ನವದೆಹಲಿ: ಕೇಂದ್ರ ಸರ್ಕಾರ ನೀಡಿರುವಂತ ಕೋವಿಡ್ ಸಾವಿನ ಮಾಹಿತಿ ಸುಳ್ಳು. ದೇಶದಲ್ಲಿ ಕೋವಿಡ್ ನಿಂದ 5 ಲಕ್ಷವಲ್ಲ 40 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವಂತ ಅವರು, ಕೊರೋನಾ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದಾಗಿ ಯಾರೂ ಸತ್ತಿಲ್ಲ ಎಂದು ಹೇಳಿದ್ದಾರೆ. ಆದ್ರೇ ಪ್ರಧಾನಿ ಮೋದಿ ಮಾತನಾಡೋದೇ ಇಲ್ಲ. ಅವರನ್ನು ಮಾತನಾಡೋದಕ್ಕೂ ಬಿಡೋದಿಲ್ಲ ಎಂದರು.
ದೇಶದಲ್ಲಿ ಕೋವಿಡ್ ನಿಂದ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಈಗಾಗಲೇ ಹೇಳಿದ್ದೇ, ಸರ್ಕಾರ 5 ಲಕ್ಷ ಎಂದು ಹೇಳುತ್ತಿದೆ. ಆದ್ರೇ 40 ಲಕ್ಷ ಜನರು ಕೊರೋನಾ ಕಾರಣದಿಂದ ಸಾವನ್ನಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಜವಾಬ್ದಾರಿ ಇದ್ದರೇ ಕೊರೋನಾದಿಂದ ಸಾವನ್ನಪ್ಪಿದ್ದಂತ ಎಲ್ಲಾ ಕುಟುಂಬಗಳಿಗೆ ತಲಾ 4 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದರು.




