www.karnatakatv.net : ಓಂ ಶ್ರೀ ಸೂರ್ಯಾಯ ನಮಃ, ಓಂ ಶ್ರೀ ರವಿಯೇ ನಮಃ, ಓಂ ಶ್ರೀ ಅರ್ಕಾಯ ನಮಃ, ಓಂ ಶ್ರೀ ಭಾಸ್ಕರಾಯ ನಮಃ. ಸೂರ್ಯನಿಗೂ ಇಡೀ ಭೂಮಿಗೂ ಸಂಭಂಧವಿದೆ. ಸೂರ್ಯ ಪ್ರತಿಯೊಬ್ಬನ ಜೀವನದಲ್ಲೂ ಸೂರ್ಯ ತನ್ನದೇ ಆದ ಪ್ರಭಾವ ಬೀರ್ತಾನೆ, ಸೂರ್ಯ ಹುಟ್ಟಲು ಮುಂಚೆ ಎದ್ದೇಳುವವರು ಜೀವನದಲ್ಲಿ ಅತೀ ದೊಡ್ಡ ಯಶಸ್ಸು ಸಂಪಾದಿಸ್ತಾರೆ.
ನೇಮಿಯಾಲಾಜಿ ಮತ್ತು ನ್ಯೂಮರಲಾಜಿ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ನೇಮಿಯಾಲಜಿ ಅಂದ್ರೆ ಅಂಕಿತ ಶಾಸ್ತ್ರ. ನ್ಯೂಮರಲಾಜಿ ಅಂದ್ರೆ ಸಂಖ್ಯಾಶಾಸ್ತ್ರ. ಇದರ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ನ್ಯೂಮರಾಲಜಿ ಅಂದ್ರೆ ಅಂಕಿಗಳ ಲೆಕ್ಕಾಚಾರದ ಆಧಾರದ ಮೇಲೆ ಬದಲಾವಣೆ ಅಥವಾ ವ್ಯತ್ಯಾಸ ಮಾಡುತ್ತಾರೆ. ಅಂಕಿತ ಶಾಸ್ತ್ರ ಅಂದ್ರೆ ವೈಬ್ರೇಷನ್ಸ್ ಮೇಲೆ ಕೆಲಸ ಮಾಡುವ ಲೆಕ್ಕಾಚಾರ. ಮಾತು, ಕೇಳಿಸಿಕೊಳ್ಳುವುದು ಮತ್ತು ಬರವಣಿಗೆಯ ಮೂಲಕ ಮೆದುಳಲ್ಲಿ ಉಂಟಾಗುವ ವೈಬ್ರೇಷನ್ಸ್ ಮೂಲಕ ನಿರ್ಧಾರ ಮಾಡುವ ವಿಧಾನ.
ದಕ್ಷಿಣ ಭಾರತದ ಹೆಸರುಗಳು ಮಾತ್ರ ಹೆಚ್ಚು ವಿಭಿನ್ನವಾಗಿರುತ್ತದೆ. ಉದಾಹರಣೆಗೆ ಮಂಜುನಾಥ್, ಶಂಕರ್, ಪ್ರವೀಣ್, ಚೇತನ್ ಅನ್ನೋ ಹೆಸರುಗಳು ಇರುತ್ತದೆ. ಆದ್ರೆ ಉತ್ತರಭಾರತದ ಕಡೆ ಎರಡು ಅಥವಾ ಮೂರು ಹೆಸರುಗಳು ಇರುತ್ತದೆ. ಉದಾಹರಣೆಗೆ ಸಚಿನ್ ತೆಂಡುಲ್ಕರ್, ಅಮಿತಾಭ್ ಬಚ್ಚನ್, ಮಹೇಂದ್ರ ಸಿಂಗ್ ಧೋನಿ ಹೀಗೆ ಹೆಸರು ಸಾಕಷ್ಟು ಉದ್ದವಿರುತ್ತದೆ. ಇದು ಅವರು ಹುಟ್ಟುವ ತಾರೀಖಿನ್ನು ಅವಲಂಭಿಸಿ ಗ್ರಹಗತಿಗಳನ್ನು ನೋಡಿ ಹೆಸರು ಇಡಲಾಗುತ್ತದೆ. ಇದು ಅವರಲ್ಲಿ ವೈಬ್ರೇಷನ್ಸ್ ನೀಡಿ ಅವರ ಉನ್ನತಿ ಅಥವಾ ಹಿನ್ನಡೆಗೆ ಕಾರಣವಾಗುತ್ತದೆ.
ನೇಮಿಯಾಲಾಜಿ ಪ್ರಕಾರ 7ನೇ ತಾರೀಖಿನಲ್ಲಿ ಹುಟ್ಟಿದವರು ಪಾಸಿಟಿವ್ ವೈಬ್ರೇಷನ್ಸ್ ಹೊಂದಿರುತ್ತಾರೆ. ಆದರೆ ಅವರು ಸಮುದ್ರ ಉಲ್ಲಂಘನೆ ಮಾಡಿದ್ರೆ ಉತ್ತಮ ಸಾಧನೆ ಮಾಡ್ತಾರೆ. ಉದಾಹರಣೆಗೆ ಮಹೇಂದ್ರ ಸಿಂಗ್ ಧೋನಿ ಹುಟ್ಟಿದ್ದು 7-7-1981ರಲ್ಲಿ. ಅವರ ಜನ್ಮ ದಿನಾಂಕ ಮತ್ತು ಹೆಸರಿನ ಮೋಡಿ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿದೆ. ಅಂದಹಾಗೇ ಅವರಿಗೆ ಸೋಲೇ ಇಲ್ಲ ಅಂತಲ್ಲ. ಅವರಿಗೆ ತಲೆ ಭಾಗಕ್ಕೆ ಹೆಚ್ಚು ಅಪಾಯವಾಗುವ ಸಾಧ್ಯತೆ ಇದೆ.
ಸಂಖ್ಯಾಶಾಸ್ತ್ರಕ್ಕೆಬರೋಣ. ಜಗತ್ತೇ 9 ಸಂಖ್ಯೆಗಳೂ ಮಾತ್ರ ಇವೆ ಎಂದು ಒಪ್ಪಿಕೊಂಡಿವೆ. ಗ್ರಹಗಳು ಕೂಡ ಇರುವುದು 9 . ಇದನ್ನು ಜ್ಯೋತಿಷ್ಯ ಕೂಡ ಒಪ್ಪಿಕೊಂಡಿದೆ. 9 ಸಂಖ್ಯೆಗೆ ತನ್ನದೇ ಆದ ವಿಭಿನ್ನ ಶಕ್ತಿ ಇದೆ. ವಿಭಿನ್ನ ವೈಬ್ರೇಷನ್ಸ್ ಗಳು ಇವೆ. ನಂಬರ್ ಗಳಲ್ಲಿ ಯಾವುದೇ ಕೆಟ್ಟದ್ದು ಒಳ್ಳೆಯದ್ದು ಅನ್ನುವುದಿಲ್ಲ. ಆದ್ರೆ ಅದರೊಳಗಿರುವ ಒಳ್ಳೇಯದು ಮತ್ತು ಕೆಟ್ಟದ್ದನ್ನು ಗುರುತಿಸಿಕೊಳ್ಳಬೇಕು ಅಷ್ಟೇ.
ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ