Sunday, September 8, 2024

Latest Posts

ವೈವಿಧ್ಯತೆಯೇ ಭಾರತದ ಶಕ್ತಿ, ಭಾರತವೇ ಪ್ರಜಾಪ್ರಭುತ್ವದ ಜನನಿ ಎಂದ ಮೋದಿ

- Advertisement -

Dehali:

ದೇಶದೆಲ್ಲೆಡೆ 75 ರ ಅಮೃತ ಮಹೋತ್ಸವದ ಸಡಗರ. ಎಲ್ಲಡೆ ತಿರಂಗದ ಮೆರುಗು ಮನೆ ಮಾಡಿದೆ.ನಮ್ಮ ದೇಶದ ಪ್ರಧಾನ ಮಂತ್ರಿ  ನರೇಂದ್ರ ಮೋದಿ [Narendra modi]ಅವರು 76ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು.

ತದ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟ ವಿಫಲಗೊಳಿಸಲು ಹತ್ತಾರು ರೀತಿಯಲ್ಲಿ ಪ್ರಯತ್ನಗಳು ನಡೆದವು. ಆದರೆ ಇದು ಭಾರತದ ಹೋರಾಟ. ಇಲ್ಲಿನ ಮಣ್ಣಿನ ಶಕ್ತಿ ಮತ್ತು ಸತ್ವ ಅಂಥದ್ದು. ಯುದ್ಧಗಳನ್ನು ಎದುರಿಸಿದ್ದೇವೆ, ಭಯೋತ್ಪಾದನೆಯ ಸಮಸ್ಯೆ ವಿರುದ್ಧ ಹೋರಾಡುತ್ತಿದ್ದೇವೆ. ಆದರೂ ಅಭಿವೃದ್ಧಿಯ ಪ್ರಯತ್ನಗಳನ್ನು ನಿಲ್ಲಿಸಿಲ್ಲ. ಭಾರತವು ಸದಾ ಮುನ್ನಡೆ ಸಾಧಿಸುತ್ತಲೇ ಇದೆ. ವೈವಿಧ್ಯತೆಯೇ ಭಾರತದ ಶಕ್ತಿ. ಅದು ಶಕ್ತಿಯ ಅದಮ್ಯ ಪ್ರವಾಹವಾಗಿದೆ. ಭಾರತದ ಜೊತೆಗೆ ಪರಂಪರೆಯಿಂದ ಬಂದಿರುವ ಸಾಮರ್ಥ್ಯವಿದೆ ಎನ್ನುವುದು ಜಗತ್ತಿಗೆ ಗೊತ್ತಿಲ್ಲ. ಅದೆಂದರೆ ಭಾರತವೇ ವಿಶ್ವ ಪ್ರಜಾಪ್ರಭುತ್ವದ ಜನನಿ ಎಂಬುದಾಗಿ ದೇಶವನ್ನುದ್ದೇಶಿಸಿ ಮಾತನಾಡಿದರು.

ಸುಮಾರು 250 ಗಣ್ಯ ವ್ಯಕ್ತಿಗಳು ಕೆಂಪು ಕೋಟೆಗೆ ಆಗಮಿಸಿದ್ದು, ಸುಮಾರು 8,000-10,000 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮ ಆಚರಿಸಲು ಕಳೆದ 75 ವಾರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest Posts

Don't Miss