ಬೆಂಗಳೂರು : ಸಿಎಂ ಬದಲಾವಣೆಯ ಹಿನ್ನೆಲೆಯಲ್ಲಿ ತುಂಬಾ ವದಂತಿಗಳು ಬರುತ್ತಲೇ ಇವೆ, ನನ್ನ ಕೈಯಲ್ಲಿ ಏನು ಇಲ್ಲ ಎಲ್ಲಾ ಹೈಕಮಾಂಡ್ ನಿರ್ದಾರ ಮಾಡಬೇಕು ಎಂದು ಬಿಎಸ್ ವೈ ಅವರು ತಿಳಿಸಿದ್ದಾರೆ,
ಹಾಗೆ ಇದೀಗ ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದು, 30ಕ್ಕೂ ಹೆಚ್ಚು ಸ್ವಾಮೀಜಿಗಳು ಯಡಿಯೂರಪ್ಪ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬಾಲೇಹೊಸೂರಿನ ದಿಂಗಾಲೆಶ್ವರ ಶ್ರೀ ನೇತೃತ್ವದಲ್ಲಿ ಭೋವಿ ಮಠದ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ, ಮಾದಾರ ಮಠದ ಬಸವಮೂರ್ತಿ ಸ್ವಾಮೀಜಿ, ಶಿವಯೋಗಾಶ್ರಮದ ಶರಣಬಸವ ಸ್ವಾಮೀಜಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸ್ವಾಮೀಜಿಗಳು ಸೇರಿದಂತೆ ಹಲವು ಮಠಾಧೀಶರು ಸಿಎಂ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ್ದು, ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ಬಿಎಸ್ ವೈ ಭೇಟಿ ನಂತರ ನಮ್ಮ ಎಲ್ಲರ ಅಭಿಪ್ರಾಯವನ್ನು ಒಟ್ಟಿಗೆ ಹೇಳುತ್ತಿದ್ದೆವೆ ಎಂದು ಹೇಳಿದರು.