Tuesday, October 15, 2024

Latest Posts

ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ನಮ್ಮ ಮೂಲ ಉದ್ಯೋಗ ಎಂದಿಗೂ ಬಿಡಬಾರದು: ಹೊರಟ್ಟಿ

- Advertisement -

Dharwad News: ಧಾರವಾಡ: ಧಾರವಾಡದ ಅಲೂರು ವೆಂಟರಾವ್ ಸಭಾಭವನದಲ್ಲಿ ಜಿಲ್ಲಾಮಟ್ಟದ ವಿಶ್ವಕರ್ಮ ಜಯಂತಿ ಸಮಾರಂಭ ನಡೆಯಿತು.

ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಇತರರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಹೊರಟ್ಟಿ, ರಾಜಕಾರಣದಲ್ಲಿ ಯಾವೂದ ಶಾಶ್ವತ ಅಲ್ಲ. ಇವತ್ತು ಇರುವ ಸ್ಥಾನ ನಾಳೆಗೆ ಹೋಗಬಹುದು. ಹೀಗಾಗಿ ನಮ್ಮ ಮೂಲ‌ ಉದ್ಯೋಗ ಬಿಡಬಾರದು. ನಾನು ಇವತ್ತಿಗೂ ಒಕ್ಕಲುತನ ಬಿಟ್ಟಿಲ್ಲ. ನಮ್ಮದು ಕೃಷಿ ಮೂಲ ವೃತ್ತಿ. ಇಂದಿಗೂ ನಾ ಕೃಷಿ ಮಾಡುವೆ.ರಾಜಕಾರಣದ ಈ ಸ್ಥಾನ ಹೋದರೆ ಕೃಷಿ ಮಾಡುವೆ. ರಾಜಕಾರಣದ ಸ್ಥಾನ ಯಾವಗ ಹೋಗುತ್ತೋ ಬಿಡುತ್ತದೆಯೋ ಗೊತ್ತಿಲ್ಲ. ಇವತ್ತಿನ ರಾಜಕಾರಣ ಬಹಳ ವಿಚಿತ್ರ ಇದೆ. ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವನಿದ್ದಾಗ ಒಂದು ಪ್ರಸಂಗ ಆಗಿತ್ತು. ಸಚಿವನಾಗಿ ಕಾರನಲ್ಲಿ ಬರುವಾಗ ಪರಿಚಯದ ಸ್ನೇಹಿತರು ಕೈ ಮಾಡಿದ್ರಂತೆ. ನಾನು ನಿಂತಿರಲಿಲ್ಲ. ಆಗ ಅವರು ಫೋನ್ ಮಾಡಿ ಯಾಕೆ ನಿಲ್ಲಲಿಲ್ಲ ಅಂತಾ ಕೇಳಿದ್ದರು. ಮುಂದೆ ಪೊಲೀಸ್ ಗಾಡಿ, ಹಿಂದೆ ಮುಂದೆ ಗಾಡಿ ಇರ್ತಾವು ಅಂತೆಲ್ಲ ಅಂದಿದ್ದರು. ಮರುದಿನವೇ ಕ್ಯಾಬಿನೆಟ್ ಸಭೆ ಇತ್ತು. ಅದೇ ವಿಚಾರವಾಗಿ ಆ ಸ್ನೇಹಿತರಿಗೆ ಮರುತ್ತರ ನೀಡಿದ್ದೆ. ನೋಡಾಕ ನಾವು ಬಹಳ ಚೆನ್ನಾಗಿ ಕಾಣುತ್ತೇವೆ. ನಾಳೆ ಸಭೆ ಕರೆದಿದ್ದಾರೆ. ಈ ಮಂತ್ರಿ ಸ್ಥಾನ ನಾಳೆ‌ಇರುತ್ತೋ ಇಲ್ಲವೋ ಗೊತ್ತಿಲ್ಲ ಎಂದಿದ್ದೆ. ಯಾಕಂದ್ರೆ ಯಾವುದೂ ಸ್ಥಿರವಲ್ಲ. ನಮ್ಮ ಮೂಲ ಉದ್ಯೋಗವೇ ಸ್ಥಿರ. ರಾಜಕಾರಣ ಹೋದರೆ ನಾನು ಕೃಷಿ ಮಾಡುವೆ. ನಾವೀಗ ವಿಚಿತ್ರವಾದ ಕಾಲದಲ್ಲಿಯೇ ಬದುಕುತ್ತಿದ್ದೇವೆ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ. ಈ ಮೂಲಕ ತಮ್ಮ ಸ್ಛಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನು ನಾಗಮಂಗಲ ಗಲಾಟೆ ವಿಚಾರದ ಬಗ್ಗೆ ಮಾತನಾಡಿರುವ ಹೊರಟ್ಟಿ, ನಾವೆಲ್ಲ ಸಣ್ಣವರಿದ್ದಾಗ ಅಲಾದೇವರು ಕಳುಹಿಸೋಕೆ ಹೋಗತಿದ್ವಿ. ಅಲ್ಲಿ ಎಲ್ಲಿಯೂ ಜಾತಿ ಅಂತಾ ಇರುತ್ತಿರಲಿಲ್ಲ. ಚೋಂಗೆ ಎಲ್ಲರ ಮನೆಯಲ್ಲಿ ಮಾಡುತ್ತಿದ್ದರು. ಈಗ ಕೆಲವರು ಮಾತ್ರ ಮಾಡ್ತಾರೆ. ಈಗ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣಪತಿ ಇಡಲು ಕೊಟ್ಟರು. ಅದಕ್ಕೆ ಅವರಿಗೆ ಎಷ್ಟು ಗೌರವ ಸಿಕ್ತು ನೋಡಿ. ಆದರೆ ಸಮಾಜದಲ್ಲಿ ಕೆಲವರು ಬೆಂಕಿ ಹಚ್ಚುವವರಿ ಇರ್ತಾರೆ. ಗಲಾಟೆ ಮಾಡೋ ಉದ್ದೇಶವನ್ನೇ ಇಟ್ಟುಕೊಂಡಿದ್ದಾರೆ. ದೇಶದಲ್ಲಿ ಸಾವಿರಾರೂ ಜಾತಿಗಳಿವೆ. ಎಲ್ಲರೂ ಹೊಂದಿಕೊಂಡು ಹೋಗುವ ಕೆಲಸ ಆಗಬೇಕು.

ಎಲ್ಲಿಯವರೆಗೆ ಸಮಾಜಘಾತುಗಳು ಶಕ್ತಿಗಳು ಇರ್ತಾವೋ. ಅಲ್ಲಿವರೆಗೆ ಎಲ್ಲರೂ ಒಂದಾಗುವ ಕೆಲಸ ಆಗುರುವುದಿಲ್ಲ. ಆದ್ದರಿಂದ ಉತ್ತರ ಪ್ರದೇಶದಲ್ಲಿ ಮಾಡಿದಂತೆ ಬಂದೋಬಸ್ತ್ ಮಾಡಬೇಕು. ಶಿಕ್ಷೆ ಆಗುವಂತಹುದು ಆಗಬೇಕು. ಶಿಕ್ಷೆ ಆಗುತ್ತದೆ ಎಂಬ ಗ್ಯಾರಂಟಿಯೇ ಈಗ ಇಲ್ಲ. ನಾಲ್ಕೈದು ದಿನ ಜೈಲಿನಲ್ಲಿದ್ದು ಬಂದು ಬಿಡ್ತಾರೆ. ಇದು ತಪ್ಪಬೇಕು. ಇದು ಎಲ್ಲರ ಕರ್ತವ್ಯ. ಸರ್ಕಾರ ಮಾಡುವ ಕರ್ತವ್ಯವೂ ಮಾಡಬೇಕು. ರಾಜಕಾರಣ ಎಷ್ಟು ಕಲುಚಿತ ಆಗಿ ಹೀಗೆ ಆಗುತ್ತದೆ. ಈ ಸಂಬಂಧ ನಾನೊಂದು ಪತ್ರ ಬರೀತಾ ಇದೇನು. ಈಗಾಗಲೇ ಅರ್ಧ ಪತ್ರ ಅಗಿದೆ. ಸರ್ಕಾರಕ್ಕೆ ಕಳುಹಿಸುತ್ತೇವೆ. ಸೌಹರ್ದತೆಯಿಂದ ಹೋಗುವ ಕೆಲಸ ಮಾಡಬೇಕು. ಎಲ್ಲರೂ ಕೂಡಿ ಇರಬೇಕಾಗುತ್ತದೆ. ಸಭಾಪತಿಯಾಗಿ ನನಗೂ ಜವಾಬ್ದಾರಿ ಇದೆ. ಹೀಗಾಗಿ ಸಿಎಂಗೆ ಪತ್ರ ಬರೆದು ಹೇಳುವೆ ಎಂದು ಹೊರಟ್ಟಿ ಹೇಳಿದ್ದಾರೆ.

ಪ್ರಸಕ್ತ ರಾಜಕಾರಣದ ಬಗ್ಗೆ ಸಭಾಪತಿ ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದು, ಮೊದಲಿನ ಕಾಲ್ಡದಲ್ಲಿ 224 ಎಂಎಲ್‌‌ಎ, 60 ಎಂಎಲ್‌ಸಿ ಮಾಡಿದ್ರೆ ಮುಗಿತು. ಅವರನ್ನು ನೋಡಿ ಮಂತ್ರಿ ಮಾಡಿದ್ರೆ ಮುಗಿತು. ಐದು ವರ್ಷದಲ್ಲಿ ಏನೂ ಮಾಡುತ್ತಿರಲಿಲ್ಲ. ಆದರೆ ಈಗ ಯಾವಾಗ ಏನಾಗುತ್ತದೆ ಗೊತ್ತಾಗುವುದಿಲ್ಲ. ಹೀಗಾಗಿ ನನಗೆ ಆದ ಅನುಭವ ನಾನು ಹೇಳಿಕೊಳ್ಳುತ್ತಿದ್ದೇನೆ. ನಾನು ಗ್ರಾಮೀಣಾಭಿವೃದ್ಧಿ ಮಂತ್ರಿ ಇದ್ದೆ. ಆಗ ಸಹ ನನ್ನ ಖಾತೆ ಬಿಟ್ಟು ಕೊಡಲು ಕೇಳಿದ್ದರು. ಸಚಿವ ಸಂಪುಟ ಸಭೆ ಕರೆದಾಗ ಸಿಎಂ ಕೇಳಿದ್ದರು. ಆಗ ಗ್ರಾಮೀಣಾಭಿವೃದ್ಧಿ ಖಾತೆ ಬಿಟ್ಟು ಕೊಡಲು ಒಪ್ಪಿದ್ದೆ. ಈಗ ರಾಜಕಾರಣದಲ್ಲಿ ಯಾವಾಗ ಏನ ಬೇಕಾದರೂ ಆಗಬಹುದು. ಇವತ್ತು ರಾಜಕಾರಣದಲ್ಲಿ ಮೌಲ್ಯ ಕಡಿಮೆಯಾಗಿದೆ. ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳುತ್ತಾರೆ. ದುಡ್ಡು ತಗೊಂಡ ವೋಟ್ ಹಾಕ್ತಾರೆ. ಇದು ಇರೋವರೆಗೂ ಏನಾದರೂ ಆಗಬಹುದು. ಹೀಗಾಗಿ ನಾನು ಬಹಳ ವಿಚಾರ ಮಾಡುತ್ತಿದ್ದೇವೆ. ಶಾಸಕರಿಗೆ ತರಬೇತಿ ಕೊಡುವ ವಿಚಾರವೂ ಮಾಡುತ್ತಿದ್ದೇವೆ ಎಂದು ಹೊರಟ್ಟಿ ಹೇಳಿದ್ದಾರೆ.

- Advertisement -

Latest Posts

Don't Miss