಹುತೇಕ ವಿಫಲವಾಗಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ.
ಬುಧವಾರ ಬೆಳಗ್ಗೆ 5.30ರ ಸುಮಾರಿಗೆ ಉತ್ತರ ಕೊರಿಯಾ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉತ್ತರ ಪೂರ್ವದ ಕರಾವಳಿ ಸಮುದ್ರದ ಕಡೆಗೆ ಉಡಾಯಿಸಲಾಗಿದೆ. ಆದರೆ ಆ ಉಡಾವಣೆ ಬುಹುತೇಕ ವಿಫಲವಾಗಿದೆ ಎಂದು ಶಂಕಿಸಲಾಗಿದೆ. ಕ್ಷಿಪಣಿ ನೆಲದ ಮೇಲೆ ಅಪ್ಪಳಿಸಿರಬಹುದು ಅಥವಾ ಗಾಳಿಯಲ್ಲಿ ಸ್ಫೋಟಗೊಂಡಿರುವುದು ಎಂದು ವರದಿಯಾಗಿದೆ.
ದರೆ, ಜಪಾನ್ ರಕ್ಷಣಾ ಸಚಿವಾಲಯ, ಉತ್ತರ ಕೊರಿಯಾದ ಶಂಕಿತ ಬ್ಯಾಲಿಸ್ಟಿಕ್ ಕ್ಷಿಪಣಿಯೊಂದನ್ನು ಪತ್ತೆ ಮಾಡಿರುವುದಾಗಿ ಬುಧವಾರ ತಿಳಿಸಿದೆ. ಈ ಕ್ಷಿಪಣಿಯು ಸುಮಾರು 100 ಕಿ.ಮೀ. ಎತ್ತರಕ್ಕೆ ಹಾಗೂ 200 ಕಿ.ಮೀಗೂ ಹೆಚ್ಚು ವ್ಯಾಪ್ತಿಯವರೆಗೆ ಹಾರಿದೆ ಎಂದು ಜಪಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.
- Advertisement -