ಬೆಂಗಳೂರು: ನಗರದಲ್ಲಿ ಸಿಲಿಕಾನ್ ಸಿಟಿಯ ಜನತೆ ಬೆಟ್ಟಿ ಬೀಳುವಂತ ಘಟನೆಯೊಂದು ನಡೆದಿದೆ. ಬೆಳಗಿನ ಜಾವ ಮನೆಯ ಕಾಲಿಂಗ್ ಬೆಲ್ ಒತ್ತಿದ ಕಾರಣ, ಯಾರೋ ಬಂದಿದ್ದಾರೆ ಎಂದು ನಿದ್ದೆಗಣ್ಣಿನಲ್ಲಿ ಬಾಗಿಲು ತೆಗೆದಂತ ನರ್ಸಿಂಗ್ ವಿದ್ಯಾರ್ಥಿನಿಯ ಮೇಲೆ, ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರೋ ಘಟನೆ ಈಜಿಪುರದಲ್ಲಿ ನಡೆದಿದೆ.
ಬೆಂಗಳೂರಿನ ಈಜಿಪುರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬೆಳಗಿನ ಜಾವ ನರ್ಸಿಂಗ್ ವಿದ್ಯಾರ್ಥಿನಿಯಿದ್ದಂತ ಮನೆಯ ಕಾಲಿಂಗ್ ಬೆಲ್ ಒತ್ತಿದ್ದಾನೆ. ನಿದ್ದೆಯ ಮಂಪರಿನಲ್ಲಿಯೇ ಯಾರೋ ಬಂದಿರಬೇಕು ಎಂದು ಬಾಗಿಲು ತೆಗೆದಾಗ, ದಿಢೀರ್ ಒಳಗೆ ನುಗ್ಗಿದ್ದಾನೆ.
ನರ್ಸಿಂಗ್ ವಿದ್ಯಾರ್ಥಿನಿಯ ಮೇಲೆ ಬಿದ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಯುವತಿ ಇದರಿಂದ ತಪ್ಪಿಸಿಕೊಳ್ಳೋದಕ್ಕೆ ದುಡ್ಡು ಕೊಡ್ತೀನಿ ಬಿಡು ಅಂದ್ರು ಬಿಟ್ಟಿಲ್ಲ. ಆಗ ಯುವತಿ ರಕ್ಷಣೆಗಾಗಿ ಕಿರುಚಾಡಿದ್ದಾಳೆ. ಈ ಕಿರುಚಾಟ ಕೇಳಿದಂತ ಅಕ್ಕಪಕ್ಕದ ಮನೆಯವರು ಓಡಿ ಬಂದಾಗ, ಕಾಮುಕನ ಕೀಚಕ ಕೃತ್ಯ ಕಂಡಿದೆ.
ಕೂಡಲೇ ಆತನನ್ನು ಥಳಿಸಿ, ಕಾಮುಕ ಅಪರಿಚಿತನನ್ನು ವಿವೇಕ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




