www.karnatakatv.net: ಚಾಮರಾಜನಗರ: ನಗರದ ಹನೂರು ಪಟ್ಟಣದ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಬಾವಲಿಗಳಿಂದ ನಿಫಾ ವೈರಸ್ ಭೀತಿ ಸಾರ್ವಜನಿಕರಿಂದ ವ್ಯಕ್ತವಾಗಿದ್ದ ಹಿನ್ನೆಲೆ ಡಿ ಎಚ್ ಒ ವಿಶ್ವೇಶ್ವರಯ್ಯ ಅವರು ಭೇಟಿ ನೀಡಿ ನಿಫಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಹನೂರು ಪಟ್ಟಣದಲ್ಲಿ ಕಳೆದ ಹಲವು ವರ್ಷಗಳಿಂದ ಅರಣ್ಯ ಇಲಾಖೆ ಕಚೇರಿಯ ಆವರಣದಲ್ಲಿ ಬಾವಲಿಗಳು ಬಿಡು ಬಿಟ್ಟುಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದೆ, ಆದರೆ ರಾತ್ರಿ ವೇಳೆ ಸಂಚಾರ ನಡೆಸಿ, ಬೆಳಿಗ್ಗೆ ವೇಳೆ ಮರದಲ್ಲಿ ನೇತಾಡುತ್ತದೆ ಆದರೆ ಕೇರಳದಲ್ಲಿ ಬಾಲಕ ನೋರ್ವ ನಿಫಾ ವೈರಸ್ ಗೆ ಬಲಿಯಾಗಿರುವ ಹಿನ್ನೆಲೆ ಪಟ್ಟಣದ ಜನತೆಯಲ್ಲಿ ಆತಂಕ ಮನೆ ಮಾಡಿದೆ, ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಬಾವಲಿಗಳನ್ನು ಸ್ಥಳಾoತರಿಸುವಂತೆ ಪಟ್ಟಣದ ಜನತೆಯಿಂದ ಆಕ್ಷೇಪ ಕೇಳಿ ಬಂದಿತ್ತು, ಈ ಹಿನ್ನಲೆಯಲ್ಲಿ ಜಿಲ್ಲಾ ಅರೋಗ್ಯ ಅಧಿಕಾರಿ ವಿಶ್ವೇಶ್ವರಯ್ಯ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು, ಈ ಸಂಬಂಧ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರೋಗ್ಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಲಹೆ ಸೂಚನೆ ನೀಡಿದರು.
ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ