25 ವರ್ಷದ ಜಾಹ್ನವಿ ಕಪೂರ್ ಸದ್ಯ ಸಿಕ್ಕಾಪಟ್ಟೆ ಬ್ಯುಸಿ ಸೌತ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಕೆಲ ತಿಂಗಳಿನಿಂದ ಸುದ್ದಿಯಾಗಿತ್ತು. ಯಂಗ್ ಟೈಗರ್, ಪ್ಯಾನ್ ಇಂಡಿಯಾ ಹೀರೋ ಎನ್ಟಿಆರ್ ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಡುತ್ತಿರುವುದು ನಿಶ್ಚಿತವಾಗಿದೆ.

ಎನ್ಟಿಆರ್ 30 ನಲ್ಲಿ ನಾಯಕಿಯಾಗಿ ನಟಿಸುತ್ತಿರುವ ಜಾಹ್ನವಿ ಕಪೂರ್, ಈ ಚಿತ್ರಕ್ಕೆ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ .

ಎನ್ಟಿಆರ್ ಚಿತ್ರಕ್ಕೆ ಜಾಹ್ನವಿ ಪಡೆಯಲಿರುವ ಸಂಭಾವನೆ ಮೂರೂವರೆ ಕೋಟಿ ರೂಪಾಯಿ (3.5 crores) ಎನ್ನುವ ಸುದ್ದಿಯಿದೆ. ಇದು ನಿಜವೇ ಆಗಿದ್ದರೆ, ಇಲ್ಲಿಯವರೆಗೆ ಜಾಹ್ನವಿ ಮಾಡಿರುವ ಚಿತ್ರಗಳಲ್ಲಿನ ಅತಿ ಹೆಚ್ಚು ಸಂಭಾವನೆ ಎನಿಸಲಿದೆ. ಹೊಸದಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ 25 ವರ್ಷದ ಯುವನಟಿಯೊಬ್ಬಳು ಇಷ್ಟೊಂದು ಸಂಭಾವನೆ ಪಡೆಯುವುದು ಕೂಡ ದಾಖಲೆ ಎನ್ನಲಾಗುತ್ತಿದೆ




