- Advertisement -
www.karnatakatv.net :ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ನಾರಾದ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ಹಲವು ಶಾಸಕರ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಇದೀಗ ಬಂಗಾಳ ಸ್ಪೀಕರ್ ನೋಟೀಸ್ ಜಾರಿ ಮಾಡಿದ್ದಾರೆ. ಶಾಸಕರ ಮೇಲೆ ಜಾರ್ಜ್‌ಶೀಟ್ ಸಲ್ಲಿಕೆ ಮಾಡುವಾಗ ಸ್ಪೀಕರ್ ಕಚೇರಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಮತ್ತು ತಮ್ಮ ಪೂರ್ವಾನುಮತಿ ಪಡೆದಿಲ್ಲ ಅಂತ ಆರೋಪಿಸಿರೋ ಸ್ಪೀಕರ್ ಬಂಡೋಪಾಧ್ಯಾಯ, ಸೆಪ್ಟೆಂಬರ್ 22 ರಂದು ಸ್ಪೀಕರ್ ಕಚೇರಿಗೆ ಬಂದು ಈ ಬಗ್ಗೆ ಮಾಹಿತಿ ನೀಡಬೇಕು ಅಂತ ಸಿಬಿಐ ಮತ್ತು ಇಡಿ ಅಧಿಕಾರಿಗಳಿಗೆ ಸಮ್ಮನ್ಸ್ ನೀಡಲಾಗಿದೆ.
- Advertisement -