Sunday, December 22, 2024

Latest Posts

ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಮಾವ, ನಟ ಸತ್ಯ ಉಮ್ಮತ್ತಾಲ್ ಹೃದಯಾಘಾತದಿಂದ ನಿಧನ

- Advertisement -

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಯೋಗರಾಜ್ ಭಟ್ ಅವರ ಮಾವ ಸತ್ಯ ಉಮ್ಮತ್ತಾಲ್ ( 70 ) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಯೋಗರಾಜ್ ಭಟ್ ಜೊತೆಗೆ, ಅವರ ನಿವಾಸದಲ್ಲಿಯೇ ಜೊತೆಗಿದ್ದಂತ ಅವರು, ಇಂದು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿರೋದಾಗಿ ತಿಳಿದು ಬಂದಿದೆ.

ನಟರಾಗಿಯೂ ಸ್ಯಾಂಡಲ್ ವುಡ್ ನಲ್ಲಿ ಗುರ್ತಿಸಿಕೊಂಡಿದ್ದಂತ ಸತ್ಯ ಉಮ್ಮತ್ತಾಲ್ ಅವರು, ದುನಿಯಾ ಸೂರಿ, ಗಣೇಶ್ ಸೇರಿದಂತೆ ಹಲವರೊಂದಿಗೆ ನಟಿಸಿದ್ದರು. ಯೋಗರಾಜ್ ಭಟ್ ನಿರ್ದೇಶನದ ಅನೇಕ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು.

- Advertisement -

Latest Posts

Don't Miss