Friday, July 11, 2025

Latest Posts

ಪೌಷ್ಟಿಕ ಆಹಾರ ತುಂಬಾ ಮುಖ್ಯ..!

- Advertisement -

www.karnatakatv.net :ತುಮಕೂರು :ಆರೋಗ್ಯ ಇರೋದು ಅಡುಗೆ ಮನೆಯಲ್ಲೇ ಹೊರತು ರಸ್ತೆಯ ಬದಿಯ ಜಂಗ್ ಫುಡ್ ನಲ್ಲಿ ಅಲ್ಲ. ರಾಗಿಗಿಂತ ದೊಡ್ಡ ಮಟ್ಟದ ಪೌಷ್ಟಿಕಾಂಶ ಬೇರೆ ಯಾವುದರಲ್ಲಿ ಸಿಗುವುದಿಲ್ಲ ಎಂದು ಗುಬ್ಬಿ ಸಿವಿಲ್ ನ್ಯಾಯಾಲಯದ ನ್ಯಾಯಮೂರ್ತಿ ಹುಂಡಿ ಮಂಜುಳಾ ಶಿವಪ್ಪ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆ ಗ್ರಾಮದಲ್ಲಿ ತಾಲೂಕು ಆಡಳಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾನೂನು ಸೇವಾ ಸಮಿತಿ ವತಿಯಿಂದ ಪೋಷಣ್ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾಯಮೂರ್ತಿ ಹುಂಡಿ ಮಂಜುಳಾ ಶಿವಪ್ಪ, ಹಳ್ಳಿಯಲ್ಲಿ ಸಿಗುವಂತ ಸೊಪ್ಪು ತರಕಾರಿ ಹಣ್ಣುಗಳು ತಿನ್ನುವ ಕೆಲಸ ಮಾಡಬೇಕು ಹಿಂದಿನ ಜನರು ಸಾಕಷ್ಟು ಗಟ್ಟಿಯಾಗಿದ್ದರು. ಆದರೆ ನಾವು ಅಷ್ಟು ಗಟ್ಟಿಯಾಗಿ ಇರುವುದಕ್ಕೆ ಸಾಧ್ಯವಾಗುತಿಲ್ಲ ನೀವು ಬೆಳೆಯುವ ತರಕಾರಿ ,ಸೊಪ್ಪು, ತಿನ್ನುವ ಹಣ್ಣುಗಳಿಗೆ ರಾಸಾಯನಿಕ ಗಳನ್ನು ಯಾವತ್ತೂ  ಬಳಸಬೇಡಿ ಇದರಿಂದ ನಾವು ಅನ್ನ ತಿನ್ನುವ ಬದಲು ವಿಷ ತಿನ್ನುವ ಸ್ಥಿತಿ ನಿರ್ಮಾಣವಾಗಿದೆ ಇಂತಹ ಆಹಾರ ತಿನ್ನುವುದ್ರಿಂದ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಕಾಣುತ್ತಿದ್ದೇವೆ ಹಾಗಾಗಿ ಸಮತೋಲನ ಆಹಾರ ಸೇವೆನೆ ಮಾಡಿದಾಗ ಮಾತ್ರ  ನಾವು ಆರೋಗ್ಯವಾಗಿ ಬದುಕುತ್ತೇವೆ ಡಾಕ್ಟರ್ ನಿಂದ ಆಸ್ಪತ್ರೆಯಿಂದ ದೂರ ವಿರಬೇಕು ಎಂದರೆ ಆಹಾರ ಬಹಳ ಮುಖ್ಯ ಎಂದು ತಿಳಿಸಿದರು.

ಸಿಡಿಪಿಓ ಮಂಜುನಾಥ ಮಾತನಾಡಿ, ಗರ್ಭಿಣಿ ಅದಾಗಿನಿಂದ ಮಗು ಎರಡು ವರ್ಷ ಆಗುವವರೆಗೂ ಸಮತೋಲನ ಆಹಾರ ಬಹಳ ಮುಖ್ಯವಾಗಿದೆ ಪೌಷ್ಟಿಕ ಆಹಾರ ಬಹಳ ಮುಖ್ಯವಾಗಿದ್ದು  ಸರ್ಕಾರ ಸಹ ಅಂಗನವಾಡಿ ಗಳಲ್ಲಿ ಮಕ್ಕಳಿಗೆ ಸಾಕಷ್ಟು ವಿವಿಧ ರೀತಿಯ ಆಹಾರ ಪಾಧಾರ್ಥ ಗಳನ್ನು ನೀಡುತ್ತಾರೆ  ಬೇರೆ ಜನರಿಗಿಂತ ನಮ್ಮ ಕಾರ್ಯಕರ್ತರು ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡು ನಿಮ್ಮ ಸುತ್ತಮುತ್ತಲಿನ ಜನರಿಗೂ ಸಹ ಇದರ ಬಗ್ಗೆ ತಿಳಿಸಬೇಕೆಂದರು.

ಸಂದರ್ಭದಲ್ಲಿ  ಹಿರಿಯ ಸಿವಿಲ್ ನ್ಯಾಯಮೂರ್ತಿ ಶಿವರಾಜು ವಿ ಸಿದ್ದೇಶ್ವರ, ಸಿವಿಲ್ ನ್ಯಾಯಮೂರ್ತಿ ಪ್ರೇಮ ಕುಮಾರ್, ಪೋಷಣ ಅಭಿಯಾನದ ನೂಡಲ್ ಅಧಿಕಾರಿ ಲತಾ,ಬಿದರೆ ವಲಯದ ಮೇಲ್ವಿಚಾರಕಿ ಶಿವಮ್ಮ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ವಕೀಲ ಸಂಘದ ಅಧ್ಯಕ್ಷ ಕೆ.ವಿ ನಾರಾಯಣ್,ಸೇರಿದಂತೆ ಇನ್ನಿತರರು ಹಾಜರಿದ್ದರು

ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ-ತುಮಕೂರು

- Advertisement -

Latest Posts

Don't Miss