Wednesday, September 24, 2025

Latest Posts

ಕಾದಂಬರಿ ಲೋಕದ ದೈತ್ಯ ಎಸ್‌ ಎಲ್‌ ಬೈರಪ್ಪ ಇನ್ನಿಲ್ಲ

- Advertisement -

ಕನ್ನಡ ಸಾಹಿತ್ಯ ಲೋಕದ ಕಣ್ಮಣಿ, ಸರಸ್ವತಿ ಸಮ್ಮಾನ್‌ ಪುರಸ್ಕೃತ ಸಾಹಿತಿ ಎಸ್‌ ಎಲ್‌ ಭೈರಪ್ಪ ಇಂದು ಇಹಲೋಕ ತ್ಯಜಿಸಿದ್ದಾರೆ. 1931 ರಲ್ಲಿ ಜನಿಸಿದ ಅವರಿಗೆ 94 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭೈರಪ್ಪನವರು ಮಧ್ಯಾಹ್ನ 2.38ಕ್ಕೆ ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಇನ್ನು ಎಸ್​ ಭೈರಪ್ಪ ಅವರ ಅಂತ್ಯಕ್ರಿಯೆ ಶುಕ್ರವಾರ ಅಂದರೆ ಸೆಪ್ಟೆಂಬರ್ 26ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಲಿದೆ. ನಾಳೆ ಮಧ್ಯಾಹ್ನದ ನಂತರ ಎಸ್ ಎಲ್ ಭೈರಪ್ಪ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಮೈಸೂರಿಗೆ ಕೊಂಡೊಯ್ದು ಸಂಜೆ ಮೈಸೂರಿನ ಕಲಾಮಂದಿರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತೆ.

ಬೆಳಕು ಮೂಡಿತು, ದೂರ ಸರಿದರು, ಮತದಾನ, ತಬ್ಬಲಿಯು ನೀನಾದೆ ಮಗ, ಗೃಹಭಂಗ, ನಾಯಿ ನೆರಳು ಈಗೇ ಮುಂತಾದ ಅದ್ಭುತ ಕಾಮಂಬರಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಅವರ ಧರ್ಮಶ್ರೀ ಕಾದಂಬರಿ ಸಂಸ್ಕೃತ , ಮರಾಠಿ ಬಾಷೆಗೆ ಅನುವಾದವಾಗಿದೆ. ವಂಶವೃಕ್ಷ ಕಾದಂಬರಿ ತೆಲುಗು , ಮರಾಠಿ, ಹಿಂದಿ , ಉರ್ದು , ಇಂಗ್ಲಿಷ್ ಬಾಷೆಗೆ ಅನುವಾದವಾಗಿದೆ. ಗೃಹಭಂಗ ಕಾದಂಬರಿಯೂ ಭಾರತದ ಎಲ್ಲಾ 14 ನಿಗದಿತ ಭಾಷೆಗಳು, ಇಂಗ್ಲಿಷ್ ನಲ್ಲಿ ಅನುವಾದವಾಗಿ ಇವತ್ತಿಗೂ ಎಷ್ಟೋ ಜನರ ಅಚುಮೆಚ್ಚಿನ ಕಾದಂಬರಿಯಾಗಿದೆ. ವಂಶವೃಕ್ಷ, ಮತದಾನ, ನಾಯಿ ನೆರಳು ಅವರ ಕಾದಂಬರಿಗಳ ಚಲನಚಿತ್ರಗಳಾಗಿವೆ.

ಇನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಬೈರಪ್ಪನವರ ಕೊಡುಗೆ ಅಪಾರ. 2010 ರಲ್ಲಿ 20 ನೇ ಸರಸ್ವತಿ ಸಮ್ಮಾನ್, 2023 ರಲ್ಲಿ ಪದ್ಮವಿಭೂಷಣ, 2016 ರಲ್ಲಿ ಪದ್ಮ ಶ್ರೀ ಪ್ರಶಸ್ತಿಗೆ ಪುಸ್ಕೃತರು ಆಗಿದ್ದ ಅವರು, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನುಪಡೆದುಕೊಂಡಿದ್ದರು. 2020 ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ತೆಲುಗು ವಿಜ್ಞಾನ ಸಮಿತಿಯಿಂದ ಶ್ರೀ ಕೃಷ್ಣದೇವರಾಯ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ, ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ. ಈಗೇ ನೂರಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಹೆಮ್ಮೆ ಬೈರಪ್ಪನವರಿಗಿದೆ. ಸಾಹಿತಿಗಳ ಸಾವು ನಿಜಕ್ಕೂ ಕನ್ನಡ ಸಾಹಿತ್ಯ ಲೋಕಕ್ಕೆ ಬಹು ದೊಡ್ಡ ನಷ್ಟ ಉಂಟಾಗಿದೆ. ಬಹಳಷ್ಟು ಗಣ್ಯರು ಬೈರಪ್ಪನವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss